ಎನ್.ಸಿ.ಸಿ ಕಛೇರಿಯಲ್ಲಿನಿವೃತ್ತ ಸೈನಿಕರಿಗೆ ವೀರನಾರಿಯರಿಗೆ ಸೌಲಭ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.09: ದೇಶದ ರಕ್ಷಣೆಯ ಸೇವೆ ಮಾಡಿ ನಿವೃತ್ತರಾಗಿ ಬಂದ ಯೋಧರು ಹಾಗೂ ವೀರನಾರಿಯರು ತಮ್ಮ ಕೆಲಸ ಕಾರ್ಯಗಳಿಗೆ ನಗರದ ಎನ್.ಸಿ.ಸಿ ಕಛೇರಿಗೆ ಬಂದಾಗ ವಿಶ್ರಾಂತಿ ಪಡೆಯಲು ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿದ್ದು ನಿನ್ನೆ ಇವನ್ನು ಬಳಕೆಗೆ ಸಮರ್ಪಿಸಲಾಗಿದೆ.
ಗ್ರೂಪ್ ಕಮಾಂಡರ್ ಡಿ.ಎಸ್.ಧಾಮಿ, ಆಡಳಿತಾಧಿಕಾರಿ ವಿಜಯನ್ ಟಾಕೂರ್, ತರಬೇತಿ ಅಧಿಕಾರಿ ಷಾಜಿ ಪಿ.ಅವರು ಈ ಸಂದರ್ಭದಲ್ಲಿದ್ದರು.
ಇನ್ನು ಮುಂದೆ ಬಳ್ಳಾರಿ ಎನ್.ಸಿ.ಸಿ ಕಛೇರಿ ಅದರ ಆವರಣದ ಕ್ಯಾಂಟೀನ್ ಗೆ ಬರುವ ಯೋಧರು, ನಿವೃತ್ತ ಯೋಧರು, ವೀರನಾರಿಯರು ಈ ಸೌಲಭ್ಯಗಳನ್ನು ಉಪಯೋಗಿಸಬಹುದಾಗಿದೆ.