
ಕಲಬುರಗಿ:ಆ.26:*ಕೊಲಾಜ್ ಆರ್ಟ್ *COLLAGE ART* ತಂತ್ರವು 20ನೇ ಶತಮಾನದ ಪ್ರಾರಂಭದಲ್ಲಿ ಬೆಳಕಿಗೆ ಬಂದಿದ್ದು ಕೊಲಾಜ್ ಎಂಬುದು ಫ್ರೆಂಚ್ ಪದ. ಅಂಟಿಸು .ಜೋಡಿಸು. ಎಂಬುದು ಕೊಲಾಜ್ ಪದದ ಅರ್ಥ ಬಣ್ಣ ಬಣ್ಣದ ವೃತ್ತ ಪತ್ರಿಕೆಯ ತುಂಡುಗಳನ್ನು ಬಳಸಿ ಅವಶ್ಯವಿದ್ದಲ್ಲಿ ಬಣ್ಣ ಹಾಗೂ ರೇಖೆಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಬಹುದು ಉದಾಹರಣೆ ನಿಸರ್ಗ ಕ್ರೀಡೆ ರಾಜಕಾರಣಿ ಕಲಾವಿದರು ಕಲಾಕೃತಿಗಳು ಇತ್ಯಾದಿ ಯಾವುದೇ ಒಂದು ವಿಷಯದ ಅಡಿ ಉದಾ . ಚಂದ್ರಯಾನ -3 ಉಡಾವಣೆಯಿಂದ, ಅಂತಿಮ ಘಟ್ಟ ತಲುಪುವರೆಗೆ ವರೆಗೆ ರೋಚಕ ಕ್ಷಣಗಳ ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳನ್ನು ತನಗೆ ಇಷ್ಟ ಬಂದ ರೀತಿಯಲ್ಲಿ ಕತ್ತರಿಸಿ ಜಾಣ್ಮೆ ರೀತಿಯಲ್ಲಿ ಜೋಡಿಸಿ ಅಂಟಿಸಿ ಸುಂದರವಾದ ಕಲಾಕೃತಿ ರಚಿಸುವುದೇ ಕೊಲಾಜ್ ಆರ್ಟ್* 8ನೇ ತರಗತಿಯ ವಿದ್ಯಾರ್ಥಿನಿಯರಿಂದ *ಚಂದ್ರಯಾನ -3ಕೊಲಾಜ್ ಆರ್ಟ್ ರಚನೆ..
ಚಂದ್ರಯಾನ ಮೂರು ಯಶಸ್ವಿಯಾದ ಹಿನ್ನೆಲೆಯಲ್ಲಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾದ ಚಿತ್ರಗಳನ್ನು ಸಂಗ್ರಹಿಸಿ ಕೋಲಾಜ್ *COLLAGE ART* ಕಲಾಕೃತಿಗಳನ್ನು ನೂತನ ವಿದ್ಯಾಲಯ ಕನ್ಯಾ ಪ್ರೌಢಶಾಲೆ ವಿದ್ಯಾರ್ಥಿಗಳು ರಚಿಸಿರುತ್ತಾರೆ.