ಎಪ್ಪತ್ತರ ದಶಕದಲ್ಲಿ ಲೈಂಗಿಕ ಸಂಕೇತವಾಗಿ ಗುರುತಿಸಲ್ಪಟ್ಟ ನಟಿ ಜೀನತ್ ಅಮಾನ್ ಗೆ ಎಪ್ಪತ್ತು ತುಂಬಿತು , ಎರಡು ಮದುವೆಯಾದರೂ ಸರಿಯಾಗದ ಸಂಸಾರ

ಜೀನತ್ ಖಾನ್ ಅರ್ಥಾತ್ ಜೀನತ್ ಅಮಾನ್ ಎಪ್ಪತ್ತರ ದಶಕದ ಅತ್ಯಂತ ಗ್ಲಾಮರಸ್ ಮತ್ತು ಬೋಲ್ಡ್ ನಟಿ. ಅವರಲ್ಲಿ ಸೌಂದರ್ಯ ಅಥವಾ ಮೆಚ್ಚುಗೆಯ ಕೊರತೆ ಇರಲಿಲ್ಲ. ಆ ಅವಧಿಯಲ್ಲಿ ಅವರ ಪ್ರೀತಿ, ಪ್ರೇಮದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿದ್ದವು. ಜೀನತ್ ಅಮಾನ್ ರನ್ನು ಪ್ರೀತಿಸುವವರಿಗೆ ಆ ದಿನಗಳಲ್ಲಿ ಕೊರತೆಯಿರಲಿಲ್ಲ. ಜೀನತ್ ರ ವೈಯಕ್ತಿಕ ಜೀವನದಲ್ಲಿ ಯಾವಾಗಲೂ ವಿವಾದಗಳು ಉಳಿದುಕೊಂಡಿವೆ ಮತ್ತು ಅವರ ವೈಯಕ್ತಿಕ ಸಂಬಂಧಗಳಿಂದಾಗಿ ಅವರು ಯಾವಾಗಲೂ ನಿಯತಕಾಲಿಕೆಗಳ ಮುಖ್ಯಾಂಶಗಳಲ್ಲಿ ಗಾಸಿಪ್ ಗಳಲ್ಲಿ ಆಹಾರವಾಗಿದ್ದರು.
ಜೀನತ್ ಅವರ ಅತ್ಯಂತ ಪ್ರಸಿದ್ಧ ಮತ್ತು ವಿವಾದಾತ್ಮಕ ಸಂಬಂಧವು ನಟ ಸಂಜಯ್ ಖಾನ್ ಅವರೊಂದಿಗೆ ಆಗಿತ್ತು.ಅದು ೧೯೭೮-೭೯ ಕ್ಕೆ ಮುಗಿಯಿತು.
ಎಪ್ಪತ್ತರ ದಶಕದ ಖ್ಯಾತ ನಟಿ ಜೀನತ್ ಅಮಾನ್ ಮೊನ್ನೆ ೭೦ನೇ ವಸಂತಕ್ಕೆ ಕಾಲಿಟ್ಟರು. ನವೆಂಬರ್ ೧೯, ೧೯೫೧ ರಂದು ಮುಂಬೈನಲ್ಲಿ ಜನಿಸಿದ ಜೀನತ್ ಖಾನ್ ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದವರು. ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು, ಜೀನತ್ ೧೯೭೦ ರಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಪ್ರಶಸ್ತಿಯನ್ನು ಗೆದ್ದರು. ಅದರ ನಂತರ ಅವರು ೧೯೭೧ ರಲ್ಲಿ ’ಹಸ್ಲ್’ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಪಡೆದರು. ಜೀನತ್ ಅವರ ಸಿನಿಮಾ ಪಯಣದ ಕಥೆ ಶುರುವಾಗಿದ್ದು ಇಲ್ಲಿಂದಲೇ. ಚಲನಚಿತ್ರಗಳಲ್ಲಿ ತೊಡಗಿಸಿಕೊಂಡ ನಂತರ, ಜೀನತ್ ತನ್ನ ದಿಟ್ಟ ಶೈಲಿಯಿಂದ ಎಲ್ಲರ ಗಮನ ಸೆಳೆದರು.ಆದರೆ ಅದೇ ಸಮಯದಲ್ಲಿ ಅವರು ವಿವಾದಗಳನ್ನೂ ಸೃಷ್ಟಿಸುತ್ತಾ ಬಂದರು.ಮೊದಲ ಕೆಲವು ಫಿಲ್ಮ್ ಗಳು ಯಶಸ್ಸು ತರಲಿಲ್ಲ.
ಸಂಜಯ್ ಖಾನ್ ಅಂತಹ ವಿವಾಹಿತ ವ್ಯಕ್ತಿಯೊಂದಿಗಿನ ಸಂಬಂಧದಿಂದ ದೈಹಿಕ ಕಿರುಕುಳ ಮತ್ತು ಅನೇಕ ವಿವಾದಗಳವರೆಗೆ, ಅವರ ಹೆಸರು ಆ ದಿನಗಳಲ್ಲಿ ಚರ್ಚೆ ಆಯ್ತು.
ಜೀನತ್ ಅಮಾನ್ ಮತ್ತು ಸಂಜಯ್ ಖಾನ್ ಅವರ ಸಂಬಂಧ ಆ ದಿನಗಳಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಮುಖ್ಯಾಂಶಗಳಲ್ಲಿತ್ತು. ಸಂಜಯ್ ಆ ಮೊದಲು ಒಂದು ಮದುವೆಯಾಗಿದ್ದಲ್ಲದೆ ೪ ಮಕ್ಕಳನ್ನೂ ಪಡೆದಿದ್ದರು. ‘ಅಬ್ದುಲ್ಲಾ’ ಸಿನಿಮಾದ ಶೂಟಿಂಗ್ ವೇಳೆ ಇವರಿಬ್ಬರೂ ಮದುವೆಯಾಗಿದ್ದರು. ಈ ರಹಸ್ಯ ಮದುವೆಯು ಬಹಿರಂಗಗೊಂಡಾಗ ಎಲ್ಲರೂ ಬೆಚ್ಚಿಬಿದ್ದರು. ಮದುವೆಯ ತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರ ಪ್ರತಿದಿನ ಇಬ್ಬರ ನಡುವೆ ಜಗಳ ಆರಂಭವಾಯಿತು. ಎಲ್ಲಿಯ ತನಕ ಅಂದರೆ ಕಣ್ಣಿನ ದೃಷ್ಟಿ ಕೂಡಾ ಕಳೆದುಕೊಳ್ಳುವ ಸ್ಥಿತಿಗೂ ತಲುಪಿತ್ತು. ಸಂಜಯ್ ಖಾನ್ ಆಗಾಗ ಜೀನತ್ ರಿಗೆ ಥಳಿಸುತ್ತಿದ್ದರು. ಒಮ್ಮೆ ಅವರು ಜೀನತ್ ಅವರನ್ನು ಸಾರ್ವಜನಿಕವಾಗಿಯೂ ಥಳಿಸಿದ್ದರು. ಅಷ್ಟೇ ಅಲ್ಲ, ಹೊಡೆತಕ್ಕೆ ಸಿಲುಕಿ ಒಂದು ಕಣ್ಣಿನ ದೃಷ್ಟಿಯನ್ನೂ ಅವರು ಕಳೆದುಕೊಳ್ಳುವಂತಾಗಿತ್ತು.
ವಾಸ್ತವವಾಗಿ, ಸಂಜಯ್ ಅವರು ಜೀನತ್ ಅವರನ್ನು ಫಿಲ್ಮ್ ನ ಬಗ್ಗೆ ಮಾತನಾಡಲು ಹೋಟೆಲ್‌ಗೆ ಕರೆದಿದ್ದರು. ಆದರೆ ಅಲ್ಲಿ ವಿವಾದ ಹುಟ್ಟಿತು.ಸಂಜಯ್ ಜೀನತ್ ರನ್ನು ಥಳಿಸಲು ಆರಂಭಿಸಿದಾಗ ಸಂಜಯ್ ಅವರ ಮೊದಲ ಪತ್ನಿ ಜರೀನ್ ಖಾನ್ ಕೂಡ ಅಲ್ಲಿದ್ದರು.
ಈ ನಡುವೆ ಜೀನತ್ ಹೆಸರು ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸೇರಿಕೊಂಡಿತ್ತು.ಕ್ರಿಕೆಟಿಗ ಇಮ್ರಾನ್ ಖಾನ್ ಜೊತೆಗೂ ಜೀನತ್ ಅಮಾನ್ ಹೆಸರು ಕೂಡ ಸೇರಿತ್ತು.
ಜೀನತ್ ರಿಗೆ ತನ್ನ ತಾಯಿಯಿಂದ ಮಾಡೆಲಿಂಗ್ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರೇರೇಪಣೆ ಸಿಕ್ಕಿತು, ಇದರ ಪರಿಣಾಮವಾಗಿ ಅವರು ಫೆಮಿನಾ ಮಿಸ್ ಇಂಡಿಯಾ ೧೯೭೦ ರ ಎರಡನೇ ರನ್ನರ್ ಅಪ್ ಆಗಿದ್ದರು ಮತ್ತು ಅದೇ ವರ್ಷದಲ್ಲಿ ಮಿಸ್ ಏಷ್ಯಾ ಪೆಸಿಫಿಕ್ ಕಿರೀಟವನ್ನು ಪಡೆದರು.
ನಟಿ ಜೀನತ್ ಅಮಾನ್ ಬಾಲಿವುಡ್‌ನ ಜನಪ್ರಿಯ ಮತ್ತು ಸುಂದರ ನಟಿ. ೭೦ರ ದಶಕದಲ್ಲಿ ಹಿಂದಿ ಚಿತ್ರರಂಗವನ್ನು ಜೀನತ್ ಅಮಾನ್ ಆಳಿದರು. ಜೀನತ್ ಬಾಲಿವುಡ್ ಪ್ರವೇಶಿಸಿದಾಗ, ಅವರು ತಮ್ಮ ಪಾಶ್ಚಿಮಾತ್ಯ ನೋಟ ಮತ್ತು ಬೋಲ್ಡ್ ಆನ್-ಸ್ಕ್ರೀನ್ ಉಪಸ್ಥಿತಿಯಿಂದ ಫಿಲ್ಮ್ ಉದ್ಯಮವನ್ನು ಅಲುಗಾಡಿಸಿದರು.
’ದಮ್ ಮಾರೋ ದಮ್’ ಹಾಡಿನ ತಾಳಕ್ಕೆ ತಕ್ಕಂತೆ ಕುಣಿದ ಜೀನತ್ ಆಕರ್ಷಣೆಯ ಕೇಂದ್ರಬಿಂದುವಾದರು. ಅವರ ಸಂಪೂರ್ಣ ಚಲನಚಿತ್ರ ವೃತ್ತಿಜೀವನದಲ್ಲಿ, ಇದೊಂದು ಮರೆಯಲಾಗದ ಚಿತ್ರ.
ಆ ಸಮಯ ಜೀನತ್ ಅಮಾನ್ ದೊಡ್ಡ ನಟರು ಮತ್ತು ದೊಡ್ಡ ನಿರ್ದೇಶಕರೊಂದಿಗೆ ಕೆಲಸ ಮಾಡಿದರು. ಅವರಿಂದ ಫಿಲ್ಮ್ ಗಳಿಗೆ ದಿನಾಂಕಗಳನ್ನು ಪಡೆಯುವುದೂ ಕಷ್ಟಕರವಾಗಿತ್ತು.
ಜೀನತ್ ಅಮಾನ್ ೭೦ ಮತ್ತು ೮೦ ರ ದಶಕದಲ್ಲಿ ಕಾರ್ಯನಿರತ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು. ನವೆಂಬರ್ ೧೯ ಜೀನತ್ ಅಮಾನ್ ಅವರ ಜನ್ಮದಿನ. ಈ ಹಿರಿಯ ಬಾಲಿವುಡ್ ನಟಿ ಇದೀಗ ೭೦ ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೀನತ್ ಅಮಾನ್ ಅವರ ಜೀವನದಲ್ಲಿ ಹಲವು ವರ್ಷಗಳಿಂದ ಏರಿಳಿತಗಳಿವೆ, ಈ ಸಮಯದಲ್ಲಿ, ಜೀನತ್ ಅಮಾನ್ ಅವರ ಜೀವನದಲ್ಲಿ ಅನೇಕ ವಿಚಿತ್ರ ಘಟನೆಗಳು ಸಂಭವಿಸಿದವು, ಅದನ್ನು ಅವರು ಮರೆಯಲು ಸಾಧ್ಯವಿಲ್ಲ. ಅಂತಹ ಒಂದು ಘಟನೆಯು ಲಂಡನ್‌ನಲ್ಲಿ ಅವರಿಗೆ ಸಂಭವಿಸಿತ್ತು,
ವಾಸ್ತವವಾಗಿ, ಜೀನತ್ ಅಮಾನ್ ತನ್ನ ಒಂದು ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್‌ಗೆ ಹೋಗಿದ್ದರು. ಆಗ ನಡೆದ ಘಟನೆ. (ಸುಹಾನಾ ಸಫರ್ ಶೋ ದಲ್ಲಿ ಜೀನತ್ ಅಮಾನ್ ಬಗ್ಗೆ ಮಾತನಾಡುತ್ತಾ ಅನ್ನೂ ಕಪೂರ್ ಹೇಳಿದ್ದು), ಒಂದು ದಿನ ಚಲನಚಿತ್ರದ ಶೂಟಿಂಗ್ ಇಲ್ಲ ಎಂದು ಹೇಳಿದರು.ಅನಂತರ ಜೀನತ್ ಅಮಾನ್ ಅವರು ತಮ್ಮ ಹೋಟೆಲ್ ಕೋಣೆಯಲ್ಲೇ ಉಳಿಯಲು ನಿರ್ಧರಿಸಿದ್ದರು. ಆದರೂ ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಬೇಜಾರಾಗತೊಡಗಿತು, ಯಾಕೆ , ಇಲ್ಲಿನ ಯಾವುದಾದರೂ ಸಿನಿಮಾ ನೋಡಬಾರದು ಎಂದುಕೊಂಡರು. ಹತ್ತಿರದಲ್ಲಿ ಥಿಯೇಟರ್ ಇದೆಯೇ ಎಂದು ಜೀನತ್ ಅಮಾನ್ ಯಾರನ್ನಾದರೂ ವಿಚಾರಿಸಿದರು.ಹಾಗೂ ಜೀನತ್ ಅವರು ಥಿಯೇಟರ್ ವಿಳಾಸ ಪಡೆದು ಥಿಯೇಟರ್ ಗೆ ಒಳ ಹೋದರು.
ಅವರು ಟಿಕೇಟ್ ತೆಗೆದುಕೊಂಡು ಒಳ್ಳೆಯ ಮತ್ತು ಆರಾಮದಾಯಕವಾದ ಆಸನದಲ್ಲಿ ಒಂದೆಡೆ ಕುಳಿತರು.
ಸಿನಿಮಾ ಹಾಲ್ ನಲ್ಲಿ ಹೆಚ್ಚು ಜನ ಇಲ್ಲದ ಕಾರಣ ಜೀನತ್ ಅಮಾನ್ ತುಂಬಾ ಆರಾಮವಾಗಿ ಫ್ರೀಯಾಗಿ ಕುಳಿತಿದ್ದರು. ಚಿತ್ರ ನೋಡುತ್ತಿದ್ದಾಗ ಜೀನತ್ ಅಮಾನ್ ಗೆ ಸಮನಾದ ಸೀಟ್ ನಲ್ಲಿ ಒಬ್ಬ ವ್ಯಕ್ತಿ ಬಂದು ಕುಳಿತರು. ಮೊದಮೊದಲು ಜೀನತ್ ಅಮಾನ್ ಗೆ ಏನೂ ವಿಚಿತ್ರ ಅನ್ನಿಸಲಿಲ್ಲ, ಸ್ವಲ್ಪ ಹೊತ್ತಿನ ನಂತರ ಅವರಿಗೆ ಅರಿವಾಯಿತು,ಆತ ಫಿಲ್ಮ್ ನೋಡೋದಿಲ್ಲ,ತನ್ನನ್ನೇ ನೋಡುತ್ತಿದ್ದಾನೆ ಎಂದು. ನಂತರ ಬೇರೆ ಸೀಟಿಗೆ ಹೋಗಿ ಕೂತರು.ಆತನೂ ಹತ್ತಿರ ಬಂದು ಕೂತ.ಕಿರಿಕಿಕಿರಿ ಆಯ್ತು.ಒಂದು ಕೆನ್ನೆಗೆ ಬಾರಿಸುವಷ್ಟು ಸಿಟ್ಟು ಬಂತು.ಆದರೆ ವಿದೇಶ.ಏನಾದರೂ ಪೊಲೀಸ್ ಕೇಸ್ ಆದರೆ ಕಷ್ಟ.
ಸಿನಿಮಾ ಬೇಡ ಎಂದು ಎದ್ದು ಹೊರ ಬಂದರು.ಆತನೂ ಹಿಂಬಾಲಿಸಿದ.ಹಾಗೂ ಇವರ ಎದುರು ನಿಂತು- ” ನೀವು ಚೆಂದ ಇದ್ದೀರಿ.ಕಾಫಿಗೆ ಬರ್ತೀರಾ” ಎಂದು ಕೇಳಿದ.ಆಗ ಸಿಟ್ಟಾದ ಜೀನತ್” ಹೀಗೆಲ್ಲ ಮಾಡಿದ್ರೆ ಈಗ ಪೊಲೀಸ್ ದೂರು ಕೊಡುವೆ ” ಎಂದಾಗ ಆತ ಗಲಿಬಿಲಿ ಗೊಂಡು ಹೋದ.ಜೀನತ್ ಹೊಟೇಲ್ ರೂಮಿಗೆ ಬಂದರು.
ಸತ್ಯಂ ಶಿವಂ ಸುಂದರಂ….ಇಂತಹ ಫಿಲ್ಮ್ ಗಳಲ್ಲಿ ಬೋಲ್ಡ್ ದೃಶ್ಯಗಳನ್ನು ನೀಡಿದ್ದಕ್ಕಾಗಿ ಅವರು ಉದ್ಯಮದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅವರ ವೈಯಕ್ತಿಕ ಜೀವನವೂ ಸುಖಮಯವಾಗಿರಲಿಲ್ಲ. ನಟ ಸಂಜಯ್ ಖಾನ್ ಜೊತೆಗಿನ ಅನೈತಿಕ ಸಂಬಂಧ ಹಾಗೂ ಪತಿಯಿಂದ ಹಲ್ಲೆ ನಡೆಸಿದ ಘಟನೆಯಿಂದ ಆಕೆ ಸುದ್ದಿಯಾಗಿದ್ದರು. ನಂತರ ೧೯೮೫ ರಲ್ಲಿ ಮಾಜ್ಹರ್ ಖಾನ್ ಜೊತೆ ವಿವಾಹ ಆದರು. ಆದರೆ ಅಲ್ಲೂ ದಾಂಪತ್ಯ ಸರಿ ಬರಲಿಲ್ಲ. ಜಗಳ.ಇನ್ನೇನು ತಲಾಕ್ ಹಂತಕ್ಕೆ ಬಂದಾಗ ಆತ ೧೯೯೮ ರಲ್ಲಿ ನಿಧನರಾದರು.ಇವರಿಗೆ ಇಬ್ಬರು ಮಕ್ಕಳು. ಮಾಜ್ಹರ್ ಖಾನ್ ’ಶಾನ್’ ಫಿಲ್ಮ್ ನ ಮೂಲಕ ಖ್ಯಾತರು.
ಆರಂಭದಲ್ಲಿ, ಜೀನತ್ ಅವರ ಕೆಲವು ಚಲನಚಿತ್ರಗಳು ಬೆಳ್ಳಿತೆರೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ನಂತರ ಈ ನಟಿ ಬಾಲಿವುಡ್‌ನ ಪ್ರಸಿದ್ಧ ಲೈಂಗಿಕ ಸಂಕೇತವಾಗಿ ಗುರುತಿಸಲ್ಪಟ್ಟರು. ೭೦ ರ ದಶಕದಲ್ಲಿ, ಜೀನತ್ ಅವರ ಜನಪ್ರಿಯತೆ ಎಷ್ಟು ಹೆಚ್ಚಾಯಿತು ಎಂದರೆ ಅವರು ಬಹುತೇಕ ಎಲ್ಲಾ ಫಿಲ್ಮ್ ಗಳು ನಿಯತಕಾಲಿಕೆಗಳ ಮುಖಪುಟದಲ್ಲಿ ಕಾಣಿಸಿಕೊಡಿತು.
೭೦- ೮೦ ರ ದಶಕದಲ್ಲಿ ಲಕ್ಷಾಂತರ ಹೃದಯಗಳನ್ನು ಸೆಳೆದ ಬಾಲಿವುಡ್ ನಟಿ ಜೀನತ್ ಅಮಾನ್ ಅವರು ಯುಪಿಯ ಮಥುರಾದಲ್ಲಿ ಚುನಾವಣಾ ರ?ಯಾಲಿಯಲ್ಲಿ ಐದು ವರ್ಷದ ಹಿಂದೆ ಭಾಗವಹಿಸಿದ್ದರು. ಅವರನ್ನು ನೋಡಲು ಜನಸಾಗರವೇ ನೆರೆದಿತ್ತು. ಇಲ್ಲಿ ಜೀನತ್ ತನ್ನ ಹಳೆಯ ಗಾನ “ಲೈಲಾ ಓ ಲೈಲಾ, ಐಸಿ ಮೈನ್ ಲೈಲಾ” ಹಾಡುತ್ತಾ ತನ್ನ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಸಂಭ್ರಮದಿಂದ ರೋಡ್ ಶೋ ನಡೆಸಿ ಜನರಿಗೆ ಹಸ್ತಲಾಘವ ಮಾಡಿ ಅಭಿನಂದಿಸಿದ್ದರು.
ಜೀನತ್ ಆ ದಶಕದಲ್ಲಿ ಬೋಲ್ಡ್ ನಟಿ ಎಂದು ಕರೆಯಲ್ಪಟ್ಟರು. ಅವರು ಸತ್ಯಂ ಶಿವಂ ಸುಂದರಂ, ದಿ ಗ್ರೇಟ್ ಗ್ಯಾಂಬ್ಲರ್ ಮುಂತಾದ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಜೀನಮ್ ಅಮಾನ್ ಹರೇ ರಾಮ ಹರೇ ಕೃಷ್ಣ, ಯಾದೋಂ ಕಿ ಬಾರಾತ್, ರೋಟಿ, ಕಪ್ಡಾ ಔರ್ ಮಕಾನ್, ಅಜ್ ನಬೀ, ಡಾನ್, ಧರಮ್ ವೀರ್,ತ್ಯಾಗ್, ಇನ್ಸಾಫ್ ಕಾ ತರಾಜೂ, ಸೌಹಾರ್ದ್, ಡಾರ್ಲಿಂಗ್ ಡಾರ್ಲಿಂಗ್,…….ಇಂತಹ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ . ಜೇಯಸ್