ಎನ್ ಡಿಎ ಹ್ಯಾಟ್ರಿಕ್ ಜಯಭೇರಿ: ಮತಗಟ್ಟೆ ಸಮೀಕ್ಷೆಗಳ ಭವಿಷ್ಯ. ಸ್ಪಷ್ಟ ಬಹುಮತದೊಂದಿಗೆ ಮೋದಿ ಅಧಿಕಾರಕ್ಕೆ

ನವದೆಹಲಿ: ಲೋಕಸಭಾ ಚುನಾವಣೆ ಸಮಾಪ್ತಿಗೊಂಡ ಬೆನ್ನಲ್ಲೇ ಮತಗಟ್ಡೆ ಸಮೀಕ್ಷೆಗಳು ಹೊರಬಿದ್ದಿವೆ.ಒಟ್ಟು ಐದು ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಹ್ಯಾಟ್ರಿಕ್ ಜಯಭೇರಿ ಬಾರಿಸಲಿದೆ ಎಂದು ಬಿಂಬಿಸಿವೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ನಾಯಕರು ಹೇಳುತ್ತಿದ್ದ ರೀತಿಯಲ್ಲಿ ಅಬ್ ಕಿ ಬಾರ್ 400 ಪಾರ್ ಎಂಬ ಸಂಖ್ಯೆಯನ್ನು ಯಾವುದೇ ಮತಗಟ್ಟೆ ಸಮೀಕ್ಷೆಗಳು ಹೇಳಿಲ್ಲ. ಅಗತ್ಯಕ್ಕಿಂತ ಹೆಚ್ಚು ಬಹುಮತ ಎನ್ ಡಿಎ ಗಳಿಸಲಿವೆ ಎಂದು ಸ್ಪಷ್ಟವಾಗಿ ಹೇಳಿರುವುದು ಗೋಚರಿಸಿದೆ.
ಚುನಾವಣಾ ಅಖಾಡದಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಪಣ ಕೊಟ್ಟಿದ್ದ ಇಂಡಿಯಾ ಮೈತ್ರಿ ಕೂಟಕ್ಕೆ ತೀವ್ರ ಹಿನ್ನಡೆ ಅನುಭವಿಸಲಿವೆ ಎಂದು ಬಿಂಬಿಸಿವೆ.
ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ‌. ಮತ್ತೆ ಯಾರು ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ ಎಂಬ ಅಂಶಗಳ ಮತೆಣಿಕೆಯಷ್ಟೇ ಮತಗಟ್ಟೆ ಸಮೀಕ್ಷೆಯಷ್ಟೇ ಕುತೂಹಲ ಕೆರಳಿಸಿತ್ತು.
ಒಟ್ಟು ಐದು ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎ 365 ಸ್ಥಾನಗಳನ್ನು ಪಡೆಯಲಿದೆ, ಇಂಡಿಯಾ ಮೈತ್ರಿಕೂಟ 142 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ
ರಿಪಬ್ಲಿಕ್ ನಡೆಸಿರುವ ಟಿವಿ ಮ್ಯಾಟ್ರಿಜ್
ನಡೆಸಿರುವ ಸಮೀಕ್ಷೆಯ ಪ್ರಕಾರ ಎನ್ ಡಿಎ 353 ರಿಂದ 368 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದೆ.
ಇಂಡಿಯಾ ಮೈತ್ರಿಕೂಟ 118 ರಿಂದ 133 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇತರರು 43-48 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದೆ.
ಎನ್ ಡಿಟಿ ನಡೆಸಿರುವ ಮತಗಟ್ಟೆ ಸಮೀಕ್ಷೆಯಲ್ಲೂ ಎನ್ ಡಿಎ 365, ಇಂಡಿಯಾ 142, ಇತರರು 36 ಕ್ಷೇತ್ರಗಳಲ್ಕಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ರಿಪಬ್ಲಿಕ್ ಪಿಎಂಆರ್ ಕ್ಯೂ ಎನ್ ಡಿಎ 359, ಇಂಡಿಯಾ 154 ಹಾಗೂ ಇತರರು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.
ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆಯಲ್ಲೂ ಎನ್ ಡಿಎ ಜಯಭೇರಿ ಬಾರಿಸಲಿದೆ ಎಂದು ಹೇಳಿದೆ. ಎನ್ ಡಿಎ 362-392 ಇಂಡಿಯಾ 141-161 ಹಾಗೂ ಇತರರು 10-20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿ ಎಂದು ಹೇಳಿದೆ.
ನ್ಯೂಸ್ ನೇಷನ್ ಕೂಡ ಬಿಜೆಪಿ ನೇತೃತ್ವದ ಎನ್ ಡ ಇಎ‌ ಮೈತ್ರಿಕೂಟ 342 ರಿಂದ 378 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ಹೇಳಿದೆ.
ಒಟ್ಟಾರೆ ಬಹುತೇಕ ಮತಗಟ್ಟೆ ಸಮೀಕ್ಷೆಗಳ ಮೂರನೆ ಬಾರಿಯೂ ಬಿಜೆಪಿ ದಿಗ್ವಿಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.

ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ :ಡಿಕೆಶಿ

ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಪ್ರಕಟವಾಗುತ್ತಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದು, “ನನಗೆ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ನಂಬಿಕೆ ಇಲ್ಲ. ಆದರೆ, ನಾನು ಮೊದಲೇ ಹೇಳಿದ್ದೇನೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಡಬಲ್‌ ಡಿಜಿಟ್‌ಗೆ ಹೋಗುತ್ತದೆ. ಸ್ಯಾಂಪಲ್‌ ಅಷ್ಟೇ ಸಂಗ್ರಹಿಸಿ ವರದಿಗಳನ್ನು ತಯಾರಿಸುವುದರಿಂದ ಇವುಗಳ ಮೇಲೆ ನಂಬಿಕೆ ಇಲ್ಲ” ಎಂದು ಹೇಳಿದ್ದಾರೆ.