ಎಪಿಎಂಸಿ ವೇಳೆ ವಿಸ್ತರಿಸಲು ಎಚ್‍ಕೆಸಿಸಿಐ ಮನವಿ

ಕಲಬುರಗಿ ಏ 29: ಎಪಿಎಂಸಿ ಮತ್ತು ದಾಲ್ ಮಿಲ್ ಗಳ ಕಾರ್ಯನಿರ್ವಹಣೆಯ ಸಮಯವನ್ನು ಈಗಿರುವ ಬೆಳಿಗ್ಗೆ 6 ರಿಂದ 10 ಗಂಟೆ ಬದಲಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿಸ್ತರಿಸಲು
ಎಚ್‍ಕೆಸಿಸಿಐ ಅಧ್ಯಕ್ಷ ಪ್ರಶಾಂತ್ ಎಸ್.ಮಾನಕರ್ ಮತ್ತು ಗೌರವ ಕಾರ್ಯದರ್ಶಿ ಶರಣಬಸಪ್ಪ ಎಂ.ಪಪ್ಪ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳು ಮತ್ತು ಉಪಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ. ಬ್ಯಾಂಕಿಂಗ್ ಸಮಯಗಳು ಎಪಿಎಂಸಿ ಸಮಯಕ್ಕಿಂತ ಭಿನ್ನವಾಗಿರುತ್ತವೆ, ಸಮಯ ಹೊಂದಾಣಿಕೆಯಾಗದಿರುವದರಿಂದ ರೈತರುಎಪಿಎಂಸಿಯಲ್ಲಿ ಅವರು ಮಾರಾಟ ಮಾಡಿದ ಧಾನ್ಯಗಳ ಮೊತ್ತವನ್ನು ಪಡೆಯುವುದು ಕಷ್ಟಕರವಾಗಿದೆ.ಯಾವುದೇ ಪಾಸ್,ಐಡಿ ಕಾರ್ಡ್‍ಗಳನ್ನು ರೈತರಿಗೆ ನೀಡಲಾಗಿಲ್ಲ.
ಎಪಿಎಂಸಿಯಲ್ಲಿ ಕೆಲಸ ಮಾಡುವ ಹಮಾಲರು ದೂರದ ಪ್ರದೇಶದಿಂದ ಬೆಳಿಗ್ಗೆ 6 ಗಂಟೆಯೊಳಗೆ ತಲುಪುವದು ಕಷ್ಟಕರವಾಗಿದೆ.ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಈಗಿರುವ ಬೆಳಿಗ್ಗೆ 6 ರಿಂದ 10 ಗಂಟೆ ಸಮಯದ ಬದಲಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಮಯ ವಿಸ್ತರಿಸುವದು ಸೂಕ್ತಎಂದಿದ್ದಾರೆ.