ಎನ್.ಟಿ.ಆರ್ ಪುಣ್ಯಸ್ಮರಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.19: ಆಂದ್ರಪ್ರದೇಶದ ದಿ.ಮುಖ್ಯ ಮಂತ್ರಿ, ಚಿತ್ರನಟ  ಎನ್.ಟಿ. ರಾಮರಾವ್  ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಗರದ  ಹವಂಭಾವಿಯ ನೇಸ್ತಮ್ ಎಂಟರ್ ಪ್ರೈಸಸ್ ಕಾರ್ಯಾಲಯದಲ್ಲಿ ನಿನ್ನೆ ನಡೆಯಿತು.
ಎನ್ ಟಿ ಆರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ. ಕ್ಯಾಲೆಂಡರ್ ನ್ನು ಎನ್ ಟಿ ಆರ್ ಅಭಿಮಾನಿ ಕೆ. ಶೇಷಗಿರಿರಾವ್ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯ್ತು.
ರಾಮಬ್ರಹ್ಮಂ, ವಲೀ ಅಹ್ಮದ್ ಅವರು ಎನ್ ಟಿ ಆರ್ ಅವರ ಚಿತ್ರದ ಹಾಡುಗಳನ್ನು ಹಾಡಿ ಅಭಿಮಾನಿಗಳ ಮನ ರಂಜಿಸಿದರು.
ಎನ್ ಟಿ ಆರ್ ಅಭಿಮಾನಿ ಬಳಗದ ಭೀಮಿನೇನಿ ಸಹೋದರರು, ಎನ್ ಟಿ ಆರ್ ಫ್ಯಾನ್ಸ್ ಅಸೋಸಿಯೇಶನ್ ಬಸವರಾಜ್ ಮತ್ತು ಸದಸ್ಯರು ಕಲಾವಿದ ನೇತಿ ರಘುರಾಮ ಇನ್ನಿತರರು ಪಾಲ್ಗೊಂಡಿದ್ದರು.

One attachment • Scanned by Gmail