ಎಫ್.ಪಿ.ಎ.ಐನಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ

ಬೀದರ್: ಜೂ.26:ರೋಟರಿ ಕ್ಲಬ್ ಆಫ್ ಬೀದರ್ ಕ್ವೀನ್ಸ್ ವತಿಯಿಂದ ಭಾರತೀಯ ಕುಟುಂಬ ಯೋಜನಾ ಸಂಘದ ಶಾಖೆ ಆವರಣದಲ್ಲಿ ಸ್ತನ ಕ್ಯಾನ್ಸರ್ ತಪಾಸಣೆ ಶಿಬಿರ ಜರಗಿತ್ತು.

ಎಫ್ ಪಿ ಎ ಏ ನ ವ್ಯವಸ್ಥಾಪಕ ಶ್ರೀನಿವಾಸ್ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಆಫ್ ಕ್ವೀನ್ಸ್ ನ ಅಧ್ಯಕ್ಷೆ ಡಾ.ಸುಜಾತಾ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದಲ್ಲಿ ಡಾ ಆಕಾಶ, ಮೆರ್ರಿ ಸಿಸ್ಟರ್, ಡಾ.ಚಿನ್ನಮ್ಮ ವಿನಾಯಕ ಕುಲಕರ್ಣಿ, ವಿಜಯಲಕ್ಷ್ಮಿ ಸೇರಿದಂತೆ ರೋಟರಿ ಕ್ಲಬ್ ನ ಇತರೆ ಸದಸ್ಯರು ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 25ಕ್ಕೂ ಅಧಿಕ ರೋಗಿಗಳನ್ನು ತಪಾಸಣೆ ಮಾಡಲಾಯಿತು.