ಎಪಿಎಂಸಿ ಅಂಗಡಿ ಮಳಿಗೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಗ್ರಾ.ಪಂ. ನಿರ್ಲಕ್ಷ್ಯ:ಆರೋಪ

ಕೊರಟಗೆರೆ, ಡಿ. ೨೩- ಹೊಳವನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿಗಾಗಿ ತುಮಕೂರು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಿಂದ ೨.೧೫ ಕೋಟಿ ರೂ. ವೆಚ್ಚದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಟ್ಟರೂ ಗ್ರಾಮ ಪಂಚಾಯ್ತಿಯಿಂದ ಸರ್ಮಪಕ ಮೂಲಸೌಕರ್ಯ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ರಾತ್ರಿಯಾದರೆ ಸಾಕು ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟಿದೆ. ಕೊರಟಗೆರೆ ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಹೊಳವನಹಳ್ಳಿ ಗ್ರಾ.ಪಂ. ತಾಲ್ಲೂಕಿನಲ್ಲಿ ಅತಿ ದೊಡ್ಡ ಗ್ರಾ.ಪಂ. ಆಗಿದೆ. ೨೦೧೬ ರಲ್ಲಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿದ್ದ ಕೋಡ್ಲಹಳ್ಳಿ ಆಶ್ವತ್ಥ್‌ನಾರಾಯಣ್ ಅವರು ಹೊಳವನಹಳ್ಳಿ ಗ್ರಾ.ಪಂ. ಅಭಿವೃದ್ಧಿಗಾಗಿ ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಸುಮಾರು ೨ ಕೋಟಿ ೧೫ ಲಕ್ಷ ರೂ. ವೆಚ್ಚದಲ್ಲಿ ಸುಮಾರು ೭೦ ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಗ್ರಾ.ಪಂ.ವತಿಯಿಂದ ನೀರು, ರಸ್ತೆ, ಸೇರಿದಂತೆ ಅನೇಕ ಮೂಲ ಸೌಕರ್ಯ ನೀಡಬೇಕಾದ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೈತಿಕ ಚಟುವಟಿಗೆಗಳ ತಾಣವಾಗಿದೆ. ಗ್ರಾ.ಪಂ ಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ವರಮಾನ ತಂದುಕೊಡುವ ಅಂಗಡಿಗಳನ್ನು ಹರಾಜು ಮಾಡದೆ ಅಧಿಕಾರಿಗಳು ಮೌನವಹಿಸಿದ್ದಾರೆ. ಇನ್ನೂ ಗ್ರಾ.ಪಂ.ನ್ನು ಎಷ್ಟರ ಮಟ್ಟಿಗೆ ಅಭಿವೃದ್ದಿ ಮಾಡುತ್ತಾರೆ ಎಂದು ಸಾರ್ವಜನಿಕರ ದೂರಿದ್ದಾರೆ.
ವಾರದ ಸಂತೆ ನಿಂತು ವರ್ಷಗಳೇ ಕಳೆದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು. ಪ್ರತಿ ಶುಕ್ರವಾರ ನಡೆಯುತ್ತಿದ್ದ ವಾರದ ಸಂತೆ ಸ್ಥಗಿತಗೊಂಡಿದ್ದು, ಕೊರೊನಾ ಸಂದರ್ಭದಲ್ಲಿ ನಿಂತ ವಾರದ ಸಂತೆ ಇಲ್ಲಿಯವರೆಗೂ ಪ್ರಾರಂಭಿಸಲು ಗ್ರಾ.ಪಂ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಲಿ ತಲೆ ಕೆಡಿಸಿಕೊಳ್ಳದಿರುವುದು ವಿರ್ಪಯಾಸವೇ ಸರಿ. ಹೊಳವನಹಳ್ಳಿ ಸುತ್ತು ಮುತ್ತ ಸುಮಾರು ೫೦ ಗ್ರಾಮಗಳಿದ್ದು, ಹಣ್ಣು, ತರಕಾರಿ ತರಬೇಕಾದರೆ ಕೊರಟಗೆರೆ ಪಟ್ಟಣಕ್ಕೆ ಹೋಗಬೇಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊಳವನಹಳ್ಳಿ ಅಭಿವೃದ್ಧಿ ಕಾಣದೇ ಸೊರಗುತ್ತಿದೆ. ತಕ್ಷಣ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊಳವನಹಳ್ಳಿ ಗ್ರಾ.ಪಂ. ಸಮಸ್ಯೆಗಳನ್ನ ನೋಡಿ ಇಲ್ಲಿನ ಆಡಳಿತವನ್ನು ಚುರಕುಗೊಳಿಸುವರೆ ಕಾದು ನೋಡಬೇಕಿದೆ.
ಹೊಳವನಹಳ್ಳಿ ಗ್ರಾಮಸ್ಥ ಜಯರಾಜು ಮಾತನಾಡಿ, ಎರಡು ಕೋಟಿಗೂ ಅಧಿಕ ಖರ್ಚು ಮಾಡಿ ೭೦ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದರೂ ಸಹ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮೂಲ ಸೌಕರ್ಯ ನೀಡಲು ವಿಫಲರಾದ ಕಾರಣ ಇಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಪ್ರತಿ ಶುಕ್ರವಾರ ನಡೆಯುತ್ತಿದ್ದ ಸಂತೆ ನಿಂತು ವರ್ಷಗಳೇ ಕಳೆದರೂ ಮತ್ತೆ ಸಂತೆಯನ್ನು ಪ್ರಾರಂಬಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ಹೊಳವನಹಳ್ಳಿ ಗ್ರಾಮದಲ್ಲಿರುವ ಎಪಿಎಂಸಿ ಮರುಕಟ್ಟೆಯಲ್ಲಿ ಸುಮಾರು ೭೦ಕ್ಕೂ ಅಧಿಕ ಅಂಗಡಿ ಮಳಿಗೆಗಳಿಗೆ ಏಳ್ಳು ನೀರು ಬಿಟ್ಟ ಅಧಿಕಾರಿಗಳು. ಗ್ರಾ.ಪಂ ವತಿಯಿಂದ ಯಾವುದೇ ಮೂಲ ಸೌಕರ್ಯ ನೀಡದೆ ಇರುವ ಪರಿಣಾಮ ಅಂಗಡಿ ಮಳಿಗೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿವೆ. ವಾರದ ಸಂತೆ ನಿಂತು ವರ್ಷಗಳೇ ಕಳೆದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು. ವಾರದ ಸಂತೆ ಪ್ರಾರಂಭಿಸಲು ಮೀನಾಮೇಷ. ಏಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.