ಎಪಿಎಂಸಿಯಲ್ಲಿ ನಾಗರಾಜ್ ಲೋಕಿಕೆರೆ ಸಂಚಾರ

ದಾವಣಗೆರೆ. ಏ.೨೯ : ಇಲ್ಲಿನ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಅವರು  ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರು, ಖರೀದಿದಾರರ ಬಳಿ ಮತಯಾಚಿಸಿದರು.ಪ್ರತಿ ದಿನವೂ ಮುಂಜಾನೆಯೇ ವಾಯುವಿಹಾರಿಗಳ ಭೇಟಿ ಮಾಡಿ ಅವರೊಂದಿಗೆ ಬೆರೆತು ಮತಯಾಚಿಸುತ್ತಾ ಗಮನ ಸೆಳೆಯುತ್ತಿದ್ದ ನಾಗರಾಜ್ ಲೋಕಿಕೆರೆ ಅವರು ಇಂದೂ ಸಹ ವಾಯುವಿಹಾರಿಗಳ ಬಳಿ ಮತಯಾಚಿಸಿ, ನಗರದ ತಾಲ್ಲೂಕು ಕಚೇರಿ (ರೈತರ ಭವನ) ಬಳಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಚಾರ ನಡೆಸಿ, ಅಲ್ಲಿನ ತರಕಾರಿ, ಹಣ್ಣು ಮತ್ತು ಹೂ ವ್ಯಾಪಾರಿಗಳು, ಖರೀದಿದಾರರ ಬಳಿ ತೆರಳಿ ಮತಯಾಚಿಸಿದರು.ಈ ವೇಳೆ ವ್ಯಾಪಾರಿಗಳು ಸಹ ನಾಗರಾಜ್ ಲೋಕಿಕೆರೆ ಅವರಿಗೆ ಪ್ರತಿಸ್ಪಂದಿಸಿ, ರೈತರ ಪರ ಕಾಳಜಿ, ಸಮಾಜ ಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಜನತೆಯ ಸಂಪೂರ್ಣ ಒಲವು ನನ್ನ ಹಾಗೂ ಬಿಜೆಪಿ ಪಕ್ಷದ ಮೇಲೆ ಇದೆ. ನಮ್ಮ ಮೇಲೆ ಜನತೆ ಮತ್ತು ನನ್ನ ನೆಚ್ಚಿನ ಕಾರ್ಯಕರ್ತರು ತೋರುತ್ತಿರುವ ಈ ವಿಶ್ವಾಸದಿಂದ ಇನ್ನೂ ಹೆಚ್ಚು ಹೆಚ್ಚು ಚುನಾವಣಾ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಸಹಾಯಕವಾಗಿದೆ. ಇದು ನನ್ನ ಗೆಲುವಿನ ಮೊದಲ ಹೆಜ್ಜೆ ಎಂದು ನಂಬಿದ್ದೇನೆ ಎಂದು ನಾಗರಾಜ್ ಲೋಕಿಕೆರೆ ತಿಳಿಸಿದರು.ನಾಗರಾಜ್ ಲೋಕಿಕೆರೆ ಅವರಿಗೆ ಅವರ ಪುತ್ರ ಅಭಿ, ಸೋದರ ಸಂಬಂಧಿ ಸಹೋದರ ಡಾ. ಮಧು ಲೋಕಿಕೆರೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಚ್ಚಿನ್, ಉಪಾಧ್ಯಕ್ಷರುಗಳಾದ ಕಿರಣ್, ಶಶಿ ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರ ತಂಡ ಸಾಥ್ ನೀಡಿತ್ತು.