ಎಪಿಎಂಸಿ ಬಳಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಹರಪನಹಳ್ಳಿ.ಜು.೨೩: ಪಟ್ಟಣದ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಮುಂಭಾಗ ₹ 1.30 ಕೋಟಿ ವೆಚ್ಚದ ಮೂರು ಕಟ್ಟಡಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.ಹೊಸ ಕಟ್ಟಡದ ಒಂದನೇ ಮಹಡಿಯಲ್ಲಿ ₹ 39.50 ಲಕ್ಷ ವೆಚ್ಚದಲ್ಲಿ ಗೋದಾಮು ನಿರ್ಮಾಣ, ಖಾಲಿ ಜಾಗದಲ್ಲಿ ₹ 76.50 ಲಕ್ಷ ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡ ಮತ್ತು ₹ 14.50 ಲಕ್ಷ ವೆಚ್ಚದಲ್ಲಿ ಕಚೇರಿ ವಿಸ್ತರಣೆ ಕಾಮಗಾರಿಗಳಿಗೆ ಶಾಸಕ ಜಿ.ಕರುಣಾಕರ ರೆಡ್ಡಿ ಭೂಮಿಪೂಜೆ ನೆರವೇರಿಸಿದರು.ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಅಧ್ಯಕ್ಷ ಎಲ್.ಬಿ.ಹಾಲೇಶ್ ನಾಯ್ಕ ಮಾತನಾಡಿ, ಸಂಘಕ್ಕೆ ಬಂದಿರುವ ಮುಂಗಡ ಠೇವಣಿ ಮತ್ತು ಸಹಕಾರ ಸಂಘಗಳ ಅನುದಾನದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುಳಾ, ಅಧ್ಯಕ್ಷ ಹಾಲೇಶ್ ನಾಯ್ಕ, ಉಪಾಧ್ಯಕ್ಷ ಕುಲಮಿ ಅಬ್ದುಲ್, ನಿರ್ದೇಶಕರಾದ ಬಿ.ಕೆ.ಪ್ರಕಾಶ್, ಪ್ರೇಮ್ ಕುಮಾರ್, ಎಂ.ವಿ.ಕೃಷ್ಣಕಾAತ, ಲೆಕ್ಕಿಗ ತಿರುಪತಿ,ಕಣಿವಿಹಳ್ಳಿ ಮಂಜುನಾಥ್, ಆರ್.ಲೋಕೇಶ್, ಎಂ.ಮಲ್ಲೇಶ್, ಇದ್ದರು.