ಎನ್.ಜಿ. ಓ ಸಿಬ್ಬಂದಿಗಳನ್ನು ಕೋವಿಡ್ ವಾರಿಯರ್ಸ್ ಎಂದು ಗುರುತಿಸಿ

ಬಾಗಲಕೋಟೆ, ಜೂ 7 : ಕೋವಿಡ್-19 ರ ತಡೆ ಹಾಗೂ ನಿಯಂತ್ರಣ ಕಾರ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳ ಮಹತ್ತರ ಪಾತ್ರ ಹಾಗೂ ಸೇವೆಯನ್ನು ಗುರುತಿಸಿ ಈ ಕಾರ್ಯಕರ್ತರನ್ನು ಕೋವಿಡ್ ವಾರಿಯರ್ಸ್ ಎಂದು ಗುರುತಿಸಲು ಜಿಲ್ಲಾ ಫೇವಾರ್ಡ-ಕೆಯ ಜಿಲ್ಲಾ ಒಕ್ಕೂಟ ಒತ್ತಾಯಿಸಿದೆ.
ಅವರು ಅಪ್ಪರಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ-ಕೆ) ರಾಜ್ಯದಾದ್ಯಂತ ಸುಮಾರು 850ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯತ್ವ ಹೊಂದಿದ್ದು, ಕಳೆದ 3 ದಶಕಗಳಿಂದ ದುರ್ಬಲ ವರ್ಗದ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಗೆ ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಟ್ಟದ ಪ್ರಾತಿನಿಧಿಕ ಸಂಸ್ಥೆಯಾಗಿದೆ.
ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳನ್ನು, ಸಿಬ್ಬಂದಿಗಳನ್ನು ತುರ್ತಾಗಿ ಕೋವಿಡ್ ವಾರಿಯರ್ಸಗಳೆಂದು ಘೋಷಿಸಬೇಕು.
ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಅವಲಂಬಿತ ಸದಸ್ಯರುಗಳಿಗೆ ತುರ್ತಾಗಿ ವ್ಯಾಕ್ಸಿನ್ ಪಡೆಯಲು ಅನುಕೂಲ ಮಾಡಿಕೊಡಬೇಕು.
ಕೋವಿಡ್ 2ನೇ ಅಲೆ ಮತ್ತು ಲಾಕ್ಡೌನ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಆರೋಗ್ಯ ಭದ್ರತೆ, ಉಚಿತ ಚಿಕಿತ್ಸೆ ಮತ್ತು ಜೀವ ವಿಮೆ ಒದಗಿಸಿಬೇಕು.ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳಿಗೆ 3ತಿಂಗಳು ಆಹಾರ, ದಿನಸಿ ನೀಡಬೇಕು.
ರಾಜ್ಯಮಟ್ಟ, ಜಿಲ್ಲಾ ಮಟ್ಟ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ರೂಪಿಸುವ ಯೋಜನೆಗಳಲ್ಲಿ ಮತ್ತು ಟಾಸ್ಕಪೆÇೀರ್ಸ್ನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಡೆಸುವಂತೆ ಆದೇಶವನ್ನು ಹೊರಡಿಸಬೇಕು.ಕೊರೋನಾದಿಂದ ಸಾವು ಸಂಭವಿಸಿ ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಗಳಿಗೆ ತಲಾ ಐದು ಲಕ್ಷ ರೂಗಳ ಆರ್ಥಿಕ ನೆರವು ಘೋಷಿಸಬೇಕು.
ಅಸಂಘಟಿತ ಕಾರ್ಮಿಕರ ವಲಯದ ಇತರೆ ವರ್ಗಗಳಿಗೆ ಸಿಗುವ ಸಾಮಾಜಿಕ ಸೌಲಭ್ಯಗಳು ಸ್ವಯಂ ಸೇವಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಸಿಗುವಂತಾಗಲು “ಸಮಗ್ರನೀತಿ”ಯನ್ನು ರೂಪಿಸಬೇಕು.ಸರ್ಕಾರೇತರ ಸ್ವಯಂಸೇವಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಮತ್ತು ಅವಲಂಬಿತ ಸದಸ್ಯರುಗಳಿಗೆ ಶಾಶ್ವತ ಸೌಲಭ್ಯಗಳನ್ನು ಪಡೆಯಲು “ಸಾಮಾಜಿಕ ಭದ್ರತಾ ನಿಧಿ ಪ್ರಾಧಿಕಾರ” ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಶರಣು ಬಸನಗೌಡರ, ಮಾಜಿ ಅಧ್ಯಕ್ಷ ಜಿ.ಎನ್.ಸಿಂಹ, ಡಾ. ತಿಪ್ಪರಾಜ ಸನಗಿನ ಮನವಿಯಲ್ಲಿ ಒತ್ತಾಯಿಸಿದ್ದಾರೆ.