ಎನ್ ಡಿಎ ಜೊತೆ ಕೈಜೋಡಿಸಿದ ಅಜಿತ್ ಪವಾರ್ : ಡಿಸಿಎಂ ಸೇರಿ 9 ಮಂದಿ ಸಚಿವರಾಗಿ ಪ್ರಮಾಣ

ಮುಂಬೈ, ಜು.2- ಮಹಾರಾಷ್ಟ್ರ ರಾಜ್ಯ ರಾಜಕೀಯ ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಎನ್ ಸಿ ಪಿ ನಾಯಕ ಅಜಿತ್ ಪವಾರ್ ಅವರು ಬಿಜೆಪಿ -ಶಿವಸೇನೆ ಬಣದ ‌ ಸರ್ಕಾರ ಸೇರಿ ಉಪಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದೇ ವೇಳೆ ಎನ್‌ಸಿಪಿಯ ಹಿರಿಯ ನಾಯಕರಾದ ದಿಲೀಪ್ ವಲ್ಸೆ ಪಾಟೀಲ್, ಅದಿತಿ ತತ್ಕರೆ,ಛಗನ್ ಭುಜ್ ಬುಲ್ ,, ಧನಂಜಯ ಮುಂಡೆ ಸೇರಿದಂತೆ ಎನ್ ಸಿಪಿಯ 9 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ..

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಸಮ್ಮುಖದಲ್ಲಿ ಮಹಾರಾಷ್ಟ್ರ ರಾಜ್ಯಪಾಲರು ನೂತನ ಉಪಮುಖ್ಯಮಂತ್ರಿ ಮತ್ತು ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ರಚನೆಯಾಗುವುದಕ್ಕೂ ಮುನ್ನ ಅಜಿತ್ ಪವಾರ್ ಅವರು ದೇವೇಂದ್ರ ಫಡ್ನವೀಸ್ ಜೊತೆ ಸೇರಿ ರಾತ್ರೋರಾತ್ರಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಬಿಜೆಪಿ ಮತ್ತು ಎನ್ ಸಿ ಪಿ ಜೊತೆಗೂಡಿ ಅಧಿಕಾರ ಸ್ವೀಕರಿಸಿದ್ದರು.

ಇದಾದ ನಂತರ ಡೆದ ರಾಜಕೀಯ ಬೆಳವಣಿಗೆಯಲ್ಲಿ ಎನ್‌ಸಿಪಿ ಶಿವಸೇನೆ ಹಾಗೂ ಕಾಂಗ್ರೆಸ್ ಜೊತೆಗೂಡಿ ರಾಜ್ಯದಲ್ಲಿ ಉದ್ದಾಕ್ರೆ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

ವರ್ಷ ತುಂಬುವುದರ ಒಳಗೆ ಬಿಜೆಪಿ ಪಕ್ಷ ಶಿವಸೇನೆ ನಾಯಕರಾಗಿದ್ದ ಏಕನಾಥ್ ಶಿಂದೆ ಮೂಲಕ ಶಿವಸೇನೆಯನ್ನು ವಿಭಜನೆ ಮಾಡಿ ಬಿಜೆಪಿ ಶಿವಸೇನೆ ಬಣಗಳು ಸರ್ಕಾರ ರಚಿಸಿದ್ದವು. ಇದರ ಭಾಗವಾಗಿ ಮುಖ್ಯಮಂತ್ರಿ ಆಗಿ ಏಕನಾಥ್ ಶಿಂದೆ ಮತ್ತು ಉಪಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅಧಿಕಾರ ಸ್ವೀಕರಿಸಿದ್ದರು

ಇದೀಗ ಐದು ವರ್ಷದ ಅವಧಿ ಮುಗಿಯುವ ಒಳಗೆ ಮತ್ತೊಮ್ಮೆ ಅಜಿತ್ ಪವಾರ್ ಅವರು ಬಿಜೆಪಿ ಶಿವಸೇನೆಯ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ

ರಾಜಭವನಕ್ಕೆ ಆಗಮಿಸಿದ ಪಟೇಲ್

ಬಿಜೆಪಿ ಶಿವಸೇನೆ ಬಡದ ಗುಂಪಿನ ಜೊತೆಗೂಡಿ ಎಂಸಿಪಿ ನಾಯಕ ಶರತ್ ಪವರ್ ಮತ್ತು ಇತರೆ ಎಂಸಿಪಿ ಪಕ್ಷದ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ರಾಜಭವನಕ್ಕೆ ಆಗಮಿಸಿದರು.

ಅಜಿತ್ ಪವಾರ್ ಅವರ ಈ ನಡೆಗೆ ಎನ್ ಸಿ ಪಿ ವರಿಷ್ಠ ಶರತ್ ಪವಾರ್ ಅವರ ಸಮ್ಮತಿ ಇದೆಯೇ ಅಥವಾ ಇಲ್ಲವೇ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ

ಶರದ್ ಪವರ್ ಜೊತೆ ಮುನಿಸು

ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರೊಂದಿಗೆ ಮುನಿಸಿಕೊಂಡು ಅವರ ಸೋದರ ಸಂಬಂಧಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವರ್ ಬಿಜೆಪಿ- ಶಿವಸೇನೆ ಬನದ ಸರ್ಕಾರ ಸೇರಿ ಉಪಮುಖ್ಯಮಂತ್ರಿಯಾಗಿದ್ದಾರೆ.

ತನ್ನೊಂದಿಗೆ ಒಂಬತ್ತು ಎನ್‌ಸಿಪಿ ನಾಯಕರಿಗೂ ಸಚಿವ ಸ್ಥಾನ ನ್‌ಡಿಎ ನೇತೃತ್ವದ ಸರ್ಕಾರದಲ್ಲಿ ಪಡಿಸುವ ಮೂಲಕ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಹೊಸ ಆಟ ಶುರು ಮಾಡಿದ್ದಾರೆ