ಎಪಿಎಂಸಿ ವರ್ತಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ರೈತರ ಆಗ್ರಹ

ಲಿಂಗಸೂಗೂರು.ಡಿ.೨೭- ಹಟ್ಟಿ ಪಟ್ಟಣದ ಎ.ಪಿ.ಎಂ.ಸಿ. ವರ್ತಕರು ರೈತರು ಬೆಳೆದ ಮಾಲುಗಳನ್ನು ತೂಕ ಮಾಡುವಾಗ ಸರಕಾರದ ನಿಯಮದಂತೆ ತೂಕ ಮಾಡದೇ ಪ್ರತಿ ೫೦ ಕೆ.ಜಿ.ಗೆ ತೂಕದ ಚೀಲಕ್ಕೆ ಉಡ ಕೆ.ಜಿ. ಯಂತ ತೂಕದಲ್ಲಿ ಮೋಸ ಮಾಡುತ್ತಾರೆ. ಇದರಿಂದ ಪ್ರತಿ ೧೦೦ ಕೆ.ಜಿ.ಗೆ ಆ ಕೆ.ಜಿ. ಮೋಸ ಮಾಡುತ್ತಾರೆ ಹಾಗೂ ಗೋಣಿ ಚೀಲದಲ್ಲಿ ಮಾಡುವುದನ್ನು ಬಿಟ್ಟು ೫ ಗ್ರಾಂ. ಪ್ಲಾಸ್ಟಿಕ್ ಚೀಲದಲ್ಲಿ ತೂಕ ಮಾಡುತ್ತಾರೆ. ರೈತರು ವರ್ತಕದ ಅಂಗಡಿಗಳಿಗೆ ರೈತರು ಮುತ್ತಿಗೆ ಹಾಕಿ ರೈತರಿಗೆ ತೂಕದಲ್ಲಿ ಮೋಸ ಮಾಡುವುದನ್ನು ಕಂಡು ಹಟ್ಟಿ ಪೊಲೀಸ ಇನ್ಸ್‌ಪೆಕ್ಟರ್ ರವರಿಗೆ ಮೌಖಿಕ ದೂರು ನೀಡಿ ಅವರ ಮುಖಾಂತರ ಎಲ್ಲಾ ಅಂಗಡಿಗಳ ಗಣಕ ಯಂತ್ರಗಳನ್ನು ಹಟ್ಟಿ ಪೊಲೀಸ ಠಾಣೆಗೆ ಒಪ್ಪಿಸಲಾಗಿದ್ದು, ಎ.ಪಿ.ಎಂ.ಸಿ. ವರ್ತಕರ ಮೋಸ ಮಾಡುವುದನ್ನು ಎ.ಪಿ.ಎಂ.ಸಿ. ಕಾರ್ಯದರ್ಶಿಯಾದ ಸವಿತಾ ಪಾಟೀಲ ರವರಿಗೆ ಮೌಖಿಕವಾಗಿ ದೂರು ನೀಡಿದರು
ವರ್ತಕರ ಮೇಲೆ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿಯಾಗಿ ವರ್ತಿಸುವ ಕಾರ್ಯದರ್ಶಿ ಸವಿತಾ ಪಾಟೀಲ ರವರನ್ನು ಅಮಾನತ್ತು ಮಾಡಿ ಮತ್ತು ರೈತರಿಗೆ ತೂಕದಲ್ಲಿ ಮೋಸ ಮಾಡುವ ಎ.ಪಿ.ಎಂ.ಸಿ. ವರ್ತಕರ ಅಂಗಡಿಗಳಾದ ೧) ಶರಣಬಸವೇಶ್ವರ ಟ್ರೇಡರ್ಸ್‌ನ ೨) ಶ್ರೀ ಶೈಲ ಮಲ್ಲಿಕಾರ್ಜುನ ಟ್ರೇಡರ್ಸ್ ೩) ಆಯಾನ ಟ್ರೇಡರ್ಸ್ ೪) ಚಂದುಬಾಬು ಟ್ರೇಡರ್ಸ್ ಮಾಲಕರ ಮೇಲೆ ಕ್ರಿಮಿನಲ್ ದಾಖಲೆಗಳನ್ನು ಮಾಡಬೇಕು ಮತ್ತು ಅವರ ಅಂಗಡಿಗಳ ಲೈಸನ್‌ನ್ನು ರದ್ದುಗೊಳಿಸಬೇಕು.
ಇಲ್ಲಿಯವರೆಗೂ ರೈತರು ಬೆಳೆದು ಖರೀದಿಗೆ ಕೊಟ್ಟ ಮಾಲುಗಳನ್ನು ಪ್ರತಿ ಕ್ವಿಂಟಾಲ್‌ಗೆ ೩-೪ ಕೆ.ಜಿ. ತೂಕದಲ್ಲಿ ಮೋಸ ಮಾಡಿದ ಹಣವನ್ನು ರೈತರಿಗೆ ಮರಳಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕ ಘಟಕ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ, ನಿಂಗಪ್ಪ, ಅಮರಪ್ಪ, ಶಿವಪುತ್ರಪ್ಪ, ಬಾಬು, ಬಾಲದಂಡಪ್ಪ, ಷಣ್ಮುಖ ಸ್ವಾಮಿ, ಬಾಗನಗೌಡ, ಯಂಕಪ್ಪ, ಮಂಜುನಾಥ, ಶಿವರಾಜ್, ಮಹಿಬೂಬ, ಲಕ್ಷ್ಮಣಗೌಡ, ಶೌಕತ್, ಗಂಗಾಧರ, ಲಿಂಗಪ್ಪ, ರಮೇಶ್, ಶ್ರೀನಿವಾಸ, ದೇವಪ್ಪ, ಶಂಭುನಾಥ ಸೇರಿದಂತೆ ಇತರರಿದ್ದರು.