ಎಫ್.ಆರ್.ಪಿ ಕಬ್ಬಿನ ದರ ನಿಗದಿ ಮಾಡಿದರೇ ಕಾರ್ಖಾನೆಗೆ ಕಬ್ಬು

ಆಳಂದ:ನ.12:

ಕೇಂದ್ರ ಸರಕಾರ ನಿಗದಿ ಮಾಡಿದ ಎಪ್.ಆರ್.ಪಿ ದರದಲ್ಲಿ ಕಬ್ಬು ಖರೀದಿ ಮಾಡಬೇಕು ಇಲ್ಲವಾದರೆ ಹೆಚ್ಚಿನ ದರ ಕೊಡುವ ಕಾರ್ಖಾನೆಗಳಿಗೆ ಕಬ್ಬು ಕೊಡಬೇಕಾಗುತ್ತದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆಗ್ರಹಿಸಿದ್ದಾರೆ.

ಬುಧವಾರ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆಗೆ ರೈತರರೊಂದಿಗೆ ಆಗಮಿಸಿದ ಅವರು ಕಾರ್ಖಾನೆ ರಾಧಾಕೃಷ್ಣ ಅವರೊಂದಿಗೆ ಮಾತುಕತೆ ನಡೆಸಿ ಕಾರ್ಖಾನೆ 10 ಕಿ.ಮೀ ವ್ಯಾಪ್ತಿಯಲ್ಲಿ ಶೇ 40 ರಷ್ಟು ಕಬ್ಬು ರೈತರು ಸ್ವಂತ ಕಟ್ಟಾವು ಮಾಡಿಕೊಂಡು ಕಾರ್ಖಾನೆಗೆ ಬಂದರೆ ಅವರಿಗೆ ಪ್ರತಿ ಟನ್ ಎಪ್.ಆರ್.ಪಿ ದರದ ಪ್ರಕಾರ 2756 ರೂ. ಕೊಡಬೇಕು. ನೀವು ಕಾರ್ಖಾನೆ ಅವರು ಕಟ್ಟಾವು ಮಾಡಿಕೊಂಡು ಬಂದರೆ 800 ರಿಂದ 900 ಕಡಿತ ಮಾಡುತ್ತೀದ್ದಿರಿ ಇದು ಆಗಬಾರದು ಕಬ್ಬು ಸರಿಯಾಗಿ ಇಳುವರಿ ಬಂದರೆ ಸಮಯಕ್ಕೆ ತಕ್ಕಂತೆ ಕಟ್ಟಿಂಗ್ ಆರ್ಡರ್ ಕೊಡಬೇಕು. ಈ ವರ್ಷ ಮಳೆ ಪ್ರಮಾಣ ಹೆಚ್ಚಾಗಿದ್ದು. ಕಬ್ಬು ನೆಲಕ್ಕೆ ಉರುಳಿವೆ. ಅವು ಎಲ್ಲವೂ ತೆಗೆದುಕೊಳ್ಳಬೇಕು. ಕಬ್ಬು ಸಾಗಾಣಿಕೆಯಲ್ಲಿ ರೈತರ ಮೋಸ ಆಗುತ್ತಿದೆ. ಅದನ್ನು ಕೂಡಲೇ ನಿಲ್ಲಬೇಕು. ಕಬ್ಬಿನ ದರ ನಿಗದಿ ಪಡಿಸಿ ರೈತರಲ್ಲಿ ತೋಡಗಿದ ಗೊಂದಲ ಸರಿ ಪಡಿಸಬೇಕೆಂದು ಸಲಹೆ ನೀಡಿದರು.

ಎನ್.ಎಸ್.ಎಲ್. ಕಾರ್ಖಾನೆ ಉಪಾಧ್ಯಕ್ಷ ರಾಧಾಕೃಷ್ಣಾ ಮಾತನಾಡಿ ನಮ್ಮ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಕೊಂಡು 3 ದಿನದಲ್ಲಿ ಕಬ್ಬಿನ ದರ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನೂತನ ಸದಸ್ಯರಾದ ಧರ್ಮರಾಜ ಸಾಹು, ಶಿವರಾಜ ಪಾಟೀಲ್, ಶಿವಪುತ್ರಪ್ಪ ಕೊಟ್ಟರಕಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣಗೌಡ ಪಾಟೀಲ್ ಕೋರಳ್ಳಿ ಹಾಗೂ ಶರಣಗೌಡ ಪಾಟೀಲ, ಶಾಂತಮಲ್ಲಪ್ಪ ನೇಲೂರ ಸೇರಿದಂತೆ ಧಂಗಾಪೂರ, ಬಟ್ಟರಗಾ, ನಿಂಬರ್ಗಾ, ಭೂಸನೂರ, ಕೋರಳ್ಳಿ, ಧುತ್ತರಗಾಂವ ಸೇರಿದಂತೆ ರೈತರು ಉಪಸ್ಥಿತರಿದ್ದರು.