
ಪ್ರಿಯಾಂಕ್ ಖರ್ಗೆಯನ್ನು ಸೋಲಿಸಿದ : ಅಲ್ಪಸಂಖ್ಯಾತ ನಾಯಕತ್ವ ವಿರೋಧಿ
ರಾಯಚೂರು- ಕಲ್ಯಾಣ ಕರ್ನಾಟಕದ ಜನತೆಗೆ ೩೭೧(ಜೆ) ನೀಡಿ ಈ ಭಾಗದ ಅಭಿವೃದ್ಧಿ ಹರಿಕಾರ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ರವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ವಿರೋಧಿಸಿ ಅವರ ಸೋಲಿಗೆ ಕಾರಣರಾಗಿದ್ದಲ್ಲದೆ ರಾಯಚೂರು ಜಿಲ್ಲೆಯ ಮುಸ್ಲಿಂ ಸಮುದಾಯದ ಹಕ್ಕನ್ನು ಕಸಿದುಕೊಳ್ಳಲು ಎನ್.ಎಸ್.ಬೋಸರಾಜು ಮತ್ತು ರವಿಬೋಸರಾಜು ಮುಂದಾಗಿದ್ದಾರೆ ಎಂದು ನಗರದ ವಾರ್ಡ್ ನಂಬರ್ ೨೩ರ ಮುಸ್ಲಿಂ ಸಮಾಜದ ಮುಖಂಡ ನಾಸಿರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಈ ಕುರಿತಂತೆ ರಾಯಚೂರು ನಗರ ಸೇರಿ ಜಿಲ್ಲಾದಾದ್ಯಂತ ಚರ್ಚೆಗಳು ನಡೆಯುತ್ತಿದ್ದು, ಚುನಾವಣೆ ಗಿಮ್ಮಿಕ್ಕಿನ ಭಾಗವಾಗಿರುವ ಅಲ್ಪಸಂಖ್ಯಾತರಿಗೆ ೪% ಮೀಸಲಾತಿ ರದ್ದು ಮರು ಅನುಷ್ಠಾನಗೊಳಿಸುತ್ತೇವೆ ಎಂದು ಹೇಳುವ ರವಿ ಬೋಸರಾಜು, ಸಾಮಾಜಿಕ ನ್ಯಾಯದ ಪರವಾಗಿದ್ದರೆ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೇಟ್ ನೀಡುವಂತೆ ಶಿಫಾರಸು ಮಾಡಬೇಕಿತ್ತು. ಯಾಕೆ ಮಾಡುತ್ತಿಲ್ಲ ಎನ್ನುವ ಪ್ರಶ್ನೆ ನಿಸಾರ್ ಅವರು ಪತ್ರಿಕಾ ಹೇಳಿಕೆಯಲ್ಲಿ ನೀಡಿದರು.
ಈ ಹಿಂದೆ ಯುವ ಕಾಂಗ್ರೆಸ್ ಚುನಾವಣೆಯ ವೇಳೆ ಕಲ್ಯಾಣ ಕರ್ನಾಟಕ ಮೇರು ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾದ ಪ್ರಿಯಾಂಕ್ ಖರ್ಗೆ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೇಳೆ ಬೆಂಗಳೂರಿನ ವ್ಯಕ್ತಿಗೆ ಬೆಂಬಲಿಸಿದ್ದು ಯಾವ ಕಾರಣಕ್ಕೆ ಎಂಬುವುದನ್ನು ಬಹಿರಂಗಪಡಿಸಬೇಕು.
ಎಐಸಿಸಿ ಖರ್ಗೆ ಅವರ ಮುಂದೆ ಈಗ ಅಂಗಲಾಚುತ್ತಿರುವುದು ಯಾತಕ್ಕೆ ಎಂಬುವುದು ತಿಳಿಸಬೇಕು. ರಾಜಕೀಯ ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡುವ ರವಿ ಬೋಸರಾಜು ಅಂತವರು, ಈಗ ಮುಸ್ಲಿಂ ಸಮುದಾಯದ ರಾಜಕೀಯ ಹಕ್ಕುನ್ನು ಕಸಿದಿಕೊಳ್ಳವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ ಎಂದು ತಿಳಿಸಿದರು.
ಬಾಕ್ಸ್
೭೦ ದಶಕದಿಂದ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ನೀಡುತ್ತಲೇ ಬಂದಿದೆ. ವಾಮ ಮಾರ್ಗದ ಮೂಲಕ ಅಲ್ಪಸಂಖ್ಯಾತರ ಬೆಂಬಲ ಇದೆ ಎಂದು ಹೈಕಮಾಂಡ್ ಮುಂದೆ ತೋರಿಸಿಕೊಂಡು ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ. ಒಂದು ಕಡೆ ಅಲ್ಪಸಂಖ್ಯಾತರ ಮತ್ತು ಕಲ್ಯಾಣ ಕರ್ನಾಟಕ ಭಾಗದ ನಾಯಕತ ಪರ ಎಂದು ವಾದಿಸುವ ಬೋಸರಾಜು ಮತ್ತು ಟೀಮ್, ಮತ್ತೊಂದು ಕಡೆ ಅನ್ಯಾಯ ಮಾರ್ಗದ ಮೂಲಕ ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ ಎಂದು ಅಲ್ಪಸಂಖ್ಯಾತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಎರಡು ಬಾರಿ ಮುಸ್ಲಿಂ ಸಮುದಾಯದ ಮುಖಂಡ ಯಾಸೀನ್ ಸೋಲಿಗೆ ನೇರವಾಗಿ ಕಾರಣರಾಗಿದ್ದಾರೆ. ಮಾನ್ವಿ ಕ್ಷೇತ್ರದಲ್ಲಿಯೂ ಅಲ್ಪಸಂಖ್ಯಾತ ಮುಖಂಡರನ್ನು ಮೂಲೆ ಗುಂಪು ಮಾಡಿ ಈಗ ರಾಯಚೂರು ನಗರಕ್ಕೆ ಧಾವಿಸಿ ಇಲ್ಲಿನ ನಾಯಕರ ಮಧ್ಯೆ ಒಳಜಗಳ ಸೃಷ್ಟಿಸಿ ಅಧಿಕಾರಿ,ಒಗ್ಗಟ್ಟು ಕಸಿದಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಲಾಗುತ್ತಿದೆ.
ಈ ರೀತಿಯ ವಿರೋಧಿ ಅಲೆಯಿದ್ದು ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಉತ್ತರಿಸಬೇಕಿದೆ ಎಂದು ನಾಸಿರ್ ಪತ್ರಿಕಾ ಹೇಳಿಕೆಯನ್ನು ನೀಡಿದರು.