ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ : ಅಮರೇಗೌಡ ಮಲ್ಲಾಪೂರ

ರಾಯಚೂರು ಮಾ ೩೦
ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವನಸಿರಿ ಫೌಂಡೇಶನ್ ರಾಜ್ಯ ಘಟಕದ ವತಿಯಿಂದ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ ಮಾಡುವ ಮೂಲಕ ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮ ಹಾಗೂ ನಡೆದಾಡುವ ದೇವರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ೧೧೬ನೇ ಜಯಂತಿ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಇದೇ ಎಪ್ರಿಲ್ ೧ರಂದು ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ (ಡಿ.ಇ.ಎಡ್ PWಆ ಕ್ಯಾಂಪ್)ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.
ಪರಿಸರ ಎಂಬುದು ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ.ಈ ವಾತಾವರಣದಲ್ಲಿ ಅನೇಕ ರೀತಿಯಜೀವಿಗಳು ವಾಸಿಸುತ್ತಿವೆ.ಮನುಷ್ಯ,ಕಾಡು ಪ್ರಾಣಿಗಳು,ಪಕ್ಷಿಗಳು, ಚಿಟ್ಟೆಗಳು ಹೀಗೆ ಇನ್ನೂ ಹಲವಾರು ಜೀವಿಗಳು ಈ ವಾತವರಣದಲ್ಲಿ ಜೀವಿಸುತ್ತವೆ.ಈ ಎಲ್ಲಾ ಜೀವರಾಶಿಗಳು ಈ ಭೂಮಿಯ ಮೇಲೆ ವಾಸಿಸಬೇಕಾದರೆ ಪ್ರಮುಖವಾಗಿ ಗಾಳಿ,ನೀರು, ಆಹಾರ ಅತೀ ಮುಖ್ಯವಾಗಿರುತ್ತದೆ.ಇವುಗಳನ್ನು ಈ ಪರಿಸರದಲ್ಲಿ ಬೆಳೆದ ಗಿಡಮರಗಳಿಂದಲೇ ಪಡೆದುಕೊಳ್ಳಬೇಕು.ಇತ್ತೀಚಿನ ದಿನಗಳಲ್ಲಿ ಮನುಷ್ಯ ಅಧುನಿಕತೆಗೆ ಮಾರುಹೋಗಿ ಗಿಡಮರಗಳನ್ನು ಕಡಿಯುತ್ತಿದ್ದಾನೆ ಇದರಿಂದಾಗಿ ಶುದ್ಧವಾದ ಗಾಳಿ ಸಿಗುತ್ತಿಲ್ಲ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾನೆ ಇದರಿಂದ ಮನುಷ್ಯನ ಜೀವಿತಾವಧಿಯು ಕಡಿಮೆಯಾಗುತ್ತಿದೆ.ಇದನ್ನರಿತು ನಾನು ಮತ್ತು ನನ್ನ ಸ್ನೇಹಿತರು ಸೇರಿಕೊಂಡು ಈ ಪರಿಸರಕ್ಕೆ ಏನಾದರೂ ಒಂದು ಸೇವೆ ಮಾಡೋಣ ಎಂದು ತೀರ್ಮಾನಿಸಿ ವನಸಿರಿ ಫೌಂಡೇಶನ್ ಸಂಸ್ಥೆಯನ್ನು ಸುಮಾರು ೯ ವರ್ಷಗಳ ಹಿಂದೆಯೇ ಪ್ರಾರಂಭಿಸಿ ಸಸಿಗಳನ್ನು ಪಾಲನೆ ಪೋಷಣೆ ಮಾಡುತ್ತಿದ್ದೇವೆ.ಆದಾಗ್ಯೂ ಕೂಡಾ ನಮ್ಮ ಭಾಗದಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಬೇಸಿಗೆಯಲ್ಲಿ ಜನರೇ ಕುಡಿಯಲು ನೀರಿಗೆ ಆಹಾಕಾರ ಪಡುತ್ತಿರುವಾಗ ಮೂಕ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವವರಾರು ಎಂಬ ಪ್ರಶ್ನೆ ಎದುರಾದಾಗ ನಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಮೂಕ ಪಾಣಿ ಪಕ್ಷಿಗಳಿಗೆ ಅರವಟ್ಟಿಗೆ ನಿರ್ಮಿಸಿ ಬೇಸಿಗೆಯಲ್ಲಿ ನೀರುಣಿಸುವ ಕಾರ್ಯಕ್ಕೆ ತೀರ್ಮಾನಿಸಲಾಯಿತು.
ಇವುಗಳ ಜೊತೆಗೆ ಇತ್ತೀಚಿನ ಅಧುನಿಕತೆಗೆ ಮಾರುಹೋದ ಯುವಕ ಯುವತಿಯರನ್ನು ಪರಸರ ಸಂರಕ್ಷಣೆಯಲ್ಲಿ ತೊಡಗಿಸಲು ಕರ್ನಾಟಕ ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ವನಸಿರಿ ಫೌಂಡೇಶನ್ ವತಿಯಿಂದ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ವಿನೂತನ ಕಾರ್ಯಕ್ರಮವನ್ನು ಸುಮಾರು ೬ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಇದಕ್ಕೆ, ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಮಣ್ಣಿನ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಪ್ರತಿವರ್ಷ ಸುಮಾರು ೨೦ ಸಾವಿರ ಅರವಟ್ಟಿಗೆ ತಯಾರಿಸಲಾಗುತ್ತಿದೆ.
ಈ ಕಾರ್ಯಕ್ರಮವನ್ನು ಪೂಜ್ಯರ ಹಾಗೂ ಗಣ್ಯವ್ಯಕ್ತಿಗಳಿಂದ ಉದ್ಘಾಟನೆಗೊಳಿಸಿ ಅರವಟ್ಟಿಗೆಗಳನ್ನು ರಾಜ್ಯದ ನಾನಾ ಭಾಗಗಳಿಗೆ ಕಳಿಸಿ ಕೊಡಲಾಗುತ್ತದೆ. ಅಲ್ಲಿನ ಸ್ಥಳೀಯ ಸಂಸ್ಥೆಗಳ ಜೊತೆಗೂಡಿ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ.ಈ ಒಂದು ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಕಾರ್ಯಕ್ರಮವನ್ನು ಈ ಬಾರಿ ಇದೇ ಎಪ್ರಿಲ್ ೧ರಂದು ಸಿಂಧನೂರಿನ ಶಿಕ್ಷಕರ ತರಬೇತಿ ಕೇಂದ್ರ ಪಿ.ಡಬ್ಲ್ಯೂ ಡಿ ಕ್ಯಾಂಪ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಪರಮ ಪೂಜ್ಯರು,ಗಣ್ಯವ್ಯಕ್ತಿಗಳು, ಪತ್ರಿಕಾ ಹಾಗೂ ಮಾದ್ಯಮ ಮಿತ್ರರು,ವಿವಿಧ ಜಿಲ್ಲೆಗಳ ಪರಿಸರ ಪ್ರೇಮಿಗಳು,ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಲ್ಲಾ ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಮರೇಗೌಡ ಮನವಿ ಮಾಡಿಕೊಂಡರು.