ಎನ್.ಪಿ.ಇ.ಪಿ ಸಹಪಠ್ಯ ಸ್ಪರ್ಧೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಆ.೨೮: ರಾಷ್ಟಿçÃಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿ(ಓPಇP) ಸಹಪಠ್ಯ ಸ್ಪರ್ಧಾ ಚಟುವಟಿಕೆಗಳನ್ನು ಶಾಲೆ ಮತ್ತು ತಾಲೂಕು ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ  ಓPಇP-2023 ರ ಸ್ಪರ್ಧಾ ಚಟುವಟಿಕೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಜನಪದ ನೃತ್ಯ, ಪಾತ್ರಾಭಿನಯ ಸ್ಪರ್ಧೆ ಆಯೋಜಿಸಿ ಶಾಲೆಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಎಸ್.ಡಿ.ಎಂ,.ಸಿ ರವರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿ ಸ್ಪರ್ಧೆಯ ಉದ್ದೇಶ, ವಿದ್ಯಾರ್ಥಿಗಳು/ವೀಕ್ಷಕರ ಮೇಲೆ ಪ್ರಭಾವ ಕುರಿತು ಅಭಿಪ್ರಾಯ ಸಂಗ್ರಹಿಸಿ ಫೋಟೋ ಸಹಿತ ವರದಿಯನ್ನು ಡಯಟ್ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದರು. ಶಾಲಾ ಹಂತ ಮತ್ತು ತಾಲೂಕು ಹಂತದ ಸ್ಪರ್ಧೆ ನಡೆಸಲು ಸೆಪ್ಟೆಂಬರ್-8 ಕೊನೆಯ ದಿನಾಂಕವಾಗಿದ್ದು ತಾಲೂಕು ಹಂತದ ನೋಡಲ್ ಅಧಿಕಾರಿಗಳು ಕಾರ್ಯಕ್ರಮ ಯಶಸ್ವಿಗೊಳಿಸಿ ಪ್ರಥಮ ಸ್ಥಾನ ಪಡೆದ ತಂಡವನ್ನು ಜಿಲ್ಲಾ ಹಂತದ ಸ್ಪರ್ಧೆಗೆ ಕಳಿಸಬೇಕು ಎಂದು ತಿಳಿಸಿದರು.ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಓಅಇಖಖಿ ಯು ಓPಇP ಎಂಬ ರಾಷ್ಟçಮಟ್ಟದ ಕಾರ್ಯಕ್ರಮ ಆಯೋಜಿಸಿದೆ. ವಿದ್ಯಾರ್ಥಿಗಳಲ್ಲಿ ಆಹಾರ ಮತ್ತು ಆರೋಗ್ಯ, ವೈಯಕ್ತಿಕ ಸುರಕ್ಷತೆ, ಜೀವನ ಕೌಶಲಗಳನ್ನು ಬೆಳೆಸಲು ಸ್ಪರ್ಧಾ ಚಟುವಟಿಕೆಗಳು ಪೂರಕವಾಗಿವೆ. ಎನ್.ಪಿ.ಇ.ಪಿ ಥೀಮ್ ಆಧಾರಿತ ಪಾತ್ರಾಭಿನಯ ಸ್ಪರ್ಧೆಯನ್ನು ಸರ್ಕಾರಿ ಪ್ರೌಢಶಾಲೆಯ 9 ನೇತರಗತಿಯ ಮಕ್ಕಳಿಗೆ, ಜನಪದ ನೃತ್ಯ ಸ್ಪರ್ಧೆಯನ್ನು 8 ಮತ್ತು 9 ನೇ ತರಗತಿಯ ಮಕ್ಕಳಿಗೆ ಶಾಲಾ ಹಂತ, ತಾಲೂಕು ಹಂತ, ಜಿಲ್ಲಾ ಹಂತ, ರಾಜ್ಯ ಹಂತ, ಪ್ರಾದೇಶಿಕ ಹಂತ, ರಾಷ್ಟç ಹಂತ 6 ಹಂತಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದರು. ಜನಪದ ನೃತ್ಯ ಸ್ಪರ್ಧೆಯ ಥೀಮ್‌ಗಳು- ವಿದ್ಥಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಮಾನ ಅವಕಾಶ, ಮಗುವಿನ ಬೆಳವಣಿಗೆಯಲ್ಲಿ ಕೂಡು ಕುಟುಂಬಗಳ ಪಾತ್ರ, ಪರಿಸರ ಸಂರಕ್ಷಣೆ, ಮಾದಕ ವ್ಯಸನದ ತಡೆಗಟ್ಟುವಿಕೆ, ಹದಿಹರೆಯದ ಸಮಯದಲ್ಲಿ ಆರೋಗ್ಯಕರ ಸಂಬAಧಗಳು, ಇದರಲ್ಲಿ ಒಂದು ಥೀಮ್ ಗೆ 4 ರಿಂದ 6 ಮಕ್ಕಳ ಒಂದು ತಂಡ ಭಾಗವಹಿಸಬೇಕು. ಪಾತ್ರಾಭಿನಯ ಸ್ಪರ್ಧೆಯ ಥೀಮ್‌ಗಳು- ಆರೋಗ್ಯಕರ ಬೆಳವಣಿಗೆ, ಪೌಷ್ಠಿಕ ಆಹಾರ ಮತ್ತು ಸುಸ್ಥಿರ ಆರೋಗ್ಯ, ವೈಯಕ್ತಿಕ ಸುರಕ್ಷತೆ, ಅಂತರ್ಜಾಲ ಸುರಕ್ಷಿತ ಸದ್ಭಳಕೆ, ಮಾದಕ ವ್ಯಸನದ ಕಾರಣಗಳು ಮತ್ತು ತಡೆಗಟ್ಟುವಿಕೆ ಇದರಲ್ಲಿ ಒಂದು ಥೀಮ್ ಗೆ 4 ರಿಂದ 5 ಮಕ್ಕಳ ತಂಡ ಸ್ಪರ್ಧೆಯಲ್ಲಿ ಭಾಗವಹಿಸಿ ಇಂಗ್ಲಿ಼ಷ್/ಹಿAದಿ ಭಾಷೆಯಲ್ಲಿ ಪ್ರಸ್ತುತ ಪಡಿಸಲು ಅವಕಾಶವಿದೆ. ಪ್ರತಿ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.