ಎಪ್ರಿಲ್ ೧೦ ಕಾಲುವೆಗೆ ನೀರು ಬಿಡಲು ಬಾದರ್ಲಿ ಅಗ್ರಹ

ಸಿಂಧನೂರು. ಮಾ.೫ ಎಪ್ರೀಲ್೧೦ ರ ತನಕ ಎಡದಂಡೆ ಕಾಲುವೆ ನೀರು ಬಿಟ್ಟು ರೈತರು ಬೆಳೆದ ಬೆಳೆಯನ್ನು ರಕ್ಷಣೆ ಮಾಡುವಂತೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸರ್ಕಾರವನ್ನು ಒತ್ತಾಯ ಮಾಡಿದರು.
ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ ೩೧ ರ ತನಕ ನೀರು ಬಿಡುವದಾಗಿ ಐಸಿಸಿ ಸಭೆಯಲ್ಲಿ ತೀರ್ಮಾನ ಮಾಡಿದ್ದು ಈಗಿನ ನೀರಿನ ಪರಿಸ್ಥಿತಿ ನೋಡಿದರೆ ಮಾರ್ಚ ೨೦ ರ ತನಕ ಕಾಲುವೆಗೆ ನೀರು ಬರವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಮಾರ್ಚ ೩೧ ರ ತನಕ ಪ್ರತಿದಿನ ೩೫೦೦. ಕ್ಯೂಸೇಕ್ಷ ನೀರು ಬಿಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಿದ್ದು ಆದರೆ ಈಗ ನೀರಿನ ಪ್ರಮಾಣ ನೋಡಿದರೆ ಮಾರ್ಚ ೨೦ ರ ತನಕ ಕಾಲುವೆಗೆ ನೀರು ಬರುವದು ಕಷ್ಷ ಹಾಗಾದರೆ ಇನ್ನುಳಿದ ೮ ದಿನಗಳ ನೀರು ಎಲ್ಲಿಗೆ ಹೊದವು ಇದರ ಬಗ್ಗೆ ಸಭೆಯಲ್ಲಿ ಹಾಜರಿದ್ದವರು ಯಾಕೆ ಕೇಳದೆ ಮೌನ ವಸಿದ್ದಾರೆ ಎಂದರು.
ಅವಮಾನದ ವ್ಯತಿರಿಕ್ತ ಪರಿಣಾಮವಾಗಿ ಎಪ್ರಿಲ ೧೦ ರ ತನಕ ನೀರು ಬಿಟ್ಟು ರೈತರು ಬೆಳೆಯನ್ನು ಸರ್ಕಾರ ಶಾಸಕರು ಕಾಪಾಡಬೇಕು ಇಲ್ಲದಿದ್ದರೆ ಭತ್ತ, ಹತ್ತಿ ಮೋಣಸಿನ ಕಾಯಿ ಬೆಳೆದ ರೈತರು ಸಂಕಷ್ಟಕ್ಕೆ ಇಡುತ್ತಾರೆ ಐಸಿಸಿ ಸಭೆಯಲ್ಲಿ ಹಾಜರಿದ್ದ ಬಿಜೆಪಿಯ ಶಾಸಕರುಗಳು ಈಗ ಐಸಿಸಿ ಸಭೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡುತ್ತಿದ್ದಾರೆ ಎಂದರು.
ಐಸಿಸಿ ಆರಂಭ ಗೊಂಡಾಗಿನಿಂದಲು ಕಾಲುವೆ ಬಂದು ಮಾಡಿ ಕೆಳ ಭಾಗಕ್ಕೆ ನೀರು ಬಿಟ್ಟ ಉದಾಹರಣೆಯಿಲ್ಲ ಆದರೆ ಈಗ ಕಾಲುವೆ ಬಂದು ಮಾಡಿ ಕೆಳಭಾಗಕ್ಕೆ ನೀರು ಬಿಡುವ ಹೊಸ ಇತಿಹಾಸ ಸೃಷ್ಟಿಸಿಲಾಗಿದೆ ಐಸಿಸಿ ಸಭೆಯಲ್ಲಿ ನೀರಿನ ಬಗ್ಗೆ ಸರಿಯಾದ ಲೆಕ್ಕವನ್ನು ಅಧಿಕಾರಿಗಳು ತೋರಿಸದೆ ತಪ್ಪು ಲೆಕ್ಕಾಚಾರ ತೋರಿಸಿ.ನೀರಿನ ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದು.ನೀರಿನ ಅಭಾವ ಅಗುವದನ್ನು ತಪ್ಪಿಸಲು ಸಚಿವರು ಶಾಸಕರು. ಸಂಸದರು ಮಾತನಾಡದೆ ಇರುವದರಿಂದ ರೈತರು ಬೆಳೆ ಬಾರದೆ ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ನೀರಿನ ಬಗ್ಗೆ ಸಾಕಷ್ಟು ಅನುಭವ ಇರುವ ಶಾಸಕ ವೆಂಟರಾವ ನಾಡಗೌಡ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರ ಬೆಳೆಯನ್ನು ಕಾಪಾಡುವಂತೆ ಶಾಸಕರ ಮೂಲಕ ಸರ್ಕಾರವನ್ನು ನಾನು ಅಗ್ರಹ ಪಡುಸುತ್ತೇನೆ ಎಪ್ರಿಲ ೯ ರಂದು ರೈತರ ಸಭೆ ಮಾಡಿ ಮುಂದಿನ ಹೋರಾಟದ ತೀರ್ಮಾನ ತೆಗೆದುಕೊಳ್ಳುವದಾಗಿ ತಿಳಿಸಿದರು.
ಕಾಂಗ್ರೆಸ ಪಕ್ಷದ ಅಭ್ಯರ್ಥಿ ನಾನೆ ಬಿ.ಫಾರ್ಮ್ ಇದೆ ತೋರಿಸಲಾ ಎಂದು ಬಸನಗೌಡ ಬಾದರ್ಲಿ ಹೇಳುತ್ತಾರೆ ನನಗೆ ಟಿಕೇಟ ಖಚಿತ ಎಂದು ಹೈಕಮಾಂಡ ಹೇಳಿದೆ ಬಿ.ಫಾರ್ಮ್ ನೋಡುತ್ತೀರಾ ಎಂದು ಕೆ ಕರಿಯಪ್ಪ ಹೇಳುತ್ತಾರೆ ಹಾಗಾದರೆ ನೀವು ಆಕಾಂಕ್ಷಿ ಅಲ್ಲವಾ ನಿಮಗೆ ಟಿಕೇಟ ಇಲ್ಲವಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ನಾನು ಪ್ರಬಲ ಆಕಾಂಕ್ಷಿ ಆದರೆ ಟಿಕೇಟ ಕೊಡುವುದು ಹೈಕಮಾಂಡ ಗೆ ಬಿಟ್ಟ ವಿಚಾರ ಉಳಿದವರಂತೆ ನಾನು ಮಾತನಾಡುವುದಿಲ್ಲ ಎಂದರು.
ಸುದ್ದಿ ಗೋಷ್ಠಿ ಮುಗಿದ ಬಳಿಕ ಕಾಂಗ್ರೆಸ ಪಕ್ಷದ ಗ್ಯಾರಂಟಿ ಕಾರ್ಡ್ ಜನರಿಗೆ ವಿತರಿಸಿ ಮಾತನಾಡಿದ ಅವರು ರಾಜ್ಯದ ಜನರಲ್ಲಿ ಒಲವು ಇದೆ ಮುಂದೆ ನಮ್ಮದೆ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಅದರಿಂದ ಮನೆ ಮನೆಗೂ ತೆರಳಿ ಪಕ್ಷದ ಮುಖಂಡರು ಕಾರ್ಯಕರ್ತರು ಜೊತೆ ಹೋಗಿ ಜನರಿಗೆ ಕಾಂಗ್ರೆಸ ಗ್ಯಾರಂಟಿ ಎನ್ನುವ ಕಾರ್ಡ್ ನೀಡಿದರು.
ನಗರದ ಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ ಮಾಜಿ ಅಧ್ಯಕ್ಷ ರಾದ ಜಾಪರ ಜಾಗೀರ ದ್ದಾರ ,ಸದಸ್ಯರಾದ ಶೇಖರಪ್ಪ ಗಿಣೀವಾರ ಮುನಿರಪಾಷ,ಮುಖಂಡರಾದ ಬಸವರಾಜ ಹಿರೇಗೌಡರ, ಖಾಜಿಮಲ್ಲಿಕ್, ಕರಿಸಾಬ, ವೆಂಕಟೇಶ ಬಂಡಿ, ಲಿಂಗಾದರ ಶ್ರಿದೇವಿ ಸೇರಿದಂತೆ ಇತರರು ಇದ್ದರು.