ಎನ್.ಡಿ.ಪಿ.ಎಸ್ ಮತ್ತು ಕೋಟ್ಪಾ -2003ರ ಕಾಯ್ದೆ ಕಾರ್ಯಾಗಾರ ಉದ್ಘಾಟನೆ

ಕಲಬುರಗಿ: ಮಾ 10: ಎನ್.ಡಿ.ಪಿ.ಎಸ್ ಗೆ ಸಂಬಂಧಿಸಿದಂತೆ ಗುಲಬರ್ಗಾದಲ್ಲಿ ಗಾಂಜಾ ಕೇಸ್‍ಗಳ ಬಗ್ಗೆ ಹೆಚ್ಚಾಗಿ ಕಾಣಬಹುದು. ತನಿಖಾಧಿಕಾರಿಗಳು ಇಂತಹ ಪ್ರಕರಣಗಳ ಬಗ್ಗೆ ಮಾಹಿತಿ ಸಿಕ್ಕಾಗ ಅದಕ್ಕೆ ತಕ್ಕ ಕ್ರಮ ಕೈಗೊಂಡು ತುರ್ತಾಗಿ ಮೇಲ್ದರ್ಜೆ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಧ ಕೃಷ್ಣಾಜೀ ಬಾಬುರಾವ್ ಪಾಟೀಲ್ ಎಂದರು.
ಶುಕ್ರವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ “ಎನ್.ಡಿ.ಪಿ.ಎಸ್ ಮತ್ತು ಕೋಟ್ಪಾ -2003ರ ಕಾಯ್ದೆ ಕುರಿತು ಕಾರ್ಯಗಾರವನ್ನು ಸಸಿಗೆ ನೀರು ಉಣ್ಣಿಸುವುದರ ಮೂಲಕ ಉದ್ಫಾಟಿಸಿ ಮಾತನಾಡಿದರು.
ಎನ್.ಡಿ.ಪಿ.ಎಸ್ ಯಾಕ್ಟ್ ಗೆ ಸಂಬಂಧಿಸಿದಂತೆ ಪ್ರಕ್ಷೇಪಣೆಯನ್ನು ಅನುಸರಿಸಬೇಕು ಎಂದರು. ತಂಬಾಕು ಸೇವನೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳದೆ ಈ ಯೋಜನೆಯ ಬಗ್ಗೆ ಸಮಗ್ರ ಅವಲೋಕನ ಮಾಡಿ ಸಧೃಡವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾದ, ಮಾನ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ, ಗೌರವಾನ್ವಿತ ಶ್ರೀ. ಸುಶಾಂತ್ ಮಹಾವೀರ ಚೌಗಲೆ ಅವರು ತಂಬಾಕು ಸೇವನೆ ಮತ್ತು ಮದ್ಯಪಾನ ಮಡುವುದರಿಂದ ನಮ್ಮ ಮುಂದಿನ ಪೀಳಿಗೆಯು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಕರ್ತವ್ಯ, ನಮ್ಮ ನಮ್ಮ ಹೋಣೆಗಾರಿಕೆಗಳನ್ನು ತಪ್ಪದೆ ನಿಭಾಯಿಸಬೇಕು ಎಂದರು.
ಸಾರ್ವಜನಿಕ ಪ್ರದೇಶಗಳಲ್ಲಿ ದೂಮಪಾನ ಮತ್ತು ಮದ್ಯಪಾನವನ್ನು ಮಾಡಬಾರದು, ಇಂತಹ ಚಟಗಳಿಂದ ಒಬ್ಬರಿಂದ ನೂರಾರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು.
ಡಾ. ರಾಜಶೇಖರ ಮಾಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸ್ವಾಗತಸಿದರು ಡಾ.ಸುರೇಶ ಮೇಕಿನ, ಕು. ಆರತಿ ಧನುÀಶ್ರೀ, ಸೋಷಿಯಲ್ ವರ್ಕರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕಾರ್ಯಾಗಾರದಲ್ಲಿ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು, ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.