ಎನ.ಪಿ.ಎಸ್.ರದ್ದು ಪಡಿಸುವುದು ಒಂದೇ ಗುರಿ:ರಾಜೇಂದ್ರ ಗಂದಗೆ

ಭಾಲ್ಕಿ:ಜು.27: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ ಸಮಸ್ತ ನೌಕರರ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸಲು ನಿರಂತರವಾಗಿ ಹೋರಾಟ ಮಾಡುವ ಮತ್ತು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಬೀದರ ಜಿಲ್ಲಾ ಅಧ್ಯಕ್ಷ ರಾಜೇಂದ್ರ ಗಂದಗೆ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಶಾಖೆ ಭಾಲ್ಕಿ ವತಿಯಿಂದ ಆಯೋಜಿಸಲಾದ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ವಿವಿಧ ಇಲಾಖೆಯ ನಿವೃತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ನೌಕರರ ಸಂಘವು ನೌಕರರಿಗೆ ಆಗುವ ಅನ್ಯಾಯವನ್ನು ಸಹಿಸುವುದಿಲ್ಲ ನೌಕರರಿಗೆ ಆಗುವ ಅನ್ಯಾಯಗಳನ್ನು ಸರಿಪಡಿಸಿ ನ್ಯಾಯ ಒದಗಿಸಿಕೊಡುವ ಬಹಳಷ್ಟು  ಕೆಲಸವನ್ನು  ಮಾಡುತ್ತಿದೆ.ನೌಕರರಿಗಾಗಿ ರಾಜ್ಯದಲ್ಲಿ ಷಡಕ್ಷರಿ ಅವರು ಮತ್ತು ಭಾಲ್ಕಿ ತಾಲ್ಲೂಕಿನಲ್ಲಿ ರಾಜಪ್ಪಾ ಪಾಟೀಲ ಅವರು ಅತ್ಯಂತ ಕ್ರಿಯಾಶೀಲವಾಗಿ ಹಗಲು ರಾತ್ರಿ ಅತ್ಯುತ್ತಮವಾಗಿ ನೌಕರರ ಪರವಾಗಿ ಅನೇಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ 2006 ನಂತರ ನೇಮಕಗೊಂಡ ನೌಕರರ ಪ್ರಮುಖ ಬೇಡಿಕೆಯಾದ ಎನ್.ಪಿ.ಎಸ್ ರದ್ದುಪಡಿಸಿ ಓ.ಪಿ.ಎಸ್ ಮರು ಜಾರಿಗೊಳಿಸುವುದು ಪ್ರಮುಖ ಬೇಡಿಕೆ ಆಗಿದೆ ಆದ್ದರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಅವರಿಗೆ ಕೈ ಜೋಡಿಸಿ ಇನ್ನೂ ಹೆಚ್ಚಿನ ಕೆಲಸವನ್ನು ಮಾಡುವ ನಿಟ್ಟಿನಲ್ಲಿ  ತಮ್ಮ ಸಲಹೆ ಮತ್ತು ಸಹಕಾರಗಳು ಇರಲಿ ಎಂದು ಹೇಳಿದರು.
 ಬಿ.ಇ.ಓ ಮಹಜರ್ ಹುಸೇನ್ ಅವರು ನಿವೃತ್ತ ನೌಕರರಿಗೆ ಸನ್ಮಾನಿಸಿ ಶುಭ ಹಾರೈಸಿ ಮಾತನಾಡಿದ್ದರು. ನೌಕರರು ಇಂದಿನ ಒತ್ತಡದ ಜೀವನದಲ್ಲಿ ತಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟಿಕೊಳ್ಳುವುದರ ಮೂಲಕ ಉತ್ತಮವಾಗಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಸೇವೆಯನ್ನು ಮಾಡಬೇಕು ಎಂದರು.

ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಣಾ ಅಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ರಾಜೇಂದ್ರ ಗಂದಗೆ ಮತ್ತು ತಾಲ್ಲೂಕಿನಲ್ಲಿ ರಾಜಪ್ಪಾ ಪಾಟೀಲ ಅವರ ನೇತೃತ್ವದಲ್ಲಿ ಸಂಘಟನೆ ಬಹಳಷ್ಟು ಕ್ರಿಯಾಶೀಲವಾಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಬಹಳ ಸಂತೋಷದ ವಿಷಯ ಆದರೆ 2006 ನಂತರ ನೇಮಕಾತಿಯಾದ ನೌಕರರ ಪ್ರಮುಖ ಬೇಡಿಕೆಯಾದ ಎನ್.ಪಿ.ಎಸ್.ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರುವ ಪ್ರಮುಖ ಕೆಲಸ ಮಾಡಬೇಕು ಎಂದು ಹೇಳಿದರು.

  ರಾಜಪ್ಪಾ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ನಾನು ತಾಲ್ಲೂಕಿನ ಎಲ್ಲಾ ಇಲಾಖೆಯ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಇನ್ನೂ ಉತ್ತಮವಾಗಿ ಕೆಲಸ ಮಾಡಲು ತಮ್ಮ ಸಹಕಾರ ಇರಲಿ ಎಂದು ಹೇಳಿದರು.

ರಮೇಶ ಬೊಗಾರ ಲೆಕ್ಕ ಪರಿಶೋಧಕರು ಸಂಘದ ವಾರ್ಷಿಕ ಲೆಕ್ಕ ಪತ್ರದ ವರದಿಯನ್ನು ವಾಚನ ಮಾಡಿ ಸಂಘಟನೆಯು ಒಂದು ವರ್ಷದಲ್ಲಿ ಮಾಡಿರುವ ಕೆಲಸ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸಿ ವಯೋನಿವೃತಿ ಹೊಂದಿರುವ ನೌಕರರನ್ನು ಸನ್ಮಾನಿ ಗೌರವಿಸಲಾಯಿತು. ರತ್ನದೀಪ ಹುಲಸೂರೆ, ರಾಹುಲ ಎಸ್.ಟಿ.ಓ ಮತ್ತು ಚಂದ್ರಕಾಂತ ತಳವಾಡೆ ರವರಿಗೆ ನಾಮ ನಿರ್ದೇಶಕ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸುನೀಲ ಬಿರಾದಾರ, ಸುಭಾಷ ಗೊಬರೆ,ಅಮೋಲ ಮೇತ್ರೆ,ಸಹದೇವ ಗೌಡಗಾಂವೆ,ಸೂರ್ಯಕಾಂತ ಸುಂಟೆ,ಬಾಲಾಜಿ ಕಾಂಬಳೆ,ಸುನೀಲಕುಮಾರ,ಸ್ಟೇಲ್ಲಾರಾಣಿ,ಲಕ್ಷ್ಮಿಬಾಯಿ,ಧನರಾಜ ಬೊಂಬುಳಗೆ,ಅಶೋಕ ಕುಂಬಾರ,ದೇವಿದಾಸ ಮೇತ್ರೆ,ಸಂತೋಷ ಚಲುವಾ,ರಾಜಕುಮಾರ ಹೊಸದೊಡ್ಡೆ ಮತ್ತಿತರರು ಉಪಸ್ಥಿತರಿದ್ದರು,ಶಿವಕುಮಾರ ಹೂವಗಾರ ಸ್ವಾಗತಿಸಿದರು,ಕುಪೇಂದ ಜಗಶೇಟ್ಟೆ ನಿರೂಪಿಸಿದರು ಮತ್ತು ಹಣಮಂತ ಕಾರಾಮುಂಗೆ ವಂದಿಸಿದ್ದರು.