ಎನ್.ಸಿ.ಸಿ. ಕೆಡೆಟ್‍ಗಳಿಗೆ ಆರೋಗ್ಯ ಜಾಗೃತಿ


ಸಂಜೆವಾಣಿ ವಾರ್ತೆ
ಸಂಡೂರು: ಮೇ: 07: ಎನ್.ಸಿ.ಸಿ ಆರ್ಮಿ ಕ್ಯಾಂಪ್ ನಲ್ಲಿ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳಿಗೆ ಹದಿಹರೆಯದವರ ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮ,  ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿರುವ ಎನ್.ಸಿ.ಸಿ ಆರ್ಮಿ ಟ್ರೈನಿಂಗ್ ಕ್ಯಾಂಪ್ ನಲ್ಲಿ ಗದಗ್, ಬಾಗಲಕೋಟೆ, ದಾವಣಗೆರೆ ಇತರೆ ವಿವಿಧ ಜಿಲ್ಲೆಗಳಿಂದ ಹತ್ತು ದಿನಗಳ ಮೊದಲ ಬ್ಯಾಚ್ ಎನ್.ಸಿ.ಸಿ ವಿದ್ಯಾರ್ಥಿಗಳು ಸೇನಾ ತರಬೇತಿ ಪಡೆಯಲು ಆಗಮಿಸಿದ್ದು, ಲೆಫ್ಟಿನೆಂಟ್ ಕರ್ನಲ್ ಪ್ರಭಾತ್ ಗುರಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಎಸ್.ಎಮ್ ಪವನ್ ಕುಮಾರ್ ಇವರ ಸಹಕಾರದೊಂದಿಗೆ ಪ್ರಶಿಕ್ಷಣಾರ್ಥಿಗಳಿಗೆ “ಹದಿಹರೆಯದವರ ಆರೋಗ್ಯ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಯುವ ಸಮುದಾಯ ಆರೋಗ್ಯ ಸಂಪತ್ತನ್ನು ಸುರಕ್ಷಿವಾಗಿ ರಕ್ಷಿಸಿಕೊಳ್ಳಬೇಕು, ಅರೋಗ್ಯಕರ ಜೀವನ ಶೈಲಿ, ಉತ್ತಮ ಗುಣಮಟ್ಟದ ಆಹಾರ ಸೇವನೆ, ಶುದ್ಧ ನೀರು, ವಿಶ್ರಾಂತಿ, ಸುಖಕರ ನಿದ್ದೆ, ವಾಕಿಂಗ್, ಎಕ್ಸ್ರಸೈಜ್, ಧ್ಯಾನ, ಪ್ರಾಣಾಯಾಮ ಇವೆಲ್ಲವೂ ಉತ್ತಮ ಆರೋಗ್ಯದ ಸಾಧನಗಳಾಗಿವೆ ಇವುಗಳನ್ನು ಚಾಚೂ ತಪ್ಪದೇ ಪಾಲಿಸಬೇಕು, ಆರೋಗ್ಯವನ್ನು ಹಾಳುಮಾಡುವ ಮಾದಕವಸ್ತುಗಳು,ತಂಬಾಕು,ಮದ್ಯಪಾನದಂತ ದುಶ್ಚಟಗಳಿಂದ ದೂರವಿರುವುದು ಮಾತ್ರವಲ್ಲದೇ ಇತರರನ್ನು ದೂರ ವಿರುವಂತೆ ಪ್ರೇರೇಪಿಸುವುದು ನಿಮ್ಮ ಜವಾಬ್ದಾರಿಯಾಗಿದೆ, ಇಲ್ಲಿ ಶಿಸ್ತು, ದೇಶಪ್ರೇಮ, ರಾಷ್ಟ್ರ ಭಕ್ತಿ, ಉತ್ತಮ ನಡವಳಿಕೆ ಎಲ್ಲವನ್ನು ಕಲಿಯುವುದರ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸುವುದು, ಸದೃಡ ದೇಹ ಹೊಂದಿ ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕಿದೆ ಎಂದು ಅವರು ತಿಳಿಸಿದರು,
 ನಂತರ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಮಾತನಾಡಿ ಮಾನಸಿಕ ಒತ್ತಡ, ವೈಯಕ್ತಿಕ ನೈರ್ಮಲ್ಯ, ಅನಿಮಿಯಾ ಮುಕ್ತತೆ, ಸ್ನೇಹ ಕ್ಲಿನಿಕ್ ಬಗ್ಗೆ ತಿಳಿಸಿದರು, ನಂತರ ಆರೋಗ್ಯದ ಸಮಸ್ಯೆಗಳು ಇದ್ದ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು,ಹಾಗೇ ರಕ್ತ ಹೀನತೆ ತಡೆಯಲು ನಾಲ್ಕು ವಾರಗಳಿಗಾಗುವಷ್ಟು ಐ.ಎಫ್.ಎ ವಿತರಿಸಲಾಯಿತು,
 ಈ ಸಂದರ್ಭದಲ್ಲಿ ಸಬ್ ಕರ್ನಲ್ ಕೈಲಾಸ್ ಸಿಂಗ್, ಕುಮಾರತಾಪ್, ಹವಾಲ್ದಾರ್ ರಾಜಗುರು ಎಲ್.ಟಿ ಎ.ಎನ್.ಒ ಕುಮಾರ್ ಕಲ್ಮಟ, ಶ್ರೀನಿವಾಸ್, ಮೆಜರ್ ಬಿ.ಎಸ್ ಪಾಟೀಲ್, ಕ್ಯಾಪ್ಟನ್ ವಸಂತ ಮೂಲಿಮನಿ, ಎಲ್.ಟಿ ಶ್ರೀಕಾಂತ್, ಮೇಜರ್ ಶಿರಡಿಕರಿಗಾರ್, ಹವಾಲ್ದಾರ್ ಗೌಡಪ್ಪ, ಹವಾಲ್ದಾರ್ ಮಧು, ಶುಶ್ರೂಷಣಾಧಿಕಾರಿ ಮಾರೇಶ್, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮತ್ತು ಹತ್ತು ಜಿಲ್ಲೆಯ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳು ಹಾಜರಿದ್ದರು