ಎನ್ ಎಸ್.ಬೋಸರಾಜ್ ಪೌಂಡೇಷನ್: ಸ್ಯಾನಿಟೈಜರ್

ರಾಯಚೂರು,ಜೂ.೩-ನಗರದ ಮಡ್ಡಿಪೇಟೆಯಲ್ಲಿ ಎನ್.ಎಸ್.ಬೋಸರಾಜ್ ಪೌಂಡೇಷನ್ ವತಿಯಿಂದ ಹಾಗೂ
ನಗರ ಸಭೆ ಸದಸ್ಯ ಕೆ. ಜಿಂದಪ್ಪ ಇವರ ನೇತೃತ್ವದಲ್ಲಿ ಮಹಾಮಾರಿ ಕೊರೋನಾ ರೋಗವನ್ನು ತಡೆಗಟ್ಟಲು ವಾಹನದ ಮೂಲಕ ಸ್ಯಾನಿಟೈಜರ್ ನ್ನು ಖುದ್ದಾಗಿ ತಮ್ಮ ಕೈಗಳಿಂದಲೇ ಸಿಂಪಡಿಸುವ ಮೂಲಕ ಸೇವೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಸರ್ವರೂ ಮಹಾಮಾರಿ ರೋಗದಿಂದ ಜಾಗೃತರಾಗಿರಿ, ಸುಖಾಸುಮ್ಮನೇ ಹೊರಗಡೆ ತಿರುಗಾಡಬೇಡಿ, ಸರಕಾರ ಯಾವುದೇ ಇರಬಹುದು ಆದರೆ ಮಾನವನ ಜೀವ ಮುಖ್ಯವಾದುದು, ಸರಕಾರವಾಗಲಿ ಜಿಲ್ಲಾಡಳಿತವಾಗಲಿ ನಗರಸಭೆಯಾಗಲಿ ಈ ರೋಗವನ್ನು ನಿಯಂತ್ರಣಕ್ಕೆ ತರಲು ಸಾಕಸ್ಟು ಕ್ರಮಕೈಗೊಂಡಿದೆ, ಆದರೆ ಸಾರ್ವಜನಿಕರಲ್ಲಿ ಜಾಗೃತವಾಗಬೇಕಿದೆ. ಇಂತದರಲ್ಲಿ ನಮ್ಮ ಹಿರಿಯ ನಾಯಕರಾದ ಎನ್.ಎಸ್.ಬೋಸರಾಜ ಸಾಹೇಬರು ಸಾರ್ವಜನಿಕರು ಆರೋಗ್ಯದಿಂದ ಬಾಳಲಿ ಎಂದು ಇಡೀ ನಗರದಲ್ಲಿ ಈ ವಾಹನದ ಮೂಲಕ ಸ್ಯಾನಿಟೈಜರ್ ಸಿಂಪಡಿಸಿ ಸಾರ್ವಜನಿಕರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ, ಇಂದು ನನ್ನ ವಾರ್ಡ್ ಗೆ ವಾಹನವನ್ನು ಕಳಿಸುವ ಮೂಲಕ ನನಗೆ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಮಡ್ಡಿಪೇಟೆಯ ಸಾರ್ವಜನಿಕರ ಪರವಾಗಿ ಹಾಗೂ ನನ್ನ ವಯಕ್ತಿಕವಾಗಿ ಎನ್.ಎಸ್.ಬೊಸರಾಜ್ ಪೌಂಡೇಷನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಡ್ಡಿಪೇಟೆಯ ಸರ್ವಸಾರ್ವಜನಿಕರು, ಯುವಕರು, ಉಪಸ್ಥಿತರಿದ್ದರು.