
ಸಂಜೆವಾಣಿ ವಾರ್ತೆ
ಕೊಟ್ಟೂರು, ಏ.12: ಎಪಿಎಂಸಿ ಮಾರುಕಟ್ಟೆಯನ್ನು ಮುತ್ತಿಗೆ ಹಾಕಿ ಖರಿದಿದಾರರ ವಿರುದ್ದ ರೈತರು ದಿಢೀರ್ ಪ್ರತಿಭಟನೆ ಕೈಗೊಂಡ ಘಟನೆ ನಡೆದಿದೆ.
ಕೊಟ್ಟೂರು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಮಾರುಕಟ್ಟೆಗೆ ಶೇಂಗಾ ತಂದಿದ್ದರು, ಕೆಲವೊಂದು ಶೇಂಗಾದ ಲಾಟ್ಗಳಲ್ಲಿ ಕಲ್ಲು, ಮಣ್ಣು, ಕಸ ಕಂಡು ಬಂದಿತ್ತು. ಈ ಲಾಟ್ ಗಳನ್ನು ಟೆಂಡರ್ ಅನ್ನು ಬರೆಯದೆ ಹಾಗೆ ಬಿಡುತ್ತಿದ್ದರು ರೈತರು ಇದನ್ನು ಖಂಡಿಸಿ ಎಲ್ಲಾ ಶೇಂಗಾದ ಲಾಟುಗಳಿಗೆ ಟೆಂಡರನ್ನು ಬರೆಯುವಂತೆ ಖರೀದಿದಾರರ ವಿರುದ್ಧ ಎಪಿಎಂಸಿ ಮುತ್ತಿಗೆ ಹಾಕಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ಹಸಿರು ಸೇನೆ ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷರಾದ ಭರ್ಮಣ್ಣ ಮಾತನಾಡಿ ಕೆಲವೊಂದು ಶೇಂಗಾದ ಲಾಟ್ ಗಳಲ್ಲಿ ಕಲ್ಲು, ಮಣ್ಣು ಬಂದಿರಬಹುದು ಅದರ ಬೆಲೆಗೆ ಟೆಂಡರ್ ಬರೆಯಿರಿ ಅದನ್ನು ಬಿಟ್ಟು ಎಲ್ಲಾ ಶೇಂಗಾ ಲಾಟುಗಳ ರೈತರಿಗೆ ಅನ್ಯಾಯ ಮಾಡಬೇಡಿ, ಎಪಿಎಂಸಿಯ ಕಾರ್ಯದರ್ಶಿಗಳು ಖರಿದಿದಾರರನ್ನು ಕೂಡಲೇ ಕರೆಸಿ ಪ್ರತಿಯೊಬ್ಬ ರೈತರ ಶೇಂಗಾದ ಲಾಟ್ ಗಳಿಗೆ ಟೆಂಡರನ್ನು ಬರೆಯುವಂತೆ ಹೇಳಬೇಕು, ಹಾಗೂ ಎಪಿಎಂಸಿಯಲ್ಲಿ ಹೊರಗಿನವರಿಗೆ ಟೆಂಡರ್ ಬರೆಯಲು ಅನುಮತಿಯನ್ನು ನೀಡಬೇಕು ಅನುಮತಿ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನಂತರ ಎಪಿಎಂಸಿ ಅಧ್ಯಕ್ಷರಾದ ಉಮೇಶ್ ಮತ್ತು ಕಾರ್ಯದರ್ಶಿ ವೀರಣ್ಣ ಮಧ್ಯಪ್ರವೇಶಿಸಿ ಪ್ರತಿಯೊಂದು ಶೇಂಗಾದ ಲಾಟುಗಳಿಗೆ ಟೆಂಡರನ್ನು ಬರಿಯುವಂತೆ ಫೋನ್ ಕರೆ ಮೂಲಕ ಸೂಚನೆಯನ್ನು ನೀಡಿದ್ದೇವೆ ಎಂದು ಮನ ಹೋಲಿಸಿದಾಗ ರೈತರು ಪ್ರತಿಭಟನೆಯನ್ನು ಕೈಬಿಟ್ಟರು. ಸುಮಾರು ಮೂರು ಗಂಟೆಗಳ ಕಾಲ ರೈತರು ಪ್ರತಿಭಟನೆಯನ್ನು ಕೈಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ರೈತರ ಸಂಘದ ಉಪಾಧ್ಯಕ್ಷರಾದ ಭರ್ಮಣ್ಣ, ರಾಮಪ್ಪ, ಬಸವರಾಜ್ ಸೇರಿದಂತೆ ಅನೇಕ ರೈತರು, ಎಪಿಎಂಸಿಯ ಅಧ್ಯಕ್ಷರಾದ ಉಮೇಶ್ ಕಾರ್ಯದರ್ಶಿಗಳಾದ ವೀರಣ್ಣ, ಪಿಎಸ್ಐ ವೆಂಕಟೇಶ್, ಎ ಎಸ್ ಐ ಅಬ್ಬಾಸ್, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು