ಎಪಿಎಂಸಿಯಲ್ಲಿ ಸಿಬ್ಬಂದಿ ಕೊರತೆ


ಲಕ್ಷ್ಮೇಶ್ವರ,ಅ.19: ಗದಗ ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ಎಪಿಎಂಸಿ ಮಾರುಕಟ್ಟೆ ಅತ್ಯಂತ ಚುರುಕಾಗಿ ನಡೆಯುತ್ತಿತ್ತು. ಕಳೆದ ಹತ್ತು ವರ್ಷಗಳಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬೆಳೆಗಳು ಹಾಳಾಗುತ್ತಿದ್ದು ರೈತರ ಕೃಷಿ ಉತ್ಪನ್ನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ.
ಈಗ ಅದೇ ಎಪಿಎಂಸಿ ಸಿಬ್ಬಂದಿ ಕೊರತೆಯನ್ನು ಅನುಭವಿಸುತ್ತಿದ್ದು 5 ವರ್ಷಗಳಲ್ಲಿ ಇಡೀ ಸಿಬ್ಬಂದಿಯೇ ವರ್ಗಾವಣೆ ನಿಯೋಜನೆ ಇಲ್ಲವೇ ನಿವೃತ್ತಿಯಾಗಿ ಕೇವಲ ಕಾರ್ಯದರ್ಶಿ ಮಾತ್ರ ಎಪಿಎಂಸಿ ಮಾರುಕಟ್ಟೆ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಜೂರಾದ ಸರ್ಕಾರದ ಒಟ್ಟು ಹುದ್ದೆಗಳು 16 . ಅದರಲ್ಲಿ ಒಂದು ಕಾರ್ಯದರ್ಶಿ ಒಂದು ಲೆಕ್ಕಿಗರು ಒಂದು ಪ್ರಥಮ ದರ್ಜೆ ಗುಮಾಸ್ತ ಮೂರು ಮಾರುಕಟ್ಟೆ ಸಹಾಯಕರ ಹುದ್ದೆ ಒಂದು ದ್ವಿತೀಯ ದರ್ಜೆ ಸಹಾಯಕರು ಒಂದು ಟೈಪಿಸ್ಟ್ ಒಂದು ಮಾರುಕಟ್ಟೆ ಮೇಲ್ವಿಚಾರಕರು ಎರಡು ಗ್ರೇಡರ ಹುದ್ದೆ ಮೂವರು ಸಿಪಾಯಿ ಹುದ್ದೆ ಒಂದು ವಾಹನ ಚಾಲಕ ಹುದ್ದೆ ಹೀಗೆ ಮಂಜುರಾತಿ ಇದ್ದರು ಈಗ ಕಾರ್ಯದರ್ಶಿ ಹೊರತುಪಡಿಸಿದರೆ ಎಪಿಎಂಸಿಯಲ್ಲಿ ಎಲ್ಲಾ ಹುದ್ದೆಗಳು ಖಾಲಿ ಇವೆ.
2018 ರಿಂದ ಈಚೆಗೆ ಎಲ್ಲಾ ಹುದ್ದೆಗಳು ಖಾಲಿಯಾಗಿರುವುದರಿಂದ ಎಲ್ಲವನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಈಗ ಬರದ ಸ್ಥಿತಿ ಇರುವುದರಿಂದ ಕೃಷಿ ಉತ್ಪನ್ನಗಳು ಆವಕವಿಲ್ಲ. ಒಂದೊಮ್ಮೆ ಸಮರ್ಪಕವಾಗಿ ಮಳೆಯಾಗಿ ಉತ್ಪನ್ನಗಳು ಭಾರಿ ಪ್ರಮಾಣದಲ್ಲಿ ಆವಕವಾದರೆ ಎಪಿಎಂಸಿ ಸಿಬ್ಬಂದಿ ಕೊರತೆಯಿಂದ ಅಸಹಾಯಕವಾಗಬೇಕಾಗುತ್ತದೆ .