ಎಪಿಎಂಸಿ ಕಛೇರಿಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ

ಕೊಟ್ಟೂರು ಏ 03 : ವಾತಾವರಣಕ್ಕೆ ತಕ್ಕಂತೆ ದೇಹದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಕಣ್ಣುಗಳ ದೋಷ ನಿವಾರಣೆಗಾಗಿ ವೈದ್ಯರ ಸಲಹೆ ಪಡೆದು ಆರೋಗ್ಯಕರ ಜೀವನವನ್ನು ನೆಡೆಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಬಣಕಾರ್ ಮಾರುತಿ ಹೇಳಿದರು.
ಶುಕ್ರವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ಕಠಾರೆ ಐ ಆಪ್ಟಿಕಲ್ ಕಂಪನಿ ವತಿಯಿಂದ ಕಚೇರಿ ಸಿಬ್ಬಂದಿಗಳಿಗೆ ಹಾಗೂ ದಲಾಲಿ ಅಂಗಡಿ ಹಮಾಲರಿಗೆ ಮತ್ತು ರೈತರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನೋಡುವ ದೃಷ್ಟಿಕೋನದಿಂದ ಒಬ್ಬರ ಮನಸ್ಸಿನ ನೋವನ್ನು ಹರಿಯಲು ಕಣ್ಣುಗಳು ಮನುಷ್ಯನಿಗೆ ತುಂಬಾ ಸಹಾಯ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ಕಾಳಜಿಯ ಕಡೆಗೆ ಒತ್ತು ನೀಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಬೂದಿ ಶಿವಕುಮಾರ, ಬೆನಕನಹಳ್ಳಿ ಸೋಮಣ್ಣ, ಕಾರ್ಯದರ್ಶಿ ಎ.ಕೆ.ವೀರಣ್ಣ, ಸಿಬ್ಬಂದಿಗಳಾದ ಬಸವರಾಜ್, ಕಠಾರೆ ಆಪ್ಟಿಕಲ್ಸ್ ವೈದ್ಯರಾದ ಮೋಹನ್ ಸಿ.ಎ ಮುಂತಾದವರು ಇದ್ದರು.