ಎನ್.ಎಸ್.ಬೋಸರಾಜು ಫೌಂಡೇಷನ್ – ಊಟ ವಿತರಣೆ

ರಾಯಚೂರು.ಮೇ.೩೦- ಎನ್.ಎಸ್.ಬೋಸರಾಜು ಫೌಂಡೇಷನ್ ವತಿಯಿಂದ ಇಂದು ವಾರ್ಡ್ ೪ ರಿಂದ ಆಸ್ಪತ್ರೆ ಮತ್ತು ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಲಾಯಿತು.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತು ಅವರ ಸಹಾಯಕರಿಗೆ ಹಾಗೂ ಲಾಕ್ ಡೌನ್‌ನಿಂದ ತೊಂದರೆಗೆ ಗುರಿಯಾದ ನಿರಾಶ್ರಿತರಿಗೆ ಊಟ ಪೂರೈಸಲಾಯಿತು. ವಾರ್ಡ್ ೪ ರ ಸದಸ್ಯರಾದ ಬಿ.ರಮೇಶ ಅವರ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೋಸರಾಜು ಫೌಂಡೇಷನ್‌ನ ಮುಖಂಡರು ಮತ್ತು ಕಾರ್ಯಕರ್ತರು ಊಟ ಮತ್ತು ನೀರು ಜನರಿಗೆ ಮುಟ್ಟಿಸುವ ಕಾರ್ಯ ನೆರವೇರಿಸಿತು.
ಈ ಸಂದರ್ಭದಲ್ಲಿ ರವಿ ಬೋಸರಾಜು, ನಗರಸಭೆ ಸದಸ್ಯರಾದ ಜಿಂದಪ್ಪ, ಸೈಯದ್ ಶಾಲಂ, ತಿಮ್ಮಾರೆಡ್ಡಿ, ಸತ್ಯಾರೆಡ್ಡಿ, ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.