
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.19: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಸುವರ್ಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಕ್ಕೆ ಶ್ರೀಮತಿ ಲಕ್ಷ್ಮಿ ಅರುಣ ಜನಾರ್ಧನ ರೆಡ್ಡಿ ರವರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಎಫ್ ಪಿ ಎ ಐ ಬಳ್ಳಾರಿ ಶಾಖೆಯು ಕಳೆದ 50 ವರ್ಷ ಸೇವೆಯಲ್ಲಿ ಕೈಜೋಡಿಸಬೇಕೆನ್ನುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು. ಬಳ್ಳಾರಿಯ ಎಲ್ಲಾ ಶಾಲಾ ಕಾಲೇಜು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಅದರ ಅಂಗವಾಗಿ ಗುಂಪು ನೃತ್ಯ ವಿಭಾಗದಲ್ಲಿ 20
ನೃತ್ಯ ಗುಂಪುಗಳು, ರಂಗೋಲಿ ಸ್ಪರ್ಧೆಯಲ್ಲಿ 25 ಸ್ಪರ್ಧಾರ್ಥಿಗಳು, ಹಿರಿಯ ಮತ್ತು ಹಿರಿಯ ಸಂಗೀತ ಸ್ಪರ್ಧೆಯಲ್ಲಿ 60 ಸ್ಪರ್ಧಾರ್ಥಿಗಳು, ಮೆಹೆಂದಿ ಸ್ಪರ್ಧೆಯಲ್ಲಿ 25 ಸ್ಪರ್ಧಾರ್ಥಿಗಳು, ಏಕಪಾತ್ರ ಅಭಿನಯದಲ್ಲಿ 15, ಚಿಕ್ಕ ಮಕ್ಕಳ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ 30 ಮಕ್ಕಳಿದ್ದು ಎರಡನೇ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.