ಎನ್ ಸಿಪಿ ಬಣಗಳ ನಡುವೆ ಪರಸ್ಪರ ಆರೋಪ: ಸ್ಪೀಕರ್ ಗೆ ದೂರು

ಮುಂಬೈ,ಜು.4- ಪಕ್ಷ ವಿರೋದಿ ಚಟುವಟಿಕೆಯ ಆರೋಪದ ಮೇಲೆ ಪರಸ್ಪರ ಶಾಸಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಮಹಾರಾಷ್ಡ್ರ ವಿಧಾನಸಭೆ ಸ್ಪೀಕರ್ ಅವರಿಗೆ ದೂರು ನೀಡಿದ ಬೆನ್ನಲ್ಲೇ  ಉಪ ಮುಖ್ಯಮಂತ್ರಿ ಅಜಿತ್ ಪವಾರ್  ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ಶಾಸರು ಮರಳಿ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಗುಂಪಿಗೆ ಸೇರ್ಪಡೆಯಾಗಿದ್ದಾರೆ.

ಏಕನಾಥ್  ಶಿಂಧೆ  – ದೇವೇಂದ್ರ ಪಡ್ನವಿಸ್ ಸರ್ಕಾರದಲ್ಲಿ  ಅಜಿತ್ ಪವಾರ್   ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಅಜಿತ್ ಪವಾರ್ ತಮ್ಮ ಜೊತೆ  40 ಎನ್‌ಸಿಪಿ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದರು. ಅದರಲ್ಲಿ
ಸತಾರಾ ಶಾಸಕ ಮಕ್ರಂದ್ ಪಾಟೀಲ್ ಮತ್ತು ಉತ್ತರ ಕರಾದ್ ಶಾಸಕ ಬಾಳಾಸಾಹೇಬ್ ಪಾಟೀಲ್  ಅವರು ಶರದ್ ಪವಾರ್ ಅವರ ಪಾಳಯಕ್ಕೆ ಮರಳಿದ್ದಾರೆ.

ಪ್ರತಿಸ್ಪರ್ಧಿ ಪಕ್ಷದ ಬಣಗಳು ಪರಸ್ಪರರ ವಿರುದ್ಧ  ಕ್ರಮ ಕೈಗೊಂಡಿರುವುದಾಗಿ ಘೋಷಿಸಿದ್ದಾರೆ. ಇನ್ನೊಂದು ಬದಿಯ ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಜಭವನದಲ್ಲಿದ್ದ ಶಿರೂರು ಸಂಸದ ಅಮೋಲ್ ಕೋಲ್ಹೆ ಅವರು ಶರದ್ ಪವಾರ್ ಅವರ ಗುಂಪಿಗೆ ಮರಳುವುದಾಗಿ ಹೇಳಿದ್ದಾರೆ.

ಉಚ್ಚಾಟನೆ:

ಈ ನಡುವೆ ಪಕ್ಷದ ಶರದ್ ಪವಾರ್ ಅವರು  ಪಕ್ಷ ವಿರೋದಿ ಚಟುವಟಿಕೆಯ ಆಧಾರದ ಮೇಲೆ
ಸಂಸದರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತಟ್ಕರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಅಜಿತ್  ಪವಾರ್  ಅವರ ಗುಂಪು  ಎನ್ ಸಿಪಿ ಮಹಾರಾಷ್ಟ್ರ ಅಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ಎನ್‌ಸಿಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಆ ಸ್ಥಾನಕ್ಕೆ ಸುನೀಲಗ ತತ್ಕರೆ ಅವರನ್ನು ನೇಮಿಸಿದ್ದಾರೆ . ತತ್ಕರೆ ಅವರ ಪುತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಜಿತ್ ಪವಾರ್  ಮತ್ತು ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಇತರ ಎಂಟು ಎನ್‌ಸಿಪಿ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ವಿಧಾನಸಭಾ ಸ್ಪೀಕರ್‌ ಅವರಿಗೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್  ಗುಂಪು ಮನವಿ ಮಾಡಿದೆ.

ಈ ನಡುವೆ ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಅನರ್ಹಗೊಳಿಸುವಂತೆ   ಕೋರಿ ಅಜಿತ್ ಪವಾರ್  ನೇತೃತ್ವದ  ಬಣ  ಸ್ಪೀಕರ್‌ಗೆ  ಮನವಿ ಮಾಡಿದೆ.