ಎನ್ ಟಿ ಆರ್ ಜನ್ಮದಿನ ಪಲಾವ್ ಮೊಟ್ಟೆ ವಿತರಣೆ

ಬಳ್ಳಾರಿ, ಮೇ.28: ನಗರದ ಅಖಿಲ ಕರ್ನಾಟಕ ಕಮ್ಮ ಯುವಶಕ್ತಿಯ ಆಶ್ರಯದಲ್ಲಿ ಇಂದು ಆಂದ್ರ ಪ್ರದೇಶದ ಮುಖ್ಯ ಮಂತ್ರಿಗಳಾಗಿದ್ದ, ತೆಲುಗಿನ ಖ್ಯಾತ ಚಿತ್ರ ನಟ ನಂದಮೂರಿ ತಾರಕ ರಾಮಾರಾವ್ ಅವರ ಜನ್ಮ ದಿನಾಚರಣೆಯ ಅಂಗವಾಗಿ‌ ಬಡವರು, ಲಾರಿ ಚಾಲಕರು ಮತ್ತು ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಪಲಾವ್ ಮತ್ತು ಮೊಟ್ಟೆಯನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವ ಅಧ್ಯಕ್ಷರಾದ ಗೋಗಿನೇನಿ ವೆಂಕಟ ಸುಬ್ಬರಾವ್, ರಾಮ ಬ್ರಹ್ಮಂ, ಅಧ್ಯಕ್ಷ ಮುಲ್ಲಂಗಿ ನಂದೀಶ್, ಕಾರ್ಯದರ್ಶಿ ಪೆರಾಮ್ ವಿವೇಕ್ (ವಿಕ್ಕಿ) ಪದಾಧಿಕಾರಿಗಳಾದ ಮುಂಡ್ಲೂರು ಪ್ರಭಂಜನ್ ಕುಮಾರ್, ಕೋನಂಕಿ ತಿಲಕ್, ಸುಬ್ಬರಾಯುಡು, ರಾಮಾಂಜನೇಯುಲು, ಮುಂಡ್ಲೂರು ವಿವೇಕಾನಂದ, ತೀಟ್ಕಲ್ ಅನಿಲ್ ಕುಮಾರ್, ಸನ್ಯಪರೆಡ್ಡಿ ಶಂಕರ್, ಡೊನೆಪುಡಿ ನವೀನ್ ಕುಮಾರ್, ಸುರಪನೇನೀ ಹರಿ, ಕನುಗೋಲು ಜಗದೀಶ್, ಮಹದೇವ್, ವೆಂಕಟ ನಾಯುಡು, ಫಣಿ, ಕೊಲ್ಲಿ ತಿಮ್ಮಪ್ಪ, ಸಾಗರ್, ಕಿರಣ್ ಮತ್ತು ಇತರರು ಭಾಗವಹಿಸಿದ್ದರು.