ಎಪಿಎಂಸಿ ಮಾರುಕಟ್ಟೆ ಬಂದ್:ಭತ್ತದ ವ್ಯಾಪಾರ ಜೋರು


ರಾಯಚೂರು. ಮೇ.೨೯-ಕೋವಿಡ್ ಎರಡನೇ ಹಿನ್ನಲೆಯಲ್ಲಿ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಬಂದ್ ಹಿನ್ನಲೆಯಲ್ಲಿ ರೈತ ನಗರದ ವಿವಿಧ ರಸ್ತೆಗಳಲ್ಲಿ ಕೊರೊನ ನಿಯಮವನ್ನು ಗಾಳಿಗೆ ತೂರಿ ಭತ್ತ ಮಾರಾಟ ಮಾಡುತ್ತಿದ್ದ ಘಟನೆ ಇಂದು ನಡೆಯಿತು.
ಜಿಲ್ಲೆಯಲ್ಲಿ ಕೊರೊನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕಾರಣ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್ ಜಾರಿಮಾಡಿದ್ದು ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.
ಲಾಕ್‌ಡೌನ್ ನಿಂದಾಗಿ ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಿರುವುದರಿಂದ ರೈತರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದ್ದು ಎಪಿಎಂಸಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶದಲ್ಲಿ ಭತ್ತದ ವ್ಯಾಪಾರ ನಡೆಸಲು ಅಧಿಕಾರಿಗಳು ಅನುಮತಿ ನೀಡಿದ್ದಾರೆಯೇ ಇಲ್ಲವೋ ಗೊತ್ತಗಾಗಿದ್ದು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವ್ಯಾಪಾರ-ವಹಿವಾಟುವನ್ನು ದಲ್ಲಾಳಿಗಳು ಪ್ರಾರಂಭಿಸದ್ದಾರೆ.
ದಲ್ಲಾಳಿಗಳು ತಮಗೆ ಇಷ್ಟ ಬಂದಂತೆ ವ್ಯಾಪಾರ ನಡೆಸುತ್ತಿದ್ದು ಅವರು ಕೇಳಿದ ದರಕ್ಕೆ ಭತ್ತವನ್ನು ನೀಡುವ ಪರಸ್ಥಿತಿ ಎದುರಾಗಿದೆ,ವ್ಯಾಪಾರಕ್ಕೆ ಬಂದಂತಹ ವ್ಯಾಪಾರಸ್ಥರು ಮತ್ತು ರೈತರಲ್ಲಿ ಯಾರೂ ಕೂಡ ಕೊರೋನಾ ನಿಯಮ ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಮಾಯವಾಗಿದ್ದು, ಯಾವುದೇ ವ್ಯಕ್ತಿಯು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿರುವುದು ಇಂದು ಕಂಡು ಬಂದಿತು.