(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.19: ಬೆಂಗಳೂರಿನಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರ, ವತಿಯಿಂದ ಆರ್ಮಿ ಅಟ್ಯಾಚ್ಮೆಂಟ್ ಕ್ಯಾಂಪ್ 12 ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ 34 ಕೆ.ಎ.ಆರ್. ಬಿ.ಎನ್. ಬಳ್ಳಾರಿ ಇವರು ಯಶಸ್ವಿಯಾಗಿ ಭಾಗವಹಿಸಿ ಎಲ್ಲಾ ವಿಭಾಗದಲ್ಲೂ ಆಲ್ ಓವರ್ ಚಾಂಪಿಯನ್ಶಿಪ್ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. 34 ಕೆ.ಎ.ಆರ್. ಬಿ.ಎನ್. ಬಳ್ಳಾರಿ ಇದರಲ್ಲಿ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ಜಿ.ಶಾರದಾಪ್ರಸಾದ್, ರಂಜಿತ್, ಕನಕಗಿರಿ ಎಂ., ಕಲ್ಲೇಶ್.ವಿ ಮತ್ತು ಎಂ. ಮನೋಜ್ ಕುಮಾರ್ ಇವರು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಇಂತಹ ಅಮೋಘ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ಕಾಲೇಜಿನ ಎನ್.ಸಿ.ಸಿ ಅಧಿಕಾರಿಗಳಾದ ರಂಜಿತ್ ಕುಮಾರ್ ಮತ್ತು ಕಿರಣ್ ಕುಮಾರ್ ಅವರನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೋನಂಕಿ ರಾಮಪ್ಪನವರು ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್ ಕುಮಾರ್, ಕಾರ್ಯದರ್ಶಿಗಳಾದ ಮನ್ನೆ ಶ್ರೀನಿವಾಸುಲು ಅಭಿನಂದಿಸಿದ್ದಾರೆ ಎಂದು ಕಾಲೇಜು ಪ್ರಾಚಾರ್ಯರು ತಿಳಿಸಿದ್ದಾರ.