ಎನ್.ಸಿ.ಸಿ. ಅಧಿಕಾರಿ ಫಸ್ಟ ಆಫೀಸರ್ ಮುಜೀಬುದ್ದಿನ್‍ಯವರಿಗೆ ಮುಖ್ಯಮಂತ್ರಿ ಪ್ರಶಂಸನಾ ಪತ್ರ

ಹುಮನಾಬಾದ :ಮಾ. 30 : 32ನೇ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಕಲಬುರಗಿ ಹಮ್ಮಿಕೊಂಡ ಸನ್ಮಾನ ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಹುಮನಾಬಾದನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಸಿ.ಸಿ. ಯುನಿಟ 2020-21ರ ಕೊವೀಡ-19 ಪೆಂಡಾಮಿಕ್‍ನಲ್ಲಿ ಸೇವೆ ಸಲ್ಲಿಸಿದನ್ನು ಪರಿಗಣಿಸಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಪ್ರಶಂಸನಾ ಪತ್ರ, ಜೂನೀಯರ್‍ವಿಂಗ ಎನ್.ಸಿ.ಸಿ. ಅಧಿಕಾರಿಗಳಾದ ಫಸ್ಟ ಆಫೀಸರ್ ಮಜೀಬುದ್ದಿನ್‍ರವರಿಗೆ ನೀಡಿಲಾಗಿತ್ತು ಅದನ್ನು ಬಟಾಲಿಯನ್ ಕಮಾಂಡರಾದ ಕರ್ನಲ್ ಎಸ್.ಕ.ಎ. ತಿವಾರಿಯವರು ನೀಡಿ ಸನ್ಮಾನಿಸಿದರು ಹಾಗೂ ಕಾಲೇಜಿಗೆ ಬಟಾಲಿಯನ್ ಲೇವಲ್ ಬೆಸ್ಟ ಇನ್ಸಿಟಿಟೂಷನ್ ಟ್ರೋಫಿ ನೀಡಲಾಯಿತು. ಟ್ರೋಫಿಯನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಜಿ. ಪರಮೇಶ್ವರ ಹಾಗೂ ಎನ್.ಸಿ.ಸಿ. ಅಧಿಕಾರಿಗಳಿಗೆ ನೀಡಿ ಸನ್ಮಾನಿಸಿದರು ಎಂದು ಸಮಾರಂಭದ ಸಂಚಾಲಕರಾದ ಮೇಜರ್ ಡಾ: ಪಿ. ವಿಠ್ಠಲ ರಡ್ಡಿಯವರು ತಿಳಿಸಿದರು.