ಎನ್.ಎಸ್.ಎಸ್.ಶಿಬಿರದ ಸಮಾರೋಪ

ಹುಮನಾಬಾದ :ಜೂ.18:ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪದವಿ ಮಹಾವಿದ್ಯಾಲಯದ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ 2022-23ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕೇಶವರಾವ ತಳಘಟಕರ್ ಕಾರ್ಯಾಧ್ಯಕ್ಷರು ಬಸವತೀರ್ಥ ವಿದ್ಯಾಪೀಠ ಕೇಂದ್ರ ಸಮಿತಿ ಹುಮನಾಬಾದ ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವಲ್ಲಿ ಎನ್.ಎಸ್.ಎಸ್.ಶಿಬೀರ ಪ್ರಮುಖಾ ಪಾತ್ರ ವಹಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಇಂತಹ ಶಿಬೀರಗಳಲ್ಲಿ ಪಾಲ್ಗೊಂಡು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಶ್ರೀ ಗುಂಡಯ್ಯಾ ತೀರ್ಥಾ ಆಡಳಿತಾಧಿಕಾರಿಗಳು ಬಸವತೀರ್ಥ ವಿದ್ಯಾಪೀಠ ಹಳ್ಳಿಖೇಡ(ಬಿ) ಇವರು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಕಾರ, ಸೇವಾ ಮನೋಭಾವ ಬೆಳೆಸುವಲ್ಲಿ ಎನ್.ಎಸ್.ಎಸ್. ಸಹಕಾರಿಯಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಮಾತನಾಡಿದ ಬಸವತೀರ್ಥ ವಿದ್ಯಾಪೀಠ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಸ್ತಾನ ಪಟೇಲ್ ಇವರು ವಿದ್ಯಾರ್ಥಿಗಳು ಏಳು ದಿನದ ಶ್ರಮದ ಅನುಭವ ಪಡೆದು ಇಡಿ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ತಿಳಿಸಿದರು. ಅತಿಥಿಗಳಾಗಿ ಶ್ರೀ ಚಂದ್ರಕಾಂತ ಬಿರಾದಾರ, ಶ್ರೀಮತಿ ವಿದ್ಯಾವತಿ ಜಿ ತೀರ್ಥಾ, ಕಾರ್ಯಕ್ರಮದ ಅಧಿಕಾರಿಗಳಾದ ಶ್ರೀ ಬಸವರಾಜ ಝರಕುಂಟೆ, ಶ್ರೀ ರಮೇಶ ಕಾಳೆ, ಶ್ರೀಮತಿ ಡಾ. ಕರುಣಾ ಎನ್ ತಂಬಾಕೆ, ಶ್ರೀಮತಿ ಸಪ್ನಾ ತೀರ್ಥಾ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶ್ರೀ ನರೇಂದ್ರ ಪಾಟೀಲ ಸ್ವಾಗತಿಸಿದರು, ಕುಮಾರಿ ಭಾಗಿರಥಿ ನಿರೂಪಿಸಿದರು, ಶ್ರೀ ಬಸವರಾಜ ಝರಕುಂಟೆ ವಂದಿಸಿದರು.