ಎಬಿವಿಪಿಯಿಂದ  ಉಚಿತ ಅರೋಗ್ಯ ತಪಾಸಣೆ

ದಾವಣಗೆರೆ. ಜು.16;  ದೊಡ್ಡ ಬಾತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಾವಣಗೆರೆ ವಿಭಾಗದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದಾವಣಗೆರೆ ವತಿಯಿಂದ ಹಾಗೂ ದೊಡ್ಡಬಾತಿ ತಪೋವನ ಆರ್ಯುವೇದ ಯೋಗ ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಆಯೋಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸ ಲಾಗಿತ್ತು. ಆರೋಗ್ಯ ಶಿಬಿರದಲ್ಲಿ ಪ್ರಾಚಾರ್ಯರಾದ ಶ್ರೀಮತಿ ಮಂಜುಳಾ. ಬಿ. ಆರ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿಭಾಗ ಸಂಘಟನಾ ಕಾರ್ಯದರ್ಶಿ  ಮಂಜುನಾಥ ಕೊಳ್ಳೇರ ,ರಾಜ್ಯ ಕಾರ್ಯಕಾರಣಿ ಸದಸ್ಯ  ಕೊಟ್ರೇಶ್, ನಾಗೇನಹಳ್ಳಿ ವರುಣ್, ಜಿಲ್ಲಾ ಸಂಚಾಲಕ  ಶರತ್, ಸಹ ಸಂಚಾಲಕ ತಪೋವನದ ವೈದ್ಯರುಗಳಾದ ಡಾ. ಸ್ವಾತಿ, ಡಾ. ಅಲಿನಾ, ಡಾ. ಭಾಗ್ಯಶ್ರೀ, ಡಾ. ಭೂಮಿಕಾ ರೆಡ್ಡಿ, ಡಾ. ನೂರಿನ ಲೂಬ್ನ ಹಾಗೂ ಶಿಬಿರದ ಆಯೋಜಕ  ವಿಜಯ ರಾಮ್ ಯೋಗ ಉಪನ್ಯಾಸಕರು ಮತ್ತು ಸರಕಾರಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.