ಎನ್.ಎಸ್.ಬಿ ಫೌಂಡೇಶನ್ ತಿಂಡಿ- ನೀರು ವಿತರಣೆ. ವಾರಿಯರ್ಸ್ ಗೆ ಪ್ರೋತ್ಸಾಹ ನೀಡಬೇಕು- ಜಿ.ಹಂಪಯ್ಯನಾಯಕ

ಸಿರವಾರ.ಮೇ೩೦- ಕೋವಿಡ್ ವೈರಸ್ ಹೆಚ್ಚಾಗುತ್ತಿರುವದರಿಂದ ಅದನ್ನು ತಡೆಯಲು ತಮ್ಮ ಜೀವನದ ಹಂಗುತೊರೆದು ಕೆಲಸ ಮಾಡುತ್ತಿರುವ ವಾರಿಯರ್ಸ್‌ಗೆ ಪ್ರೋತ್ಸಾಹ ತುಂಬುವ ಕೆಲಸ ಮಾಡಬೇಕು ಹಾಗೂ ರಾಜ್ಯಾದ್ಯಾಂತ ಏರಿಕೆ ಮಾಡಿರುವ ಲಾಕ್ ಡೌನ್ ನಿಂದಾಗಿ ಅಧಿಕಾರಿಗಳಿಗೆ, ಬಡವರಿಗೆ, ನಿರ್ಗತಿಕರಿಗೆ ಊಟಕ್ಕೆ ತೊಂದರೆಯಾಗಿದ್ದೂ ಎನ್.ಎಸ್.ಬೋಸರಾಜು ಪೌಂಡೇಷನ್ ವತಿಯಿಂದ ಬೆಳಗ್ಗೆ ತಿಂಡಿ ನೀಡುವ ಮೂಲಕ ನೇರವಾಗುತ್ತಿದೆವೆ ಎಂದು ಮಾಜಿ ಶಾಸಕ ಜಿ.ಹಂಪಯ್ಯನಾಯಕ ಹೇಳಿದರು. ಎನ್.ಎಸ್.ಬೋಸರಾಜು ಫೌಂಡೇಶನ್( ರಿ ) ವತಿಯಿಂದ ಸಿರವಾರ ತಾಲೂಕ ಬ್ಲಾಕ್ ಕಾಂಗ್ರಸ್ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಕೋವಿಡ್- ೧೯ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ,ಕಡುಬಡವರಿಗೆ,ಪೋಲಿಸ್, ಜೆಸ್ಕಾಂ ಸಿಬ್ಬಂದಿಗಳಿಗೆ,ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಗೆ, ಪರ್ತಕರ್ತರಿಗೆ ತಿಂಡಿಯನು ವಿತರಿಸಿ ನಂತರ ಮಾತನಾಡಿದ ಅವರು ಅನ್ನ ಸಂತರ್ಪಣೆ ಮಾಡುವುದರಿಂದ ಕಡುಬಡವರಿಗೆ,ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ,ತಮ್ಮ ಜೀವನವನ್ನು ಲೆಕ್ಕ ಸದೆ ಹಗಲು- ರಾತ್ರಿ ದುಡಿಯುತ್ತಿರುವ ಆಸ್ಪತ್ರೆಯ ಸಿಬ್ಬಂದಿಗಳಿಗೆ,ಇನ್ನೂ ಉಳಿದ ಇಲಾಖೆಯ ಅಧಿಕಾರಿಗಳಿಗೆ, ಪತ್ರಕರ್ತರಿಗೆ, ತುಂಬಾ ಅನುಕೂಲವಾಗಲಿದೆ. ಸರ್ಕಾರದ ನಿಯಮಗಳನ್ನು ಎಲ್ಲಾರೂ ಪಾಲನೆ ಮಾಡುವ ಮೂಲಕ ಜೀವವನ್ನು ಉಳಿಸಿಕೊಂಡು ಜೀವನ ಸಾಗಿಸೋಣ. ಈಗಾಗಲೆ ನಮ್ಮ ಕಾಂಗ್ರೇಸ್ ಯುವ ಘಟಕಕ್ಕೆ ಅರೋಗ್ಯ ತಪಾಸಣೆ ಕೀಟ್ ನಿಡಲಾಗಿತು ಅವರು ವಾರ್ಡಗಳಲ್ಲಿ ಸಾರ್ವಜನಿಕರ ಆರೋಗ್ಯ ಪರೀಕ್ಷೆ ಮಾಡಿ ದೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮುಂದೆ ವಾರ್ಡಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುವುದು ಎಲ್ಲಾರೂ ಸರ್ಕಾರ ನಿಯಮ ಪಾಲನೆ ಮಾಡೊಣ, ಸಾಮಾಜಿಕ ಅಂತರ ಕಾಪಾಡೊಣ ಎಂದರು. ಸಿರವಾರ ತಾಲೂಕು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಚುಕ್ಕಿ ಶಿವಕುಮಾರ,ತಾ.ಪಂ ಮಾಜಿ ಅದ್ಯಕ್ಷ ದಾನನಗೌಡ, ವಿಎಸ್ ಎಸ್ ಎನ್ ಸದಸ್ಯ ರಮೇಶ ದರ್ಶನಕರ್, ಶಿವಶರಣ ಸಾಹುಕಾರ ಅರಕೇರಿ, ಜಿ.ವಿರೇಶ,ಡಾ.ಪರಿಮಳಾಮೈತ್ರಿ, ಪ.ಪಂಚಾಯತಿ ಸದಸ್ಯ ನಾಗರಾಜಚಿನ್ನಾನ್, ರಾಜಮಹ್ಮದ, ಮಾರ್ಕಪ್ಪ, ಹಸನ್ ಅಲಿಸಾಬ್, ರೊರಮಹಿಬೂಬ್ ಸಾಬ್ ದೊಡ್ಮನೆ,ಸೂರಿದುರುಗಣ್ಣನಾಯಕ, ವೆಂಕಟೇಶ ದೊರೆ, ಹಾಜಿಚೌದ್ರಿ, ಯುವ ಘಟಕದ ಅದ್ಯಕ್ಷ ಅಂಬು,ವಿರೇಶಗಡ್ಲ್, ಮಲ್ಲಿಕಾರ್ಜುನ,ರಫಿ,ಭಿಮ್ಮ, ಅಪ್ಸರ್,ಗುರುರಾಜ,ವೆಂಕಟೇಶ ಮಾಸಕ್ ಸೇರಿದಂತೆ ಇನ್ನಿತರರು ಇದ್ದರು.