
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುತ್ ಶುಲ್ಕ ಹೆಚ್ಚಳವನ್ನು ಕೈ ಬಿಡಲು ಕೃಷಿ ಆಧಾರಿತ ಕೈಗಾರಿಕೆಗಳಾದ ಅಕ್ಕಿ ಮತ್ತು ಹತ್ತಿ ಮಿಲ್ ಮಾಲೀಕರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ಈ ಬಗ್ಗೆ ಸಂಘಗಳ ಮುಖಂಡರು ಇಂದು ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸಲ್ಲಿಸಿದ ನಂತರ ಸುದ್ದಿಗೋಷ್ಟಿ ನಡೆಸಿದ ಅಕ್ಕಿ ಮಿಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ಹೇಮಯ್ಯ ಸ್ವಾಮಿ, ಜಿಲ್ಲಾ ಅಧ್ಯಕ್ಷ ಎನ್.ಬಸವರಾಜಪ್ಪ, ಹತ್ತಿ ಮಿಲ್ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ದಂಡಿನ ತಿಪ್ಪೆಸ್ವಾಮಿ, ಗೌರವ ಅಧ್ಯಕ್ಷ ಎಸ್.ದೊಡ್ಡನಗೌಡ ಅವರುಗಳು. ಖರೀದಿದಾರರಿಂದ ನೇರವಾಗಿ ರೈತನ ಉತ್ಪನ್ನಗಳನ್ನು ಖರೀದಿ ಮಾಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಅದನ್ನು ರಾಜ್ಯದಲ್ಲೂ ಜಾರಿಗೆ ತಂದಿತ್ತು ಎಂದು ತಿಳಿಸಿದ ಅವರು.
ಈಗ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮತ್ತೆ ಎಪಿಎಂಸಿ ತಿದ್ದಪಡಿ ಕಾಯ್ದೆ ರದ್ದು ಮಾಡಿ ಹೊಸದಾಗಿ ಜಾರಿಗೆ ತರಲು ಸಿದ್ದತೆ ನಡೆಸಿದೆ.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವುದರಿಂದ ಮತ್ತೆ ಮಾರುಕಟ್ಟೆಯಲ್ಲಿ ಸೆಸ್ ಹೆಚ್ಚಳ ಆಗಲಿದೆ. ಈಗ ಶೇ.0.65 ಸೆಸ್ ಇದೆ. ಅದು ಮೊದಲಿನಂತೆ ಒಂದುವರೆ ರೂ ಗಿಂತ ಹೆಚ್ಚಬಹುದು. ಇದರಿಂದ ಮತ್ತೆ ರೈತರ ಮೇಲೆ ಹೊರ ಹೆಚ್ಚಲಿದೆಂದರು.
ಇಷ್ಟೇ ಅಲ್ಲದೆ ಎಪಿಎಂಸಿಯ ಸೇವಾ ಶುಲ್ಕದಿಂದ ಯಾರಿಗೂ ಲಾಭ ಇಲ್ಲ, ಚೆಕ್ ಪೋಸ್ಟ್ ಗಳ ಮೂಲಕ ರಾಜ್ಯ , ವಿಭಾಗ, ಜಿಲ್ಲಾ ಮಟ್ಟದ ಜಾಗೃತ ತನಿಖಾ ದಳಗಳಿಂದ ಕಿರುಕುಳ ಹೆಚ್ಚಲಿದೆಂದರು.
ಹಳೇ ಪದ್ದತಿಗೆ ವಿರೋಧ ಇಲ್ಲ.
ರಾಜ್ಯದಲ್ಲಿನ ವಿದ್ಯುತ್ ನೀತಿಯೇಸರಿ ಇಲ್ಲ, ಸೋರಿಕೆ ತಡೆಯಲ್ಲ. ಸೌರ, ಪವನ್ ವಿದ್ಯುತ್ ಉತ್ಪಾದನೆಗೆ ಮಹತ್ವ ನೀಡಲಿ ಎಂದ ಅವರು
ಮಿಲ್ ನಡೆಯಲಿ ಬಿಡಲಿ ವಿದ್ಯುತ್ ನಿರ್ವಹಣೆ ಶುಲ್ಕ ಕಟ್ಟಬೇಕು ಇದು ಮಿಲ್ ಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಅದಕ್ಕಾಗಿ ಇದನ್ನು ಕೈ ಬಿಡಬೇಕೆಂದರು.
ಇಂದು ರೈಸ್ ಮಿಲ್ ಗಳನ್ನು ಬಂದ್ ಮಾಡಿದೆ ನಮ್ಮಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟ ಮಾಡಲಿದೆಂದರು.
ಸುದ್ದಿಗೋಷ್ಟಿಯಲ್ಲಿ ಕೆ.ಪಿ.ಶ್ರೀನಿವಾಸಲು, ರಮೇಶ್ ಗೌಡ, ನಾಗರಾಜ್, ಶ್ರೀಕಾಂತ್ ಮೊದಲಾದವರು ಇದ್ದರು.