ಎನ್.ಡಿ.ಎ ಅಭ್ಯರ್ಥಿ ಮಲ್ಲೇಶ್ ಬಾಬು 71,388 ಮತಗಳ ಅಂತರದಲ್ಲಿ ಜಯಭೇರಿ

ಕೋಲಾರ, ಜೂ, ೫- ಕೋಲಾರ ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ.( ಬಿಜೆಪಿ-ಜೆ.ಡಿ.ಎಸ್ ಮೈತ್ರಿ) ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಅವರು ತಮ್ಮ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿ ಕೆ.ವಿ.ಗೌತಮ್ ಅವರಿಗಿಂತ ಹೆಚ್ಚಿನ ೭೧,೩೮೮ ಬಹುಮತಗಳಿಂದ ವಿಜೇತರಾಗಿದ್ದಾರೆ.
ಎಂ.ಮಲ್ಲೇಶ್ ಬಾಬು ಅವರು ೬೯೧೪೮೧ ಮತಗಳು ಪಡೆದರೆ ಕೆ.ವಿ.ಗೌತಮ್ ಅವರು ೬೨೦೦೯೩ ಮತಗಳನ್ನು ಪಡೆದಿದ್ದಾರೆ, ಪ್ರಾರಂಭದಿಂದ ಮಲ್ಲೇಶ್ ಬಾಬು ಬಹುಮತಗಳ ಅಂತರವನ್ನು ಕಾಪಾಡಿ ಕೊಂಡು ಬಂದಿದ್ದರು.
ಮೊದಲ ಸುತ್ತು ೯ ಸಾವಿರ ಅಂತರದಿಂದ ಪ್ರಾರಂಭಿಸಿ ೯ನೇ ಸುತ್ತಿನಲ್ಲಿ ೭೧ ಸಾವಿರ ಅಂತರದವರೆಗೆ ಏರಿಕೆಯಾಗಿದ್ದವರು ೧೩ ನಲ್ಲಿ ಕೇವಲ ೨ ಸಾವಿರ ಮತಗಳ ಅಂತರಕ್ಕೆ ಇಳಿಕೆಯಾಗಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸಿ, ಅಭ್ಯರ್ಥಿಗಳ ಎದೆಯನ್ನು ಡವ..ಡವ ಗುಟ್ಟಿಸಿದರು. ನಂತರದಲ್ಲಿ ಜೆಡಿಎಸ್ ಹಂತ ಹಂತವಾಗಿ ಏರಿಕೆಯಾಗಿ ಕೊನೆಯ ಸುತ್ತಿನಲ್ಲಿ ಮಲ್ಲೇಶ್ ಬಾಬು ೭೧,೩೮೮ ಮತಗಳಲ್ಲಿ ವಿಜಯಬೇರಿ ಬಾರಿಸಿದರು.
ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೧೮ ಮಂದಿ ಅಭ್ಯರ್ಥಿಗಳು ಹಾಗೂ ನೋಟಾಗೆ ಸೇರಿದಂತೆ ೧೩,೪೯,೩೯೭ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ. ವಿಶೇಷ ಏನೆಂದರೆ ಚುನಾವಣೆಯಲ್ಲಿ ಸ್ವರ್ಧಿಸಿರುವ ಎಲ್ಲಾ ೧೮ ಮಂದಿ ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾಗೆ ೫೮೩೧ ಮತಗಳನ್ನು ಚಲಾಯಿದ್ದಾರೆ. ಕಾಂಗ್ರೇಸ್ ಮತ್ತು ಎನ್.ಡಿ.ಎ. ಮೈತ್ರಿ ಅಭ್ಯರ್ಥಿ ಹೊರತು ಉಳಿದ ೧೬ ಮಂದಿ ವಿವಿಧ ಅಭ್ಯರ್ಥಿಗಳು ಠೇವಣಿಯನ್ನು ಕಳೆದು ಕೊಂಡಿದ್ದಾರೆ.೧೨೦೬ ಮತಗಳು ಅಸಿಂದುಗೊಂಡಿದೆ.
ಬಹುಜನ ಸಮಾಜದ ಅಭ್ಯರ್ಥಿ ಎಸ್,ಬಿ, ಸುರೇಶ್ ೪,೭೩೨ ಮತಗಳು, ಸೋಷಿಯಲ್ ಪಾರ್ಟಿ ಅಭ್ಯರ್ಥಿ ಡಿ.ಗೋಪಲಕೃಷ್ಣ ೧.೬೬೯ ಮತಗಳು, ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ತಿಮ್ಮರಾಯಪ್ಪ ೮೬೪ ಮತಗಳು, ಉತ್ತಮ ಪ್ರಜಾಕೀಯ ಪಾರ್ಟಿ ದೇವರಾಜ,ಎ, ಅಲಸೂರುದಿನ್ನೆ ೧,೩೫೪ ಮತಗಳು, ಡೆಲ್ಲಿ ಜನತಾ ಪಾರ್ಟಿ ಕೆ.ಆರ್.ದೇವರಾಜ ೪,೫೯೭ ಮತಗಳು, ಕರ್ನಾಟಕ ರಾಷ್ಟ್ರೀಯ ಸಮಿತಿ(ಕೆ.ಆರ್.ಎಸ್.) ಮಹೇಶ್ ಎ,ವಿ. ೧೦೬೫ ಮತಗಳು, ವಿದುತಲೈ ಚಿರುತೈಗಳ್ ಕಟ್ಚಿಎಂ.ಸೊ. ಹಳ್ಳಿ ವೇಣು ೫೨೧ ಮತಗಳು ಪೆಡೆದಿದ್ದಾರೆ.
ಪಕ್ಷೇತರರಾಗಿ ಕೃಷ್ಣಯ್ಯ ಎನ್ ೪೩೩ ಮತಗಳು, ಎಸ್.ಎನ್,ನಾರಾಯಣಸ್ವಾಮಿ ೧೯೮೫ ಮತಗಳು, ಎಂಎಸ್.ಬದರೀನಾರಾಯಣ್ ೧೧೧೬ ಮತಗಳು, ಎಂ.ಮುನಿಗಂಗಪ್ಪ ೬೦೪ ಮತಗಳು, ಆರ್.ರಾಜೇಂದ್ರ ೭೫೧ ಮತಗಳು, ಆರ್.ರಂಜೀತ್ ಕುಮಾರ್ ೨೧೧೮ ಮತಗಳು, ಡಾ.ಎಂ.ವೆಂಕಟಸ್ವಾಮಿ ೩,೩೫೪ ಮತಗಳು, ಹೋಳೂರು ಶ್ರೀನಿವಾಸ್ ೬೧೬೩ ಮತಗಳು, ಸುಮನ್ ಹೆಚ್.ಎನ್. ೬,೪೮೭ ಮತಗಳು ಪಡೆಯುವ ಮೂಲಕ ಎಲ್ಲರೂ ಠೇವಣಿ ಕಳೆದು ಕೊಂಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿನ ೮ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೭,೨೬,೯೧೪ ಮತದಾರರು ಇದ್ದು ಈ ಪೈಕಿ ೧೩,೪೯,೩೯೭ ಮತಗಳು ಚಲಾಯಿತಗೊಂಡಿದ್ದವು.
ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಅಂಚೆ ಮತಗಳು ಸೇರಿದಂತೆ ಮಲ್ಲೇಶ್ ೪೧,೭೭೧, ಗೌತಮ್ ೨೮,೧೪೩ ಮತಗಳು, ೩ನೇ ಸುತ್ತು ಮಲ್ಲೇಶ್ ೭೯,೭೩೯, ಗೌತಮ್ ೫೬,೩೦೯ ಮತಗಳು, ೪ನೇ ಸುತ್ತು ಮಲ್ಲೇಶ್ ೧,೧೯,೨೩೧ ಗೌತಮ್ ೮೭,೪೦೪ ಮತಗಳು, ೫ನೇ ಸುತ್ತು ಮಲ್ಲೇಶ್ ೧೫೯,೯೩೨,ಗೌತಮ್ ೧,೧೪,೭೫೫ ಮತಗಳು, ೬ನೇ ಸುತ್ತು ಮಲ್ಲೇಶ್ ೨,೦೦,೧೭೯ ಗೌತಮ್ ೧,೪೨,೦೨೮ ಮತಗಳು, ೭ನೇ ಸುತ್ತು ಮಲ್ಲೇಶ್ ೨,೩೯,೪೭೮ ಗೌತಮ್ ೧,೭೫,೯೭೩ ಮತಗಳು, ೮ನೇ ಸುತ್ತು ಮಲ್ಲೇಶ್ ೨,೭೭,೫೯೦ ಗೌತಮ್ ೨,೦೯,೪೨೧ ಮತಗಳು. ೯ನೇ ಸುತ್ತು ಮಲ್ಲೇಶ್ ೩,೧೩,೫೩೯ ಗೌತಮ್ ೨,೪೬,೧೫೪ ಮತಗಳು, ೧೦ನೇ ಸುತ್ತು ಮಲ್ಲೇಶ್ ೩,೫೨,೩೩೬ ಗೌತಮ್ ೨,೮೪.೯೨೮ ಮತಗಳು, ೧೧ನೇ ಸುತ್ತು ಮಲ್ಲೇಶ್ ೩,೮೫,೩೪೭ ಗೌತಮ್ ೩,೨೮,೭೫೬ ಮತಗಳು, ೧೨ನೇ ಸುತ್ತು ಮಲ್ಲೇಶ್ ೪,೧೦,೪೫೮ ಗೌತಮ್ ೩,೮೨,೨೩೪ ಮತಗಳು , ೧೩ನೇ ಸುತ್ತು ಮಲ್ಲೇಶ್ ೪,೪೩,೨೬೦ ಗೌತಮ್ ೪,೨೧,೫೨೨ ಮತಗಳು, ೧೪ನೇ ಸುತ್ತು ಮಲ್ಲೇಶ್ ೪,೭೮,೬೮೯ ಗೌತಮ್ ೪೫೮೨೪೯ ಮತಗಳು,೧೫ನೇ ಸುತ್ತಿನಲ್ಲಿ ಮಲ್ಲೇಶ್ ೫,೦೫,೩೭೧, ಗೌತಮ್ ೪,೯೯,೦೨೬ ಮತಗಳು, ೧೬ನೇ ಸುತ್ತಿನಲ್ಲಿ ಮಲ್ಲೇಶ್ ೫೪೬,೨೮೭ ,೫,೨೫,೪೯೭ ಮತಗಳು, ೧೭ನೇ ಸುತ್ತಿನಲ್ಲಿ ಮಲ್ಲೇಶ್ ೫,೭೬,೮೦೬ ಗೌತಮ್ ೫,೪೫,೧೨೨ ಮತಗಳು, ೧೮ನೇ ಸುತ್ತಿನಲ್ಲಿ ಮಲ್ಲೇಶ್೬,೧೨,೦೯೫, ಗೌತಮ್ ೫,೭೧,೭೩೮ ಮತಗಳು, ೧೮ ಮತ್ತು ೧೯ನೇ ಸುತ್ತಿನಲ್ಲಿ ಮಲ್ಲೇಶ್ ೬,೫೪,೩೯೧ ಗೌತಮ್ ೫,೯೬,೫೯೯ ಮತಗಳು, ೨೦ ಮತ್ತು ೨೧ ನೇ ಸುತ್ತಿನಲ್ಲಿ ಮಲ್ಲೇಶ್ ೬,೯೧,೪೮೧ ಗೌತಮ್ ೬,೨೦.೦೯೩ ಮತಗಳನ್ನು ಪಡೆದಿದದ್ದಾರೆ. ಒಟ್ಟಾರೆಯಾಗಿ ಮಲ್ಲೇಶ್ ಬಾಬು ಮೊದಲ ಹಂತದಲ್ಲಿ ೯ ಸಾವಿರ ಅಂತರ ಪಡೆಯುವ ಮೂಲಕ ಪ್ರಾರಂಭವಾಗಿ ಅಂತಿಮವಾಗಿ ೭೧,೩೮೮ ಮತಗಳ ಅಂತರದಲ್ಲಿ ಜಯಶೀಲರಾದರು.