ಎಫ್‍ಐಡಿ ನೊಂದಣಿ ಇಲ್ಲದ ರೈತರಿಗೆ ಬರ ಪರಿಹಾರವಿಲ್ಲ: ನೊಂದಣಿ ಮಾಡಿಸುವಂತೆ ಕೃಷಿ ಇಲಾಖೆ ನಿರ್ದೇಶಕರ ಸಲಹೆ

ಸೇಡಂ, ಅ,18: ತಾಲೂಕಿನ ರೈತರು ಈವರೆಗೆ ಎಫ್‍ಐಡಿ ನೊಂದಣಿ ಆಗದೆ ಇರುವ ರೈತರು ತಕ್ಷಣ ಕೃಷಿ ಇಲಾಖೆಗೆ ಬಂದು ಎಫ್‍ಐಡಿ ನೊಂದಣಿ ಮಾಡಿಸಿಕೊಳ್ಳುವಂತೆ ರೈತರಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೈ ಎಲ್ ಹಂಪಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನ ಎಫ್‍ಐಡಿ ಮಾಡಿಸದ ರೈತರು ತಕ್ಷಣ ಸಮೀಪದ ಸಿಎಸ್‍ಸಿ ಸೇಂಟರ್, ಹೊಬಳಿಯ ರೈತ ಸಂಪರ್ಕ ಕೇಂದ್ರದ ಕಚೇರಿಗೆ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ಬುಕ್, ಮೋಬೈಲ್ ಸಂಖ್ಯೆಯೊಂದಿಗೆ ಭೇಟಿ ನೀಡಿ ಎಫ್‍ಐಡಿ ಮಾಡಿಸಲು ಸೂಚಿಸಿದ್ದಾರೆ.ರೈತರಿಗೆ ಬರ ಪರಿಹಾರ, ತೊಗರಿ ನೆಟೆರೋಗ ಪರಿಹಾರದ ಮೊತ್ತ ಬರುವುದಿಲ್ಲ, ಏಕೆಂದರೆ ಈ ಹಣ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
ತಪ್ಪಿದಲ್ಲಿ ಸರಕಾರದಿಂದ ಬರುವಂತ ಪರಿಹಾರದ ಮೊತ್ತದಿಂದ ವಂಚಿತರಾಗುವಿರಿ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.