ಎಬಿಡಿ, ಮ್ಯಾಕ್ಸ್ ವೆಲ್ ಅಬ್ಬರ; ಆರ್ ಸಿಬಿಗೆ ಹ್ಯಾಟ್ರಿಕ್ ಗೆಲುವು

ಚೆನ್ನೈ , ಏ.18- ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ‌ ಎ.ಬಿ. ಡಿವಿಲಿಯರ್ಸ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ವಿರುದ್ಧ ಆರ್ ಸಿಬಿ 38 ರನ್ ಗಳಿಂದ ಭರ್ಜರಿ ಜಯ‌ ದಾಖಲಿಸಿದೆ.
ಈ ಗೆಲುವಿನೊಂದಿಗೆ ಐಪಿಎಲ್ ನಲ್ಲಿ ಆರ್ ಸಿಬಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.


ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಮ್ಯಾಕ್ಸ್ ವೆಲ್ 49 ಎಸೆತಗಳಲ್ಲಿ 9 ಬೌಂಡರಿ ಮೂರು ಸಿಕ್ಸರ್ ಬಾರಿಸಿ 78 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ಎಬಿ ಡಿಲಿವಿಲಿಯರ್ಸ್ 34 ಎಸೆತಗಳಲ್ಲಿ 9 ಬೌಂಡರಿ ಮೂರು ಸಿಕ್ಸರ್ ಸಿಡಿಸಿ ಅಜೇಯ 76 ರನ್ ಗಳಿಸಿದರು. ಪಡಿಕ್ಕಲ್ 25 ರನ್ ಗಳಿಸಿದರು.
ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ಕೆಕೆ ಅರ್ 20 ಟವರ್ ಗಳಲ್ಲಿ ಎಂಟು ವಿಕೆಟ್ ಗೆ 166
ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇದರೊಂದಿಗೆ ಮೊರ್ಗನ್ ಪಡೆಯ ಕಳಪೆ ಆಟ ಮುಂದುವರಿದಿದೆ.ಆಂಡ್ರಿ ರಸೆಲ್ 31, ಮಾರ್ಗನ್ 29, ರಾಹುಲ್ ತ್ರಿಪಾಠಿ 25 ಹಾಗೂ ಶಕೀಬ್ ಹಸನ್ 26 ರನ್ ಗಳಿಸಿದರು.‌ ಆದರೆ ಗೆಲುವಿಗೆ ಅಗತ್ಯವಿದ್ದ ಆಟವನ್ನು ಕೆಕೆ ಆರ್ ಆಡಲಿಲ್ಲ.
ಆರ್ ಸಿಬಿ‌ ಪರ ಜಾಮಿಸನ್ ಮೂರು , ಚಹಲ್ ಹಾಗೂ ಹರ್ಷಲ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.