“ಎನ್.ಐ.ಟಿ.ಯಲ್ಲಿ ಸೀಟು ಪಡೆದ ಬೆಸ್ಟ್ ಕಾಲೇಜಿನ ವಿದ್ಯಾರ್ಥಿನಿ ಅರ್ಪಿತಾ ಸಿಂಗಿ”


(ಸಂಜೆವಾಣಿ ಪ್ರತಿನಿಧಿಯಿಂದ)
 ಬಳ್ಳಾರಿ, ಆ.11: ಎನ್.ಟಿ.ಎ ಆಯೋಜಿಸಿದ ರಾಷ್ಟ್ರ ಮಟ್ಟದ ಜೆ.ಇ.ಇ ಮೇನ್ಸ್ ಪರೀಕ್ಷೆಯಲ್ಲಿ ಬೆಸ್ಟ್ ಕಾಲೇಜಿನ ವಿದ್ಯಾರ್ಥಿನಿಯಾದ ಅರ್ಪಿತಾ ಸಿಂಗಿ 929 ನೇ ಱ್ಯಾಂಕ್(ಜನರಲ್ ಕ್ಯಾಟಗರಿ) ಪಡೆದು ಭೂಪಾಲ್ ನ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ B.Arch ನಲ್ಲಿ ಸೀಟು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿಜೇತ ವಿದ್ಯಾರ್ಥಿಯನ್ನು ಬೆಸ್ಟ್ ಸಂಸ್ಥೆಯ ಅದ್ಯಕ್ಷರಾದ ಕೊನಂಕಿ ರಾಮಪ್ಪನವರು ಉಪಾದ್ಯಕ್ಷರಾದ ಕೊನಂಕಿ ತಿಲಕ್‍ಕುಮಾರ್‍ರವರು, ಕಾರ್ಯದರ್ಶಿಗಳಾದ ಮನ್ನೆ ಶ್ರೀನಿವಾಸುಲು, ಕಾಲೇಜಿನ ಪ್ರಾಂಶುಪಾಲರಾದ ಕೆ.ವೆಂಕಟೇಶ್ವರರಾವ್, ಉಪಪ್ರಾಂಶುಪಾಲರಾದ ಜಿ.ಶ್ರೀನಿವಾಸರೆಡ್ಡಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.