ಎನ್ ಟಿಆರ್ ಕಿರಿ ಮಗಳು ಉಮಾ ಮಹೇಶ್ವರಿ ಶಂಕಾಸ್ಪದ ಆತ್ಮಹತ್ಯೆ

ಮುಂಬಯಿ,ಆ.1-ಟಾಲಿವುಡ್‌ನ ಹೆಸರಾಂತ ನಟ ನಂದಮೂರಿ ತಾರಕ್ ರಾಮ ರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ ಅವರು ಶಂಕಾಸ್ಪದ ಸಾವನ್ನಪ್ಪಿದ್ದಾರೆ.
ಮುಂಬಯಿಯ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿರುವ ನಟ ಎನ್‌ಟಿಆರ್ ಅವರ ಕಿರಿಯ ಪುತ್ರಿ ಉಮಾ, ಕೆಲ ತಿಂಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು.
ಇದೀಗ ಮುಂಬೈನ ಜುಬ್ಲಿ ಹಿಲ್ಸ್ನ ತಮ್ಮ ನಿವಾಸದಲ್ಲಿ ಉಮಾ ಮಹೇಶ್ವರಿ ಸಾವಿಗೆ ಶರಣಾಗಿದ್ದಾರೆ.
ಎನ್‌ಟಿಆರ್ ಕಿರಿಯ ಪುತ್ರಿ ಕೆಲ ತಿಂಗಳುಗಳಿಂದ ಅನಾರೋಗ್ಯದ ಬಳಲುತ್ತಿದ್ದರು. ಇದಕ್ಕಾಗಿ ಸೂಕ್ತ ಕಡೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಮಾ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.
ಇದೀಗ ಉಮಾ ಅವರ ಸಾವಿಗೆ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ದಿವಂಗತ ಎನ್‌ಟಿಆರ್ ಅವರಿಗೆ 12 ಜನ ಮಕ್ಕಳು ಎಂಟು ಮಂದಿ ಗಂಡು ಮಕ್ಕಳು, 4 ಜನ ಹೆಣ್ಣು ಮಕ್ಕಳಿದ್ದರು. ಉಮಾ ಮಹೇಶ್ವರಿ ಅವರು ಇವರಲ್ಲಿ ಕೊನೆಯ ಮಗಳಾಗಿದ್ದರು.