ಎನ್.ಪಿ.ಎಸ್ ರದ್ದುಪಡಿಸಿ ಒಪಿಎಸ್ ಜಾರಿಯಾಗುವವರೆಗೆ ನಮ್ಮ ಹೋರಾಟ : ಶಾಂತಾರಾಮ

ಔರಾದ :ನ.4: ನಿಶ್ಚಿತ ಪಿಂಚಣಿ ನಮ್ಮ ಹಕ್ಕಾಗಿದೆ, ನೌಕರರ ಜೀವನ ಸುಭದ್ರವಲ್ಲದ ಎನ್‍ಪಿಎಸ್ ಯೋಜನೆ ರದ್ದು ಪಡಿಸಿ ಒಪಿಎಸ್ ಜಾರಿಯಾಗುವವರೆಗೆ ನಮ್ಮ ಹೋರಾಟ ನಿಲ್ಲದು ಎಂದು ಎನ್‍ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ತೇಜ್ ನೌಕರರಿಗೆ ಕರೆ ನೀಡಿದರು.

ಪಟ್ಟಣದಲ್ಲಿ ಗುರುವಾರ ಒಪಿಎಸ್ ಸಂಕಲ್ಪ ಯಾತ್ರೆಯ ಹಿನ್ನೆಲೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ ಇಲ್ಲದ ಬದುಕು ಬೆಳಕಿಲ್ಲದ ದಾರಿಯಂತೆ, ಈ ಯೋಜನೆಯಿಂದ ರಾಜ್ಯಾದ್ಯಂತ ಪ್ರಸ್ತುತ ಹಲವು ಕುಟುಂಬಗಳು ಬೀದಿಗೆ ಬಂದಿದ್ದು, ಭವಿಷ್ಯದಲ್ಲಿ ನಮ್ಮ ಪರಿಸ್ಥಿತಿಯೂ ಹಾಗೆಯೇ ಆಗಲಿದೆ.
ಹಾಗಾಗಿ ಪ್ರತಿಯೊಬ್ಬರು ಡಿಸೆಂಬರ್ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ಪಾಲ್ಗೊಂಡು ಎನ್‍ಪಿಎಸ್ ನೌಕರರ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲಿಸಬೇಕು ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ ಅವರು ಮಾತನಾಡಿದರು, ಸುಮಾರು 500ಕ್ಕೂ ಹೆಚ್ಚಿನ ನೌಕರರು ಕನ್ನಡಾಂಬೆ ವೃತ್ತದಿಂದ ನಡೆದ ಒಪಿಎಸ್ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ ಅಬಲೂರ್, ಸಿದ್ದು ಸಂಗಣ್ಣ, ಚಂದ್ರಕಾಂತ ತಳವಾರ್, ಧರ್ಮರಾಜ ಜವಳಿ, ದಯಾನಂದ ಎಲ್, ಶಿವರಾಜ ಕೊಣ್ತಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ, ಉಪಾಧ್ಯಕ್ಷ ಪಂಡರಿ ಆಡೆ, ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಘಾಟೆ, ವಿಶ್ವನಾಥ ಬಿರಾದಾರ್, ಗಜಾನನ ಮಳ್ಳಾ, ಶಿವಾಜಿ ಪಾಟೀಲ್, ಮಾಣಿಕರಾವ ಪವಾರ, ಚಂದ್ರಕಾಂತ ತಳವಾಡೆ, ತಾಲೂಕು ಅಧ್ಯಕ್ಷ ಮಹಾದೇವ ಚಿಟಗೀರೆ, ರಂಜೀತ ಸಿಂಧೆ, ಶಮಶುದ್ದಿನ್ ಮುಲ್ಲಾ, ಪ್ರದೀಪ ಗುಬನೂರೆ ಸೇರಿದಂತೆ ಇನ್ನಿತರರಿದ್ದರು.