ಎನ್.ಎಸ್.ಎಸ್ ಶಿಬಿರ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಸಹಾಯ

ಹುಮನಾಬಾದ :ಮೇ.25: ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ವಿಧ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ವಿಜ್ಞಾನ ಮತ್ತು ವೈಜ್ಞಾನಿಕ ಆಸಕ್ತಿ ಬೆಳೆಸಲು ಸಹಾಯವಾಗುತ್ತದೆ ಎಂದು. ಬೀದರ್ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ. ರವೀಂದ್ರನಾಥ್ ಗಬಾಡೆ ತಾಲೂಕಿನ ಹಳ್ಳಿಖೇಡ (ಬಿ) ವಿಶೇಷ ಶಿಬಿರ ಸಿಮಿ ನಾಗನಾಥ್ ದೇವಾಲಯ ಆವರಣದಲ್ಲಿ ಬಸವತೀರ್ಥ ವಿದ್ಯಾಪೀಠ ಪದವಿ ಮಹಾವಿಧ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ರಾಷ್ಟ್ರಿಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.

ಶಿಬಿರಗಳಲ್ಲಿ ದೇಶಭಕ್ತಿ ಭಾವನೆ ಅರಿವು ಒಡಮೂಡಿಸಲು ಹಾಗೂ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಲ್ಲಿ ವಿಶೇಷ ಉಪನ್ಯಾಸಕರಿಂದ ಜಾಗೃತಿ ಒಡ ಮೂಡಿಸಲಾಗುವುದು ಎಂದರು. ಮಹಾತ್ಮ ಗಾಂಧಿಯವರ ಕನಸು ನನಸು ಮಾಡಲು ದೇಶದಲ್ಲಿ 1969 ಸಪ್ಟೆಂಬರ್ 24ರಂದು ರಾಷ್ಟ್ರಿಯ ಸೇವಾ ಯೋಜನೆ ಆರಂಭಿಸಲಾಗಿದೆ. ಬೀದರ ವಿಶ್ವವಿದ್ಯಾಲಯ ಆರಂಭವಾದ ಮೇಲೆ 2023-24 ನೇ ಸಾಲಿನ ಜಿಲ್ಲೆಯಲ್ಲಿ 45 ರಾಷ್ಟ್ರಿಯ ಸೇವಾ ಯೋಜನೆ ಘಟಕಗಳು ಮಂಜೂರು ಮಾಡಲಾಗಿದೆ. ಬೀದರ ವಿಶ್ವವಿದ್ಯಾಲಯ ರಾಷ್ಟ್ರಿ ಸೇವಾ ಯೋಜನೆಯ ಶಿಬಿರ ಈ ಕಾಲೇಜಿನಿಂದಲೆ ಚಾಲನೆ ನೀಡಲಾಗಿದೆ ಎಂದರು. ಶೀಘ್ರದಲ್ಲಿ ಬೀದರ ಜಿಲ್ಲೆಯಲ್ಲಿ ಮಂಜೂರಾದ ದತ್ತು ಗ್ರಾಮಗಳಲ್ಲಿ ಶಿಬಿರಗಳು ಆರಂಭಿಸಲಾಗುತ್ತದೆ ಎಂದು ರವೀಂದ್ರನಾಥ್ ಗಬಾಡೆ ತಿಳಿಸಿದರು. ಸಂಸ್ಥೆಯ ಕಾರ್ಯಧ್ಯಕ್ಷರಾದ ಕೇಶವರಾವ ತಳಘಟಕರ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟು ಅಧ್ಯಯನ ಮಾಡಿದರೆ ಗುರಿ ಮುಟ್ಟಲು ಸಹಾಯವಾಗುತ್ತದೆ. ಈ ಶಿಬಿರ ವಿಧ್ಯಾರ್ಥಿಗಳಲ್ಲಿ ನಾಯಕತ್ವಗುಣ ಬೆಳೆಸಲು ಸಹಾಯವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಬಸವತೀರ್ಥ ವಿದ್ಯಾಪೀಠ ಸಂಸ್ಥೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ನಮ್ಮ ಕಲೆ ಸಂಸ್ಕøತಿ ಉಳಿಸಿ ಬೆಳೆಸಲ ಈ ಶಿಬಿರ ವರದಾನ ವಾಗಿದೆ ಇದರ ಸದುಉಪಯೋಗ ಪಡೆದುಕೊಳ್ಳಲು ಕರೆ ನೀಡಿದರು. ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ ರಾಷ್ಟ್ರಿಯ ಸೇವಾ ಯೋಜನೆ ಶಿಬಿರ ಪರಿಸರ ಸಂರಕ್ಷಣೆಗೆ ಸಹಾಯವಾಗಿದೆ. ದತ್ತು ಗ್ರಾಮಗಳಲ್ಲಿ ಕಡ್ಡಾಯವಾಗಿ ರಸ್ತೆ ಬದಿಗಳಲ್ಲಿ ಮರ ಗಿಡ ಬೆಳೆಸಲು ತಿಳಿಸಿದರು. ಪರಿಸರ ಅಸಮತೋಲದಿಂದ ಜೀವ ವೈವಿಧ್ಯತೆ ಮೇಲೆ ಬಾರಿ ಪರಿಣಾಮ ಬೀರುತ್ತಿದೆ ಪರಿಸರ ಸಮತೋಲನ ಕಾಪಾಡಿದರೆ ನಮಗೆ ಉಳಿಗಾಲ ವಿದೆ ಎಂದರು. ಸುಮನ ಬೇಹೆಂಜೀ ಶಿಬಿರದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಸೋಮಯ್ಯ ಹಿರೇಮಠ,ಅಡಳಿತಾಧಿಕಾರಿ ಗುಂಡಯ್ಯ ತೀರ್ಥ, ರಾಷ್ಟ್ರಿ ಸೇವಾ ಯೋಜನೆ ಅಧಿಕಾರಿಗಳಾದ ಬಸವರಾಜ್ ಝರಕುಂಟೆ. ರಮೇಶ್ ಕಾಳೆ, ಚಂದ್ರಕಾಂತ ಬಿರಾದರ, ರಮೇಶ ಮಹೇಂದ್ರಕರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಮಸ್ತಾನ ಪಟೇಲ ಪ್ರಾಸ್ಥಾವಿಕ ಮಾತನಾಡಿ ಸ್ವಾಗತಿಸಿದರು. ನರೇಂದ್ರ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.