ಎನ್.ಎಸ್.ಬಿ. ಹುಟ್ಟು ಹಬ್ಬ : ಮನೆಗೆ ಒಂದು ಸಸಿ ವಿತರಣೆ


ಮಾನ್ವಿ.ಜೂ.೦೬- ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎನ್.ಎಸ್ ಭೋಸರಾಜರವರ ಹುಟ್ಟು ಹಬ್ಬದ ಅಂಗವಾಗಿ ತಾಲೂಕಿನ ಉಮಳಿಹೊಸೂರು ಗ್ರಾಮದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಶಿವರಾಜ ಉಮಳಿಹೊಸೂರು ನೇತೃತ್ವದಲ್ಲಿ ಗ್ರಾಮದಲ್ಲಿ ಸಾಂಕೇತಿಕವಾಗಿ ಮನೆ ಮನೆಗೊಂದು ೫೦ ಸಸಿಗಳ ವಿತರಣೆ ಕಾರ್ಯಕ್ರಮ ಮಾಡಲಾಯಿತು.
ನಂತರ ಮಾತನಾಡಿದ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರಯ್ಯ ಸ್ವಾಮಿ ಉಮಳಿ ಹೊಸೂರು ಅವರು, ಎನ್ ಎಸ್ ಭೋಸರಾಜ ಅವರು ರಾಜ್ಯ ಹಾಗೂ ಜಿಲ್ಲೆಯ ರಾಜಕಾರಣಿದಲ್ಲಿ ತಮ್ಮದೇ ಚಾಪನ್ನು ಮೂಡಿಸಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದಾರೆ. ಮಾನ್ವಿ ವಿಧಾನ ಸಭಾ ಕ್ಷೇತ್ರದಿಂದ ಎರಡು ಭಾರಿ ಶಾಸಕರಾಗಿ ಒಂದು ಬಾರಿ ವಿಧಾನ ಪರಿಷತ್ತು ಸದಸ್ಯರಾಗಿ ಅಭಿವೃದ್ಧಿ ಹರಿಕಾರರೆಂದು ಎನಿಸಿಕೊಂಡಿದ್ದಾರೆ. ಜಿಲ್ಲೆಯ ಇನ್ನಿಷ್ಟು ಅಭಿವೃದ್ಧಿ ಕಂಡಿರುವ ಎನ್. ಎಸ್ ಭೋಸರಾಜ ಅವರು ರಾಜಕೀಯವಾಗಿ ಹೆಚ್ಚಿನ ಅಧಿಕಾರ ಪಡೆದು ಜಿಲ್ಲೆಯೂ ಅಭಿವೃದ್ಧಿ ಕಾಣಲಿ ಇತರರಿಗೂ ಮಾದರಿಯಾಗಲಿ. ಭೋಸರಾಜು ಅವರ ಹುಟ್ಟು ಹಬ್ಬದ ದಿನದಂದು ಕಾಂಗ್ರೆಸ್ ಯುವ ಮುಖಂಡ ಶಿವರಾಜ ಉಮಳಿಹೊಸೂರು ಅವರು ಮನೆ ಮನೆಗೊಂದು ಸಾಂಕೇತಿಕವಾಗಿ ೫೦ ಸಸಿಗಳನ್ನು ವಿತರಣೆ ಮಾಡಿರುವುದು ಶ್ಲಾಘನೀಯ. ಶಿವರಾಜ ಉಮಳಿಹೊಸೂರು ಅವರು ಎನ್.ಎಸ್ ಭೋಸರಾಜ ಅವರ ಮಾರ್ಗದರ್ಶನದಿಂದ ರಾಜಕೀಯವಾಗಿ ಅಭಿವೃದ್ಧಿ ಹೊಂದಿ ಜನರ ಸೇವೆಗೆ ಮುಂದಾಗಲಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಆದೇಪ್ಪಗೌಡ, ಪಂಪಣ್ಣ ಮ್ಯಾಕಲ್, ನರಸಯ್ಯ ಮ್ಯಾಕಲ್, ಡಿ. ವಿರೇಶ, ಗ್ರಾಪಂ ಸದಸ್ಯರಾದ ಅಯ್ಯಮ್ಮ, ಯಲ್ಲಪ್ಪ ಜಿ., ಗ್ರಾಮದ ಮುಖಂಡರಾದ ಕನ್ನಾರಿಸಾಬ್, ತಿಮ್ಮಪ್ಪ ನಾಯಕ, ಮೌನೇಶ ಟೈಲರ್ ಮಾನ್ವಿ, ಹೊಳೆಯಪ್ಪ ಉಟಕನೂರು, ಆಂಜಿನೇಯ್ಯ ಶೆಟ್ಟಿ ಮಾನ್ವಿ ಸೇರಿದಂತೆ ಊರಿನ ಮುಖಂಡರು ಭಾಗವಹಿಸಿದ್ದರು.