ಎನ್.ವಿ.ಬಾಬುರ ಮೈ ಇಂಗ್ಲೀಷ್ ಬುಕ್ ಪುಸ್ತಕ ಬಿಡುಗಡೆ

ಕೆ.ಆರ್.ಪೇಟೆ. ಆ.3:- ಶಿಕ್ಷಕ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಪುಸ್ತಕಗಳನ್ನು ಹೊರತಂದು ಕಲಿಕಾಂಶಗಳನ್ನು ಸರಳವಾಗಿ ಬೊಧಿಸಲು ಬೆರವಾಗುತ್ತಿರುವ ಎನ್.ವಿ.ಬಾಬುರವರ ಕಾರ್ಯತತ್ಪರತೆ ಇತರರಿಗೆ ಮಾದರಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು ತಿಳಿಸಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಉಯ್ಗೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎನ್.ವಿ.ಬಾಬು ಹೊರತಂದಿರುವ ಮೈ ಇಂಗ್ಲೀಷ್ ಬುಕ್ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಶಿಕ್ಷಕರು ವೃತ್ತಿಯಲ್ಲಿ ಪ್ರಾವೀಣ್ಯತೆ ಹೊಂದಿ ತಾವು ಬೋಧಿಸುವ ಕ್ಷೇತ್ರಗಳಲ್ಲಿ ಕ್ಲಿಷ್ಟತೆಯ ಅಂಶಗಳನ್ನು ಮಕ್ಕಳಿಗೆ ಸರಳವಾಗಿ ಅರ್ಥೈಸಲು ಅನುಕೂಲವಾಗುವಂತೆ ಪುಸ್ತಕಗಳನ್ನು ಹೊರತರುತ್ತಿರುವುದು ಸಂತಸದ ವಿಷಯವಾಗಿದೆ. ಈ ನಿಟ್ಟಿನಲ್ಲಿÀ್ಪುಸ್ತಕದ ಕತೃ ಎನ್.ವಿ.ಬಾಬು ತಮ್ಮ ಇಪ್ಪತ್ತನೇ ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ಸವಿನೆನಪಿಗಾಗಿ ಈ ಪುಸ್ತಕ ಬಿಡುಗಡೆಗೊಳಿಸುತ್ತಿರುವುದು ಸಂತಸದ ವಿಷಯ ಶಿಕ್ಷಕರು ವೃತ್ತಿಯ ಜೊತೆಗೆ ಯಾವುದಾದರೊಂದು ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುವುದು ಅವರ ಸಾಮಾಜಿಕ ಬದ್ದತೆಯನ್ನು ತೋರುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಸುಲಭವಾಗಿ ಚಿತ್ರಗಳೊಂದಿಗೆ ಹೋಲಿಸಿ ಇಂಗ್ಲೀಷ್ ಕಲಿಯಲು ಸಹಕಾರಿಯಾಗಿದೆ.
ತರಗತಿ ಕೋಣೆಯಲ್ಲಿ ಇಂಗ್ಲೀಷ್ ಕಲಿಕೆಯಲ್ಲಿ ಎದುರಾಗುವ ಸನ್ನಿವೇಷಗಳನ್ನು ಸರಳವಾಗಿ ಪರಿಹರಿಸಿ ಮಕ್ಕಳಿಗೆ ಸುಲಭವಾಗಿ ಮನದಟ್ಟು ಮಾಡಬಹುದಾದ ಅಂಶಗಳನ್ನು ಈ ಪುಸ್ತಕದಲ್ಲಿ ಬರೆಯಲಾಗಿದ್ದು ಶಿಕ್ಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಮೋಹನ್‍ಕುಮಾರ್, ಬಿಐಇಆರ್‍ಟಿ ಸಂಪನ್ಮೂಲ ವ್ಯಕ್ತಿ ಆರ್.ಬಿ.ಉದೇಶ್‍ಗೌಡ. ಸಿಆರ್‍ಪಿಗಳಾದ ಮಹೇಶ್, ಕೇಶವಮೂರ್ತಿ, ಉಯ್ಗೋನಹಳ್ಳಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಶ್ರೀಧರ್, ಮುಖ್ಯಶಿಕ್ಷಕಿ ಮಂಜಮ್ಮ, ಶಿಕ್ಷಕರಾದ ಹೆಚ್.ಜಿ.ನಾಗೇಂದ್ರ, ಎಸ್.ಆರ್.ಅನಿತ, ಎಂ.ಎನ್.ನಾಗೇಂದ್ರ, ರಂಜಿತ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.