
ಚಿಕ್ಕಬಳ್ಳಾಪುರ,ಏ.೧೧- ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲುವಳ್ಳಿ ಎನ್ ರಮೇಶ್ ೭೦ನೇ ವರ್ಷದ ಹುಟ್ಟು ಹಬ್ಬವನ್ನು ತಾಲೂಕಿನ ಸುಲ್ತಾನಪೇಟೆ ದ್ವಾರಕಮಯಿ ವೃದ್ದಾಶ್ರಮದ ವೃದ್ದರಿಗೆ ಒಬ್ಬಟ್ಟು ಊಟ ಮಾಡಿಸಿ ತಾನೆ ಕೈಯಿಂದ ಬಡಿಸಿ ಅವರಿಂದಲೆ ಕೇಕ್ ಕತ್ತರಿಸಿ ಅವರ ಆಶೀರ್ವಾದ ಪಡೆಯುವ ಮೂಲಕ ಆಚರಿಸಿಕೊಂಡರು.
ರೈತನಾಯಕರು,ಸಮಾಜ ಸೇವಕರ ಯಲುವಳ್ಳಿ ಎನ್ ರಮೇಶ್ ಅವರು ಇಂದು ೬೯ ತುಂಬಿ ೭೦ ನೇ ವರ್ಷಕ್ಕೆ ಕಾಲಿಟ್ಟರು ಅವರು ಪ್ರತಿವರ್ಷ ಹುಟ್ಟು ಹಬ್ಬಕ್ಕೆ ಸುಲ್ತಾನಪೇಟೆ ದ್ವಾರಕಾಮಯಿ ವೃದ್ದಾಶ್ರಮಕ್ಕೆ ಬೇಟಿ ಕೊಟ್ಟು ಅಲ್ಲಿರುವ ವೃದ್ದರೆಲ್ಲರಿಗೂ ತನ್ನ ಕೈಯ್ಯಾರ ಊಟ ಬಡಿಸಿ ಅವರಿಂದ ಆಶೀರ್ವಾದ ಪಡೆದು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಾರೆ.ಇವತ್ತು ಸಹ ವೃದ್ದಾಶ್ರಮದ ವೃದ್ದರೊಂದಿಗೆ ಕೇಕ್ ಕತ್ತರಿಸಿ ಅವರಿಗೆ ತಿನಿಸಿ ಅವರ ಕಾಲಿಗೆ ಮುಗಿದು ಆಶೀರ್ವಾದ ಪಡೆದರು ಈ ವೇಳೆ ಭಾವುಕರಾದ ರಮೇಶ್ ಇವರೆಲ್ಲನ್ನು ನೋಡಿದರೆ ನನ್ನ ತಂದೆ ತಾಯಿಗಳು ಜ್ಞಾಪಕ ಬರುತಿದ್ದಾರೆ ಕಳೆದ ೧೫ ವರ್ಷಗಳಿಂದ ಇದೆ ಜಾಗದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾ ಬಂದಿದ್ದೇನೆ ಇವರೊಂದಿಗೆ ಮಾತನಾಡಿ ಅವರೊಂದು ಊಟ ಮಾಡಿದರೆ ನನಗೆ ಸಂತೋಷ ಉಂಟಾಗುತ್ತದೆ ಎಂದರು.
ಯಲುವಳ್ಳಿ ರಮೇಶಣ್ಣ ಜತೆಗೆ
ಅವರ ಕುಟುಂಬ ಮಕ್ಕಳು ಬಾಗವಹಿಸಿ ವೃದ್ದರಿಗೆ ಊಟ ಬಡಿಸಿದರು ಯಲವಳ್ಳಿ ಜನಾರ್ದನ ರಮೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯಕಣಜೇನಹಳ್ಳಿ ರಮೇಶ್, ಕೊಂಡೇನಹಳ್ಳಿ ಚಂದ್ರಣ್ಣ,ರಮೇಶ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಶಿವರಾಮ್, ಹನುಮಂತಪ್ಪ,ಶ್ರೀದರ್,ರವಿಚಂದ್ರ ಜನ್ನಿ,ಜೀವನ್ ಇತರೆ ಅಪಾರ ಅಭಿಮಾನಿಗಳು ಇದೆ ಸ್ಥಳಕ್ಕೆ ಬಂದು ರಮೇಶಣ್ಣಗೆ ಶುಭಕೋರಿದರು.