ಎನ್ ಕೌಂಟರ್ ಗೆ ಐವರು ನಕ್ಸಲೀಯರು ಬಲಿ

ಮುಂಬೈ,ಮಾ.29- ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿಂದು ಐವರು ಮಾವೋವಾದಿ ನಕ್ಸಲೀಯರನ್ನು ಪೋಲೀಸ್ ಪಡೆ ಏನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ.

ಗಡ್ ಚಿರೋಲಿ ಪೊಲೀಸರು ಮತ್ತು ನಕ್ಸಲ್ ವಿರೋಧಿ ಪಡೆ ಕಳೆದ ಮೂರು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ ಇಂದು ಬೆಳಗ್ಗೆ ಐದು ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್ ಕೌಂಟರ್ ಗೆ ಬಲಿಯಾದ ಐವರು ನಕ್ಸಲರಲ್ಲಿ 3 ಮಂದಿ ಪುರುಷರು ಮತ್ತು ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ನಕ್ಸಲ್ ವಲಯದ ಪೊಲೀಸ್ ಮಹಾನಿರ್ದೇಕ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಗಡ್ ಚಿರೋಲಿ ಸೇರಿದಂತೆ ಹಲವು ಭಾಗಗಳಲ್ಲಿ ನಕ್ಸಲೀಯರ ಇರುವ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಕಾರ್ಯಾಚರಣೆ ನಡೆಸಿ ಐವರು ನಕ್ಸಲೀಯರನ್ನು ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದಾರೆ

ರಾಜ್ಯದ ವಿವಿಧ ಭಾಗಗಳಲ್ಲಿ ನಕ್ಸಲೀಯರು ಬೀಡು ಬಿಟ್ಟಿರುವ‌ ಮಾಹಿತಿ ಇದೆ ಅವರ ಚಲನ ವಲನ ಪರೀಶೀಲಿಸಿ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ