ಎನ್.ಎಸ್.ಬೋಸರಾಜು ಹುಟ್ಟುಹಬ್ಬ : ಹಣ್ಣು, ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಸಿರವಾರ.ಜೂ.೬- ಜಿಲ್ಲೆಯ ಅಭಿವೃದ್ದಿಗೆ ತನ್ನದೇ ಆದ ಕೊಡುಗೆ ನೀಡಿರುವ ಅಭಿವೃದ್ಧಿ ಹರಿಕಾರ, ಚಾಣಾಕ್ಷ, ಕಾಂಗ್ರೇಸ್ ಹಿರಿಯ ಮುಖಂಡ ಎನ್.ಎಸ್.ಬೋಸರಾಜು ಅವರ ೭೫ ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವುದಕ್ಕಾಗಿ ಕ್ವಾರೇಂಟೈನ್ ಕೇಂದ್ರದಲ್ಲಿರುವವರಿಗೆ ಮಾಸ್ಕ ಸ್ಯಾನಿಟೈಸರ್, ಹಣ್ಣು ಅಂಜುಮಾಮ್ ಕಮಿಟಿಯಿಂದ ವಿತರಣೆ ಮಾಡಲಾಗುತ್ತಿದೆ ಎಂದು ಕಮಿಟಿ ಸದಸ್ಯ ಹಾಗೂ ಕಾಂಗ್ರೆಸ್ ಯುವ ಮುಖಂಡ ಹಾಜಿ ಚೌದ್ರಿ ಹೇಳಿದರು.
ಎನ್.ಎಸ್.ಬೋಸರಾಜು ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಅಂಜುಮಾನ್ ಕಮಿಟಿಯಿಂದ ನವಲಕಲ್ ಕ್ವಾರೇಂಟೈನ್ ಕೇಂದ್ರದಲ್ಲಿರುವ ರೋಗಿಗಳಿಗೆ, ಸಿಬ್ಬಂದಿ ವರ್ಗಕ್ಕೆ ಮಾಸ್ಕ್, ಹಣ್ಣು, ಸ್ಯಾನಿಟೈಸರ್ ವಿತರಣೆ ಮಾಡಿ ಮಾತನಾಡಿದ ಅವರು ಜಿಲ್ಲೆಯ ಬಹುತೇಕರಿಗೆ ರಾಜಕೀಯ ಗುರುಗಳಾಗಿದ್ದಾರೆ. ಇಂತಹ ನಾಯಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು. ತಹಸೀಲ್ದಾರ ವಿಜಯೇಂದ್ರ ಹುಲಿನಾಯಕ, ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಡಾ.ಸುನೀಲ್ ಸರೋದೆ, ಕಮಿಟಿ ಅಧ್ಯಕ್ಷ ವಲಿ ಸಾಬ್ ಗುತ್ತೆದಾರ, ಸತ್ತರಸಾಬ್ ಗುತ್ತೆದಾರ, ಇಬ್ರಾಹಿಂ ಎಲ್.ಐ.ಸಿ, ಅಜ್ಮೀರ್, ರಾಜಮಹ್ಮದ್, ಹಾಜಿ, ಹಸೇನ್ ಅಲಿ, ಮಹಿಬೂಬ್ ಸಾಬ್ ದೊಡ್ಮನೆ, ಮೌಲಸಾಬ್ ವರ್ಚಸ್ ಸೇರಿದಂತೆ ಇನ್ನಿತರರು ಇದ್ದರು.