
ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮೇ.13: ಬಾರಿ ಕುತೂಹಲ ಕೆರಳಿಸಿದ್ದ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಪಲಿತಾಂಶ : ಭರ್ಜರಿ ಗೆಲುವು ಸಾಧಿಸಿದ ಎನ್.ವೈ ಗೋಪಾಲಕೃಷ್ಣ. ಕಾಂಗ್ರೆಸ್ ನ ಅಭ್ಯರ್ಥಿ ಯಾದ ಎನ್. ವೈ. ಗೋಪಾಲಕೃಷ್ಣ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿದ್ದಾರೆ.
ಮತ ಎಣಿಕೆ ಪ್ರಾರಂಭದಿಂದಲೂ ಮುನ್ನಡೆಯನ್ನು ಕಾದಿರಿಸಿ ಕೊಂಡು ಬಂದ ಕಾಂಗ್ರೆಸ್ ಅಭ್ಯರ್ಥಿ ಎನ್. ವೈ. ಗೋಪಾಲಕೃಷ್ಣ ರನ್ನು ಕಾಂಗ್ರೆಸ್ ನ ಮತದಾರ ಕೈಬಿಡದೆ ಭರ್ಜರಿ ಗೆಲುವಿನತ್ತ ತಂದಿದ್ದಾನೆ.
ಇಂದು ನಡೆದ ಮತ ಎಣಿಕೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಗೋಪಾಲಕೃಷ್ಣ 100,860 ಮತ ಪಡೆದರೇ, ಬಿಜೆಪಿಯ ಎಸ್. ತಿಪ್ಪೇಸ್ವಾಮಿ 81,001ಮತ ಗಳಿಸಿದರು ಇದರಿಂದ ಎನ್. ವೈ. ಗೋಪಾಲಕೃಷ್ಣ 19,859 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಕಾಂಗ್ರೆಸ್ ಅಭ್ಯರ್ಥಿ ಎನ್ಯ. ವೈ. ಗೋಪಾಲಕೃಷ್ಣ ಜಯಗಳಿಸುತ್ತಿದಂತೆ ಪಟ್ಟಣದ ಮತ್ತು ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕ್ಷೇತ್ರದ ಜನರಿಗೆ ಎನ್. ವೈ ಗೋಪಾಲಕೃಷ್ಣ ಅಭಿನಂದನೆ ತಿಳಿಸಿದ್ದಾರೆ.