ಎನ್ ಎಸ್ ಯು ಐ 53ನೇ ಸಂಸ್ಥಾಪನ ದಿನಾಚರಣೆ

ಬೀದರ:ಎ.10:ಜಿಲ್ಲಾ ಕಾಂಗ್ರೆಸ್ ಸಮಿತಿ ಬೀದರ ಕಛೇರಿಯಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ್ ಸಂಸ್ಥಾಪನ ದಿನ ಉಕ್ಕಿನ ಮಹಿಳೆ ಶೀಮತಿ ಇಂದಿರಾಗಾಂಧಿ ಹಾಗೂ ಯುವಕರ ಆಶಾಕಿರಣ ರಾಜಿವ ಗಾಂಧಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಎನ್ ಎಸ್ ಯು ಐ ಜಿಲ್ಲಾಧ್ಯಕ್ಷರು ಧ್ವಜರೋಹಣ ನೇರವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷರಾದ ಸಚಿನ ಮಲ್ಕಪುರೆ ಮಾತನಾಡಿ

ಪಕ್ಷ ಸಂಘಟನೆಗೆ ಒತ್ತುಕೊಡಿ ಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಜೋಡಿಸೊಣ,ಎನ್ ಎಸ್ ಯು ಐ ಕಳೆದ 53 ವರ್ಷಗಳಿಂದ ವಿದ್ಯಾರ್ಥಿಗಳ ಧ್ವನಿ ಯಾಗಿ ಕಾರ್ಯಮಾಡುತ್ತಿದೆ ಶ್ರೀಮತಿ ಇಂದಿರಾ ಗಾಂಧಿ ರವರು ಎನ್ ಎಸ್ ಯು ಐ ಸ್ಥಾಪನೆ ಮಾಡಿ ವಿಧ್ಯಾರ್ಥಿಗಳಿಗೆ ಶಕ್ತಿ ತುಂಬಿದರು ಹಾಗೂ ನಮ್ಮ ಬೀದರ ಜಿಲ್ಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಮಾಡಲಿದೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಜೊತೆ ಗೂಡಿ ಕೈ ಬಲಪಡಿಸೊಣ ಎಂದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ದತ್ತಾತ್ರಿ ಮುಲ್ಗೆ ಹಾಗೂ ಎನ್ ಎಸ್ ಯು ಐ ಜಿಲ್ಲಾ ಉಪಾಧ್ಯಕ್ಷರಾದ ರತ್ನದೀಪ್ ಕಸ್ತೂರೆ,ಮುಕೇಶ್ ಚಲ್ವಾ, ವಿಲ್ಸನ್ ಧೋನೆ. ವಿಶಾಲ್ ಕುಮಾರ್ ಕುದುರೆ . ಲೊಕೇಶ ಧುಮ್ನೆ, ಜಿಲ್ಲಾ ಎನ್ ಎಸ್ ಯು ಐ ಮುಖಂಡಗಳಾದ ಚಂದು ಡಿ.ಕೆ . ಕೃಷ್ಣಮೇತ್ರೆ ಖೈಪೂದ್ದಿನ್, ಸಂತೋಷ್ ಚಿಮಕೋಡ . ಗೌತಮ ಮುತ್ತಂಗಿಕರ, ಭೀಮರಾವ್ ಮಾಸಿಮಾಡೆ, ಸೈಯದ್ ದಸ್ತಗಿರ್ ಎನ್ ಎಸ್ ಯು ಐ ಪದಾಧಿಕಾರಿಗಳು ಇದ್ದರು.